Skip to main content
Secret of Kannada ಕನ್ನಡದ ಗುಟ್ಟು Kannadada Guttu

Secret of Kannada ಕನ್ನಡದ ಗುಟ್ಟು Kannadada Guttu

By Vishweshwar Dixit

Explore varied topics to unlock the secrets of Kannada Language
ಕನ್ನಡದ ಗುಟ್ಟನ್ನು ರಟ್ಟು ಮಾಡುವ ವಿವಿಧ ವಿಷಯಗಳ ವಿಚಾರ
Read at kannadakali.com
Watch at youtube.com/channel/UCCON6n4lEgj6NsPqCLZdDSw
Kannada Kali : Kannadada Guttu
Available on
Apple Podcasts Logo
Google Podcasts Logo
Overcast Logo
Pocket Casts Logo
RadioPublic Logo
Spotify Logo
Currently playing episode

Gandhi: Part 2 - Achievements ಗಾಂಧಿ : ಭಾಗ ೨ - ಸಾಧನೆ

Secret of Kannada ಕನ್ನಡದ ಗುಟ್ಟು Kannadada GuttuApr 21, 2024

00:00
13:46
Gandhi: Part 2 - Achievements ಗಾಂಧಿ : ಭಾಗ ೨ - ಸಾಧನೆ

Gandhi: Part 2 - Achievements ಗಾಂಧಿ : ಭಾಗ ೨ - ಸಾಧನೆ

👍 Like it? ...... ⁠⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠⁠

👁️ ⁠⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠⁠ 

📧 ⁠⁠⁠⁠⁠⁠⁠⁠⁠⁠⁠Subscribe to our newsletter

ಸಾಮಾನ್ಯ ಮಾನವನಾಗಿ ಹುಟ್ಟಿದ ಮೋಹನದಾಸ ರಾಷ್ಟ್ರಪಿತ, ಬಾಪು, ಗಾಂಧಿ ತಾತ, ಕೊನೆಗೆ ಮಹಾತ್ಮನಾದ. ಈತ ಮಾಡಿದ್ದಾದರೂ ಏನು? ಮಹಾತ್ಮ ಗಾಂಧಿ ಮೂರು ಕಂತುಗಳಲ್ಲಿ: ಭಾಗ ೧ರಲ್ಲಿ ಗಾಂಧೀ ಜಿವನದ ಸಮಗ್ರ ಸಂಕ್ಷಿಪ್ತ ನೋಟ ಭಾಗ ೨ರಲ್ಲಿ ಗಾಂಧಿ ಸಾಧಿಸಿದ್ದಾದರೂ ಏನು ಎಂದು ತಿಳಿದುಕೊಳ್ಳುವ ಪ್ರಯತ್ನ ಈ ಲೇಖನ ಕನ್ನಡ ಕಲಿ ಮ್ಯಗ್ಝೀನ್‌ ತುತ್ತೂರಿಯ September ಮತ್ತು ಡಿಸೆಂಬರ ೨೦೦೭ರ ಸಂಚಿಕೆಗಳಲ್ಲಿ ಮೊದಲು ಪ್ರಕಟವಾಗಿತ್ತು ಭಾಗ ೩ರಲ್ಲಿ ಈ ಲೇಖನಕ್ಕೆ ಬಂದ ಕೆಲವು ಪ್ರತಿಕ್ರಿಯೆಗಳು - ಗಾಂಧಿ ಸಾಧಿಸಿದ್ದಾದರೂ ಏನು? ಗಾಂಧಿಯನ್ನು ಕೆಲವರು ದೇವತೆಯಂತೆ ಪೂಜಿಸುವವರಾದರೆ ಇನ್ನು ಹಲವರು ಕ್ಷುಲ್ಲಕ ಕಾರಣಗಳಿಗಾಗಿ ಅವರ ಎಲ್ಲ ತತ್ವಗಳನ್ನು ಅನಾದರಣೆಯಿಂದ ನೋಡುವವರಿದ್ದಾರೆ. ಈ ಇಬ್ಬರೂ ಗಾಂಧಿಯನ್ನು ಅರಿತುಕೊಂಡಿಲ್ಲ. - ಇದೊ ನೋಡಿ, ನಿಜವಾಗಿಯೂ ಒಂದು ಗಾಂಧಿ ಗುಡಿಯನ್ನು ಕಟ್ಟಿದ್ದಾರೆ. ತಮಿಳುನಾಡಿನ ಎರೋಡು ಜಿಲ್ಲೆಯ ಸಲಂಗಪಾಳಯದಲ್ಲಿ ಪ್ರತಿದಿನ ಮುಂಜಾನೆ ಮತ್ತು ಸಾಯಂಕಾಲ ಗಾಂಧಿಗೆ ಪೂಜೆ, ಆರತಿ, ಮತ್ತು ಪ್ರಸಾದ. ಇದ್ದ ಕಡವರನ್ನೆಲ್ಲ ಇಲ್ಲೈ ಇಲ್ಲೈ ಎಂದು ಬೀದಿಗೆ ದಬ್ಬಿ, ಒಲ್ಲದವನಿಗೆ ಪೂಜೆ ಮಾಡುವ ಈ ಸಲ್ಲದ ಪರಿ ಎಂಥದು? ಗಾಂಧಿ ಇನ್ನೂ ಬದುಕಿದ್ದರೆ ಇದನ್ನು ಕಂಡು ತಾವೇ ನೇಣು ಹಾಕಿಕೊಳ್ಳುತ್ತಿದ್ದರೋ ಏನೋ! ಗಾಂಧಿಯ ಜೀವನಕ್ಕೆ, ತತ್ವಗಳಿಗೆ, ನಡತೆಗೆ, ಮತ್ತು ಆದರ್ಶಗಳಿಗೆ ಇದೊಂದು ಅಪಚಾರ. "ಗಾಂಧಿಯ ಜೀವನದ ಆದರ್ಶಗಳು ನಮಗೆ ಅನ್ವಯಿಸುವುದಿಲ್ಲ. ಯಾಕೆಂದರೆ ಗಾಂಧಿ ದೇವತೆ, ನಾವು ಹುಲು ಮಾನವರು" ಎಂದು ಸೋಲನ್ನು ಒಪ್ಪಿಕೊಳ್ಳುತ್ತ, ಇಲ್ಲವೆ ಚಾಣಾಕ್ಷತೆಯಿಂದ, ಮನುಷ್ಯತ್ವದ ಜವಾಬುದಾರಿಯಿಂದ ತಪ್ಪಿಸಿಕೊಳ್ಳುವ ಯತ್ನವೆ ಗಾಂಧಿಯನ್ನು ದೈವೀಕರಿಸುವುದು. ಗಾಂಧಿ ಈಗ ಹಳಸಿದ ಹಾಲು. ಬೆಕ್ಕು ಮುಟ್ಟದು. ಚೆಲ್ಲಲು ಆಗದು. ಅದಕ್ಕೆ ಗುಡಿ ಎನ್ನುವ ತಂಗಳು ಪೆಟ್ಟಿಗೆಯಲ್ಲಿ ಕೂಡಿ ಹಾಕಿದರಾಯಿತು! ರಾಮ ಬಸವ ಬುದ್ಧರ ಗತಿಯೂ ಇದೆ ಆಗಿದೆ. ಸಹಸ್ರಮಾನಗಳಿಂದ ನಡೆದುಕೊಂಡ ಬಂದ ಭಾರತೀಯ ಪದ್ಧತಿಯೆ ಇದು! ಗಾಂಧಿಗೆ ನೊಬೆಲ್ ಪಾರಿತೋಷಕ ಕೊಡಲಿಲ್ಲ ಎಂದು ಹಲವರು ಹಂಬಲಿಸಿ ಕೊರಗುತ್ತಿದ್ದರೆ, ನೋಬೆಲ್ ಕಮಿಟಿ ತಮ್ಮ ತಪ್ಪಿಗಾಗಿ ಒಳಗೇ ತಳಮಳಿಸುತ್ತಿದೆಯೆ? ಆಕಸ್ಮಾತ್ತಾಗಿ ತಪ್ಪಾಗಿದೆ ಎನ್ನುವ ಹೇಳಿಕೆ ಬಂದರೂ ನಂಬಲು ಅಸಾಧ್ಯ. ಗಾಂಧಿಯ ಹೆಸರು, ಇನ್ನೂ ಜೀವಂತವಾಗಿ ಇದ್ದಾಗ, ಒಮ್ಮೆ ಅಂತೂ ಸಾಯುವ ಕೆಲ ದಿನಗಳ ಮುಂಚೆ, ಐದು ಬಾರಿ ನೊಬೆಲ್ ಕಮಿಟಿಯ ಮುಂದೆ ಬಂದಿತ್ತು. ಪ್ರತಿ ಬಾರಿಯೂ, "ಗಾಂಧಿ ನಿಜವಾದ ರಾಜಕಾರಣಿಯೂ ಅಲ್ಲ, ಸಮಾಜ ಸೇವಕನೂ ಅಲ್ಲ" ಎಂದು ಪ್ರಶಸ್ತಿಯನ್ನು ಕಮಿಟಿ ನಿರಾಕರಿಸಿತು. ಕಮಿಟಿಯ ಆ ನಿಲುವಿನಲ್ಲಿ ಈಗಲೂ ಬದಲಾವಣೆ ಆಗಿಲ್ಲ. ಆದರೂ ಏನು ಪ್ರಯೋಜನ? ಸತ್ತವರಿಗೆ ನೋಬೆಲ್ ಪ್ರಶಸ್ತಿ ಕೊಡುವುದಂತೂ ಇಲ್ಲ. ಕೊಟ್ಟರೂ ಈಗ ಅದಕ್ಕೆ ಏನು ಬೆಲೆ? ೧೯೪೮ರಲ್ಲಿ ಗಾಂಧಿ ತೀರಿದ ನಂತರ ನೊಬೆಲ್ ಕಮಿಟಿ ಆ ವರ್ಷ "ಅರ್ಹರಾದವರು ಯಾರೂ ಬದುಕಿಲ್ಲ" ಎಂದು ಯಾರಿಗೂ ಪ್ರಶಸ್ತಿಯನ್ನು ಕೊಡಲಿಲ್ಲ. ಅದೆ ಅವರು ಗಾಂಧಿಗೆ ತೋರಿದ ಮರ್ಯಾದೆ ಎಂದುಕೊಂಡಿದ್ದಾರೆ. ಬೇರೆಯವರಿಗೆ ಪ್ರಶಸ್ತಿ ಕೊಡದೆ ಮಾಡಿದ ಅವಮರ್ಯಾದೆ ತಮಗೆ ಹೇಗೆ ಮರ್ಯಾದೆ ಆಗುತ್ತದೆ ಎಂದು ಗಾಂಧಿಯೆ ಇವರನ್ನು ಪ್ರಶ್ನಿಸುತ್ತಿದ್ದರು. ನೆನಪಿಸಿಕೊಳ್ಳಿ, ರಿಚರ್ಡ್ ಅಟೆನ್‌ಬರೋಗೆ ಗಾಂಧಿ ಚಿತ್ರ ನಿರ್ಮಿಸಲು ಸ್ಫೂರ್ತಿ ಕೊಟ್ಟ ಗಾಂಧಿಯ ಈ ನುಡಿ, "ಬೇರೆಯವರ ಅವಮಾನದಲ್ಲಿ ತನ್ನ ಸನ್ಮಾನ ಇದೆ ಎನ್ನುವ ಮನುಷ್ಯನ ನಡತೆ ನನಗೆ ಒಂದು ಬಿಡಿಸದ ರಹಸ್ಯ." ಇನ್ನು ಮೇಲೆ, ನೊಬೆಲ್ ಕಮಿಟಿ ತನ್ನ ಸಂವಿಧಾನವನ್ನು ಬದಲಿಸಿ ಗಾಂಧಿಗೆ ಮರಣೋತ್ತರ ಪ್ರಶಸ್ತಿಯನ್ನು ಕೊಟ್ಟರೆ ಅದಕ್ಕಿಂತ ಹೆಚ್ಚಿನ ಅವಮಾನ ಗಾಂಧಿಗೆ ಇಲ್ಲ, ನೊಬೆಲ್ ಕಮಿಟಿಗೆ ಇಲ್ಲ. ಎಲ್ಲ ಪ್ರಶಸ್ತಿಗಳನ್ನು ಮೀರಿ ನಿಂತ ಗಾಂಧಿಗೆ ಇಂಥ ಯಾವ ಮರ್ಯಾದೆಗಳೂ ಬೇಕಿಲ್ಲ. ಪ್ರಶಸ್ತಿ ಕೊಟ್ಟಿದ್ದರೆ ಅದರ ಘನತೆ ಹೆಚ್ಚು,ತ್ತಿತ್ತು. ಅದಕ್ಕೆ, ನೊಬೆಲ್ ಕಮಿಟಿ, ಒಂದು ರೀತಿಯಿಂದ, ಪ್ರಶಸ್ತಿ ಕೊಟ್ಟು ಗಾಂಧಿಗೆ ಅವಮಾನ ಮಾಡಲಿಲ್ಲವಲ್ಲ ಎಂದುಕೊಳ್ಳಬೇಕು. ಗಾಂಧಿಯನ್ನು ನಿಜವಾಗಿ ಅರ್ಥ ಮಾಡಿಕೊಂಡು ಇದಕ್ಕಾಗಿ ಕೊರಗುವುದನ್ನು ನಿಲ್ಲಿಸಬೇಕು. ಗಾಂಧಿಯ ಸಾಧನೆ ಆದರ್ಶಗಳ ತಪ್ಪು ತಿಳುವಳಿಕೆಗಳೆ ಈ ಆಭಾಸಗಳಿಗೆ ಕಾರಣ. ಗಾಂಧಿಯನ್ನು ತಿಳಿದುಕೊಂಡವರು ಇದ್ದಾರೆ. "ಬದಲಾವಣೆಗೆ ಅಹಿಂಸಾತ್ಮಕವಾದ ಹೊಸ ಮಾರ್ಗವನ್ನೆ ತೊರಿಸಿಕೊಟ್ಟ ಗಾಂಧಿಗೆ ಸಲ್ಲಿಸಿದ ಮನ್ನಣೆ ... ಪೂರ್ತಿ ಲೇಖನವನ್ನು ಜಾಲತಾಣದಲ್ಲಿ ಓದಿ -- 00:00.0 ಪೀಠಿಕೆ 01:52.8 ಗಾಂಧಿಗೊಂದು ಗುಡಿ! 03:11.7 ಗಾಂಧಿಗಿಲ್ಲ ನೊಬೆಲ್‌ ಪಾರಿತೋಷಕ! 05:21.7 ಗಾಂಧಿಯನ್ನು ತಿಳಿದವರು 05:30.7 ಬದಲಾವಣೆಗೆ ಅಹಿಂಸಾತ್ಮಕವಾದ ಹೊಸ ಮಾರ್ಗ 05:45.0 ಗಾಂಧಿಯನ್ನು ಕಡೆಗಣಿಸುವುದೆ ನಮ್ಮ ವಿಪತ್ತು 05:56.8 ಗಾಂಧಿ ಎಂಟು ಘೋರ ಸಂಘರ್ಷಗಳ ಪುರೋಗಾಮಿ 06:47.2 ಗಾಂಧೀಜಿ ಇಂದಿಗೂ ಪ್ರಸ್ತುತ 07:01.2 ಸತ್ಯ ಅಹಿಂಸೆಗಳ ಭದ್ರ ನೆಲೆಗಟ್ಟು 07:18.1 ನೈತಿಕ, ಆಧ್ಯಾತ್ಮಿಕ, ಸದಭಿರುಚಿಯ ಅಡಿಪಾಯ 07:42.0 ದೇಶಪ್ರೇಮ, ಆತ್ಮಾಭಿಮಾನ, ಅಭಯದ ಕಿಡಿ 08:13.6 ಸ್ವಾತಂತ್ರ್ಯಕ್ಕೆ ಅರ್ಥ 08:38.6 ಸ್ವದೇಶಿ, ಸ್ವಾವಲಂಬನೆ, ಶರೀರ ಶ್ರಮ, ವೃತ್ತಿ ಗೌರವ 09:08.8 ಜನಸೇವೆಯೇ ಜನಾರ್ದನ ಸೇವೆ 00:34.0 ಸರ್ವ ಧರ್ಮ ಸಮಭಾವ 09:46.0 ಭರತಖಂಡದ ಸ್ವಾತಂತ್ರ್ಯದ ರೂವಾರಿ - ಇತರರಿಗೆ ಮಾದರಿ 10:00.3 ದ್ವೇಷ ದಹಕ, ಪ್ರೇಮ ಪ್ರವರ್ಧಕ 10:10.3 ಶ್ರೀಸಾಮಾನ್ಯ ತನ್ನನ್ನೇ ತಾನು ಕಡೆದು ಊರ್ಜಿತಗೊಂಡು ವಿಶ್ವಮಾನವನಾದುದು 10:31.7 ಹಿಂಸೆ, ಯುದ್ಧಗಳು ಮಾರ್ಗವಲ್ಲ; ಹಿಂಜರಿಯುವದು / ಶರಣಗತರಾಗುವದು ಉಚಿತವಲ್ಲ 11:35.5 "ನನ್ನ ಜೀವನವೆ ನನ್ನ ಸಂದೇಶ" 12:06.5 ಆಧಾರಗಳು 12.25 ಕೃತಜ್ಞತೆ, ಸಂಪರ್ಕ

Apr 21, 202413:46
Gandhi: Part 1 - Life ಗಾಂಧಿ : ಭಾಗ ೧ - ಜೀವನ

Gandhi: Part 1 - Life ಗಾಂಧಿ : ಭಾಗ ೧ - ಜೀವನ

👍 Like it? ...... ⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠

👁️ ⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠ 

📧 ⁠⁠⁠⁠⁠⁠⁠⁠⁠⁠Subscribe to our newsletter⁠⁠

ಮಹಾತ್ಮ ಗಾಂಧಿ : ಮೂರು ಕಂತುಗಳಲ್ಲಿ: ಭಾಗ ೧ರಲ್ಲಿ ಗಾಂಧೀ ಜಿವನದ ಸಮಗ್ರ ಸಂಕ್ಷಿಪ್ತ ನೋಟ ಭಾಗ ೨ರಲ್ಲಿ ಗಾಂಧಿ ಸಾಧಿಸಿದ್ದಾದರೂ ಏನು ಎಂದು ತಿಳಿದುಕೊಳ್ಳುವ ಪ್ರಯತ್ನ ಈ ಲೇಖನ ಕನ್ನಡ ಕಲಿ ಮ್ಯಗ್ಝೀನ್‌ ತುತ್ತೂರಿಯ September ಮತ್ತು ಡಿಸೆಂಬರ ೨೦೦೭ರ ಸಂಚಿಕೆಗಳಲ್ಲಿ ಮೊದಲು ಪ್ರಕಟವಾಗಿತ್ತು ಭಾಗ ೩ರಲ್ಲಿ ಈ ಲೇಖನಕ್ಕೆ ಬಂದ ಕೆಲವು ಪ್ರತಿಕ್ರಿಯೆಗಳು ಪೂರಕ ಓದಿಗೆ: ಭಾಗ ೨ - ಗಾಂಧಿ ಸಾಧಿಸಿದ್ದಾದರೂ ಏನು? ಹುಟ್ಟು : ಅಕ್ಟೋಬರ್ ೨, ೧೮೬೯ ಕೆಟಲ್ ಪದದ ಸ್ಪೆಲಿಂಗ್ ಬಾರದು; ಪಕ್ಕದ ಹುಡುಗನಿಂದ ಕಾಪಿ ಹೊಡೆಯುವಂತೆ ಶಿಕ್ಷಕರು ಸನ್ನೆ ಮಾಡುತ್ತಾರೆ; ಆದರೆ ಮೋಹನದಾಸ್ ತನಗೆ ಬಂದಂತೆ ತಪ್ಪಾಗಿ ಬರೆಯುತ್ತಾನೆ. ಈ ಪ್ರಾಮಾಣಿಕ ಮೂರ್ತಿಯ ಮೇಲೆ ಶಿಕ್ಷಕರಿಗೆ ಎಲ್ಲಿಲ್ಲದ ಸಿಟ್ಟು. ಆವರಿಗೇನು ಗೊತ್ತು ಕರಮಚಂದರ ಮಗ ಈ ಮೋಹನದಾಸ ಮುಂದೆ ಮಹಾತ್ಮ ಗಾಂಧಿ ಆಗುತ್ತಾನೆ ಎಂದು! ಭಾರತ ದೇಶಕ್ಕೆ ಸ್ವತಂತ್ರವನ್ನು ದೊರಕಿಸಿಕೊಟ್ಟು ರಾಷ್ಟ್ರಪಿತ, ಎಲ್ಲರಿಗೂ ನೈತಿಕ ನೆಲೆಯನ್ನು ತೋರಿಸಿ ಬಾಪು, ಮಕ್ಕಳಿಗೆಲ್ಲ ಪ್ರಿಯನಾಗಿ ಗಾಂಧಿ ತಾತ ಆದವ ಈ ಮೋಹನ. ಗುಜರಾತ ರಾಜ್ಯದ ಪೋರಬಂದರಿನಲ್ಲಿ ಅಕ್ಟೊಬರ್ ೨, ೧೮೬೯ರಂದು ಜನನ. ಲಂಡನ್ನಿನಲ್ಲಿ ವಕೀಲಿಗೆ ಓದು. ಮುಂಬಯಿಯಲ್ಲಿ ವಕೀಲಿ ವೃತ್ತಿ ಆರಂಭ, ಹಲ ಬಗೆಯ ನಿಷ್ಫಲ ಪ್ರಯತ್ನ. ದಕ್ಷಿಣ ಆಫ್ರಿಕಾಕ್ಕೆ ಕೆಲಸದ ನಿಮಿತ್ತ ಪಯಣ. ಅಲ್ಲಿನ ಸರಕಾರದ ವರ್ಣಭೇದ ನೀತಿಯ ಕಹಿ ಊಟದ ಸ್ವಾಗತ. ಅಲ್ಲಿ ಕಂಡದ್ದು ಭಾರತೀಯರ ರಾಜಕೀಯ ಹಕ್ಕು ಮತ್ತು ಸ್ವಾತಂತ್ರ್ಯಗಳ ದಿಗಿಲುಗೊಳಿಸುವಂತಹ ನಿರಾಕರಣೆ. ಮೂಲ ಹಕ್ಕುಗಳನ್ನು ದೊರಕಿಸಿಕೊಳ್ಳಲು ಚಳುವಳಿ ಆರಂಭ. ಇಪ್ಪತ್ತು ವರುಷ ದಕ್ಷಿಣ ಆಫ್ರಿಕದಲ್ಲಿ ವಾಸ; ಪೋಲಿಸರಿಂದ ಹೊಡೆತ, ಒದೆತ; ಅನೇಕ ಬಾರಿ ಜೈಲು ವಾಸ. ಸತ್ಯ ತಮ್ಮದು ಎಂದು ನಂಬಿ ಛಲ ಬಿಡದ ಗಾಂಧಿ ಅಹಿಂಸಾ ಮಾರ್ಗವನ್ನು ಹಿಡಿದರು. ಸಹನಶೀಲ ಪ್ರತಿರೋಧ (ಪ್ಯಾಸಿವ್ ರಸಿಸ್ಟನ್ಸ್) ಮತ್ತು ಸವಿನಯ ಕಾನೂನು ಭಂಗ (ಸಿವಿಲ್ ದಿಸ್‌ಒಬೀಡಿಯನ್ಸ್) ತತ್ವಗಳನ್ನು ಅಳವಡಿಸಿಕೊಂಡರು. ಈ ತತ್ವಗಳಿಗೆ ಭಗವದ್ಗೀತೆ ಜೈನ ಧರ್ಮಗಳು ನೆಲೆಗಟ್ಟನ್ನು ಒದಗಿಸಿದರೆ, ರಷಿಯದ ಸಾಹಿತಿ ಲಿಯೊ ಟಾಲ್‌ಸ್ಟಾಯ್ ಮತ್ತು ಅಮೆರಿಕನ್ ಸಾಹಿತಿ ಡೇವಿಡ್ ಥೋರೊ ಅವರ ಬರಹಗಳು ಸ್ಫೂರ್ತಿ ನೀಡಿದವು. ದಕ್ಷಿಣ ಆಫ್ರಿಕೆಯಲ್ಲಿನ ಕೆಲಸ ಮುಗಿದು, ಮೊದಲ ಮಹಾಯುದ್ಧದ ಸಮಯದಲ್ಲಿ ಗಾಂಧಿ ಭಾರತಕ್ಕೆ ಮರಳಿದರು. ತಮ್ಮ ಸತ್ಯ ಮತ್ತು ಅಹಿಂಸೆಯ ತತ್ವಗಳ ಆಧಾರದ ಮೇಲೆ ಬ್ರಿಟಿಷರನ್ನು ಪ್ರತಿರೋಧಿಸಿ ಸ್ವತಂತ್ರ ಗಳಿಸುವಂತೆ ಭಾರತೀಯರನ್ನು ಕೇಳಿಕೊಂಡರು. ಬ್ರಿಟಿಷರ ಪರವಾಗಿ ಮೊದಲ ಯುದ್ಧದಲ್ಲಿ ಕಾದುವಂತೆ ವಿನಂತಿಸಿಕೊಂಡರು. ತಾವೆ ಯುದ್ಧಕ್ಕೆ ಅಂಬುಲೆನ್ಸ್‌ಗಳನ್ನು ಜೋಡಿಸಿಕೊಂಡು ರೆಡ್ ಕ್ರಾಸಿನ ತುಂಡೊಂದನ್ನು ನಿಭಾಯಿಸಿದರು. ಯುದ್ಧದ ನಂತರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಸ್ವರಾಜ ಆಂದೋಲನದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ‘ಸತ್ಯಾಗ್ರಹ’ ಮತ್ತು ‘ಅಸಹಕಾರ’ ಚಳುವಳಿ ಪ್ರಾರಂಭಿಸಿದರು. ಉಪವಾಸ ತಮ್ಮನ್ನು ಶುಧ್ಧಿಗೊಳಿಸಲು ಅಷ್ಟೆ ಅಲ್ಲ ಬೇರೆಯವರ ಮನ ಒಲಿಸುವ ಸಾಧನವಾಯ್ತು. ‘ಸ್ವದೇಶಿ’ ಚಳುವಳಿ ಸ್ವಾತಂತ್ರ ಹೋರಾಟದಲ್ಲಿ ಇನ್ನೊಂದು ಪರಿಣಾಮಕಾರಿ ಅಸ್ತ್ರವಾಯ್ತು. ವಿದೇಶಿ ವಸ್ತುಗಳನ್ನು ಬಿಟ್ಟು ಸ್ವದೇಶಿ ವಸ್ತುಗಳನ್ನು ಬಳಸುವುದೆ ಈ ತಂತ್ರ. ಭಾರತೀಯ ಕಚ್ಚಾ ವಸ್ತುಗಳನ್ನೆ ಬಳಸಿ ವಿದೇಶದಲ್ಲಿ ತಯಾರಾಗಿ ಮರಳಿ ಭಾರತಕ್ಕೆ ಬರುತ್ತಿದ್ದ ವಸ್ತುಗಳಲ್ಲಿ ಬಟ್ಟೆ ಮುಖ್ಯವಾಗಿತ್ತು. ಇದಕ್ಕೆ ಉತ್ತರವಾಗಿ ಖಾದಿ ಹುಟ್ಟಿಕೊಂಡಿತು. ಪ್ರತಿ ದಿನ ಎಲ್ಲರು ಖಾದಿ ನೇಯುವಂತೆ ಕೇಳಿಕೊಂಡರು ಗಾಂಧಿ. ಚರಕ ಅವರ ಜೀವನ ಸಂಗಾತಿಯಾಯ್ತು. ದಂಡಿ ಯಾತ್ರೆ ಅಥವ ಉಪ್ಪಿನ ಸತ್ಯಾಗ್ರಹ ಜನರನ್ನು ಒಂದುಗೂಡಿಸಿ ಎಬ್ಬಿಸಿತು. ಸರಕಾರಕ್ಕೆ ಕರ ಕೊಡದೆ ಜನರು ತಾವೆ ಸಾಂಕೇತಿಕವಾಗಿ ಉಪ್ಪನ್ನು ತಯಾರಿಸಿ ಕಾನೂನು ಭಂಗ ಮಾಡುವುದೆ ಇದರ ಉದ್ದೇಶ. ಸಹಸ್ರಾರು ಜನರು ಗಾಂದಿಯೊಡನೆ ದಂಡಿಯ ಸಮುದ್ರ ತೀರಕ್ಕೆ ನಡೆದುಕೊಂಡು ಹೋಗಿ ಉಪ್ಪನ್ನು ತಯಾರಿಸಿದರು. ನಂತರ ಗಾಂಧಿ ೨೧ ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದರು. ೧೯೨೪ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿದ್ದರು. ಎರಡನೆಯ ಮಹಾಯುದ್ಧ ಪ್ರಾರಂಭ ಆದಾಗ ಭಾರತದ ಬೆಂಬಲ ಬೇಕಾದರೆ, ಭಾರತಕ್ಕೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು ಎಂದು ಗಾಂಧಿ ಮತ್ತು ಕಾಂಗ್ರೆಸ್ ಪಾರ್ಟಿ ಕರಾರು ಹಾಕಿದರು. ಬ್ರಿಟಿಷರು ಇದಕ್ಕೆ ಒಪ್ಪಲಿಲ್ಲ. ‘ಭಾರತ ಬಿಟ್ಟು ತೊಲಗಿರಿ’ (ಕ್ವಿಟ್ ಇಂಡಿಯ) ಚಳುವಳಿ ಆರಂಭಿಸಿದರು. ಗಾಂಧಿಗೆ ಮತ್ತೆ ಜೈಲುವಾಸ ಸಿಕ್ಕಿತು. ಅನಾರೋಗ್ಯದ ಕಾರಣ ಎರಡು ವರುಷಗಳ ನಂತರ ಬಿಡುಗಡೆ ಹೊಂದಿದರು. ಅಂತೂ ಸ್ವಾತಂತ್ರ್ಯ ಸಿಗುವ ಸಮಯ ಬಂತು. ಗಾಂಧಿ ದೇಶದ ವಿಭಜನೆಯನ್ನು ವಿರೋಧಿಸಿದರು. ವಿಭಜನೆಯಾಯಿತು. ಸ್ವತಂತ್ರ ಬಂತು. ಎಲ್ಲರು ಸಂಭ್ರಮಿಸಿದರೆ ವಿಭಜನೆಯಲ್ಲಿ ಸತ್ತವರ, ಅನಾಥರಾದವರ, ದೇಶಭ್ರಷ್ಟರಾದವರ, ದೇಶದಲ್ಲಿಯೆ ಪರದೇಶಿಗಳಾದವರ ಹೆಸರಿನಲ್ಲಿ ಗಾಂಧಿ ಶೋಕಾಚರಣೆ ಮಾಡಿದರು. ಮುಸ್ಲಿಮರ ಪಕ್ಷಪಾತಿ ಆಗಿ ಅವರನ್ನು ಸಾಂತ್ವನಗೊಳಿಸುತ್ತ ಸ್ವತಂತ್ರ ಭಾರತ ಸರಕಾರವನ್ನು ಹೊರಗಿದ್ದುಕೊಂಡೂ ನಿಯಂತ್ರಿಸುತ್ತಿದ್ದಾರೆ ಎಂದು ದೂಷಿಸಿ, ಹಿಂದು ತೀವ್ರವಾದಿಗಳಲ್ಲಿ ಒಬ್ಬನಾದ ನಾಥೂರಮ್ ಗೋಡ್ಸೆ ಗಾಂಧಿ ಅವರನ್ನು ಗುಂಡಿಕ್ಕಿ ಕೊಂದನು. "ಹೇ ರಾಮ್!" ಎಂಬ ಕೊನೆಯ ಮಾತುಗಳೊಂದಿಗೆ ಈ ಮಹಾತ್ಮ ವಿಶ್ವದ ಚರಿತ್ರೆಯಲ್ಲಿ ಬೆಳಗತೊಡಗಿದರು. (ಜನೆವರಿ ೩೦, ೧೯೪೮). ತಮ್ಮ ತತ್ವ, ಆದರ್ಶ, ನಂಬಿಕೆ ಎಲ್ಲವನ್ನು ಸ್ವತಃ ಆಚರಿಸಿ ತೋರಿಸಿದ ಗಾಂಧಿ ಅವರ ಜೀವನವೆ ಅವರ ಸಂದೇಶ ಆಗಿ ಉಳಿಯಿತು. ನಿಮ್ಮವನೇ ಆದ, ವಿಶ್ವೇಶ್ವರ ದೀಕ್ಷಿತ ಕನ್ನಡಕಲಿ, ಬಿತ್ತರಿಕೆ, ಜನವರಿ ೦೩, ೨೦೨೪ ತಾಗುಲಿ: Vishweshwar Dixit

Mar 31, 202408:19
How to Kill a Dasa : Huchcharane ಹುಚ್ಚರಣೆ: ದಾಸರನ್ನು ಆಡಿ ಕೊಲ್ಲಿರೋ!

How to Kill a Dasa : Huchcharane ಹುಚ್ಚರಣೆ: ದಾಸರನ್ನು ಆಡಿ ಕೊಲ್ಲಿರೋ!

👍 Like it? ...... ⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠

👁️ ⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠ 

📧 ⁠⁠⁠⁠⁠⁠⁠⁠⁠Subscribe to our newsletter

ಕನ್ನಡವೆಂಬುದು ಮಂತ್ರ ಕಣಾ! ಹೌದು. ಕನ್ನಡ ಉಚ್ಚಾರ ಸೂಕ್ಷ್ಮವಾದದ್ದು. ಉಚ್ಚಾರದಲ್ಲಿ ನಿಖರತೆ, ಸ್ಪಷ್ಟತೆ, ಒತ್ತು, ಬಿಗಿ, ಮತ್ತು ವಿರಾಮಗಳು ಅವಶ್ಯ. ಉಚ್ಚಾರ ಸರಿ ಇರದಿದ್ದರೆ, ಯಾವ ವೃತ್ತಾಸುರ ಉದ್ಭವಿಸದಿದ್ದರೂ, ಅಪಾರ್ಥ, ಅನಾಹುತ, ಆಭಾಸ, ಇಲ್ಲವೆ ನಗೆಪಾಟಲು ಕಟ್ಟಿಟ್ಟ ಬುತ್ತಿ. ಅನ್ಯಾರ್ಥ, ಅಪಾರ್ಥ, ಅನರ್ಥ, ಆಭಾಸಗಳು ಹುಟ್ಟುವುದು ಅನಾವಶ್ಯಕ ವರ್ಣ ಲೋಪ, ವರ್ಣ ಆದೇಶ, ಮತ್ತು ವರ್ಣ ಆಗಮಗಳಿಂದ. ಯಾಕೆ ಹೀಗೆ? ಅಲಸಿ ನಾಲಗೆ ಮತು ಉದಾಸೀನತೆಗಳು ಎಂದು ಮೇಲ್ನೋಟದಲ್ಲಿ ತೋರಿದರೂ, ಕನ್ನಡದ ಮತ್ತು ಪದಗಳ ತಿಳಿವು ಇಲ್ಲದಿರುವುದೆ ಮುಖ್ಯ ಕಾರಣ. ವಿಶೇಷವಾಗಿ ಹಾಡುಗಾರರು, ಭಾಷಣಕಾರರು, ಮೊದಲ ಗುರು ಎನಿಸುವ ತಾಯಿ-ತಂದೆ, ಮತ್ತು ಶಿಕ್ಷಕರು ಕನ್ನಡ ಉಚ್ಚಾರದ ವಿಷಯದಲ್ಲಿ ಹೆಚ್ಚಿನ ಗಮನ ಇರಿಸುವುದು ಒಳಿತು. ನವಿರು ಹಾಸ್ಯದೊಂದಿಗೆ, ಈ ಬಿತ್ತರಿಕೆಯಲ್ಲಿ, ಎತ್ತಿ ತೋರಿಸಲಾದ ʼಏಳು ಅಪಸ್ವರʼ ಗಳನ್ನು ಅರಿತು ನಿವಾರಿಸಿಕೊಂಡರೆ ನಿಮ್ಮ ಕನ್ನಡ ಕಸ್ತೂರಿಯಾಗುವುದರಲ್ಲಿ ಸಂಶಯವಿಲ್ಲ. (ಕನ್ನಡ ಉಚ್ಚಾರ ಮಂತ್ರದಷ್ಟು ಸೂಕ್ಷ್ಮವೇ?) ಹುಚ್ಚರಣೆ ದಾಸರನ್ನು ಆಡಿ ಕೊಲ್ಲಿರೋ! ಮತ್ತು ಕನ್ನಡದ ಏಳು ಅಪಸ್ವರಗಳು -- ವಿಶ್ವೇಶ್ವರ ದೀಕ್ಷಿತ ಗಾಯನ: ಸ್ಫೂರ್ತಿ ಉಗ್ರಪ್ಪ ಫೆಬ್ರುವರಿ ೦೭, ೨೦೨೧ ರಂದು "ವಾಕ್ಪಟುಗಳು" ಆನ್‌ಲೈನ್‌ ಗುಂಪಿನಲ್ಲಿ ನೀಡಿದ ಭಾಷಣ ( https://www.facebook.com/groups/vakpatugalu/permalink/10159612099913118/ ) ಅನಾವಶ್ಯಕ ವರ್ಣ ಪಲ್ಲಟ, ವರ್ಣ ಲೋಪ, ವರ್ಣ ಆದೇಶ, ಮತ್ತು ವರ್ಣ ಆಗಮಗಳಿಂದ ಅಗುವ ಅಪಾರ್ಥ, ಅನರ್ಥ, ಆಭಾಸಗಳಿಗೆ ಪದಗಳ ತಿಳಿವಳಿಕೆ ಇಲ್ಲದಿರುವುದೆ ಮುಖ್ಯ ಕಾರಣ Read Complete article: https://kannadakali.com/article/culture/huchcharane.html 09:55 ಸಪ್ತ ಅಪಸ್ವರಗಳು ‌12:45 ೧ ಪಾಯಸದಲ್ಲಿ ನೊಣ : ನ ↔ ಣ 12:46 ದಡಬಡ ತಟಪಟ: ಡ ↔ ದ 17:12 ೨ ಲಳಯೋರಭೇದ : ಳ ↔ ಲ 19:45 ೩ ಕೂಡಿಸಿ ಕೆಟ್ಟ : ಶಬ್ದಗಳನ್ನು ಕೂಡಿಸಿ/ಬಿಡಿಸಿದಾಗ ಅಪಾರ್ಥ 23:44 ೪ ಎಲ್ಲರೂ ಭಂಡರೆ : ಮಹಾಪ್ರಾಣವನ್ನು ಇಲ್ಲದಲ್ಲಿ ಸೇರಿಸಿ ಇದ್ದಲ್ಲಿ ಬಿಡುವುದು 28:13 ೫ ಹಾರುವ ಹಕಾರ : ವರ್ಣ ಪಲ್ಲಟ 31:44 ೬ ಹಗರಣ : ವರ್ಣ ಆದೇಶ, 33:00 ೭ ಆಸನ-ಹಾಸನ : ವರ್ಣ ಲೋಪ ಮತ್ತು ವರ್ಣ ಆಗಮ 35:06 ದಾಸರ ಪದಗಳನ್ನು ಹೇಗೆ ಹಾಡಬೇಕು

Feb 28, 202440:54
Love and Expectations : ಅಪೇಕ್ಷೆ ಇಲ್ಲದೆ ಪ್ರೀತಿಸಲು ಸಾಧ್ಯವೇ?

Love and Expectations : ಅಪೇಕ್ಷೆ ಇಲ್ಲದೆ ಪ್ರೀತಿಸಲು ಸಾಧ್ಯವೇ?

Love and Expectations : ಅಪೇಕ್ಷೆ ಇಲ್ಲದೆ ಪ್ರೀತಿಸಲು ಸಾಧ್ಯವೇ? 👍 Like it? ...... ⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠

👁️ ⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠ 

📧 ⁠⁠⁠⁠⁠⁠⁠⁠Subscribe to our newsletter

[ ಮನುಷ್ಯ ಜಾತಿಗೆ ವಿಶಿಷ್ಟವಾದವುಗಳಲ್ಲಿ ಪ್ರೀತಿ ಕೂಡ ಒಂದು. ಪ್ರೀತಿ ಎಂದರೆ ಏನು? ಪ್ರೀತಿ ಒಂದು ಅನುಭವ. ಭೌತಿಕ, ಮಾನಸಿಕ, ಮತ್ತು ಅಧ್ಯಾತ್ಮಿಕ ಸ್ತರಗಳಲ್ಲಿ, ಅವರವರ ಪ್ರೀತಿ ಅವರವರ ಅನುಭವಕ್ಕೆ ಸೀಮಿತ. ಸಾರ್ವತ್ರಿಕವಾಗಿ ಅದು ಹೀಗೇ ಇರಬೇಕು ಎಂದು ಹೇಳಲಾಗುವುದಿಲ್ಲ. ಆದರೂ, ಪ್ರೀತಿಗೂ ಅಪೇಕ್ಷೆಗೂ ನಂಟು ಸಹಜ. ಪ್ರೀತಿಯ ಬಗ್ಗೆ ಅನೇಕ ವಾದಗಳು ಇವೆ. ಅಪೇಕ್ಷೆಯೇ ಪ್ರೀತಿ ಎಂದು ಒಂದು ಸಾಧಿಸಿದರೆ ನಿರಪೇಕ್ಷ ಪ್ರೀತಿಯೇ ಪ್ರೀತಿ ಎನ್ನುತ್ತದೆ ಮತ್ತೊಂದು. ಅಲ್ಲದೆ, "ಪ್ರೀತಿ ಒಂದು ಹುಚ್ಚು ಚಟ" ಎಂದು ಹೇಳುತ್ತಾನೆ ಮಂಕುತಿಮ್ಮ. ನಿಮ್ಮ ಪ್ರೀತಿ ಎಂಥದ್ದು? ನಿಮ್ಮ ಅಪೇಕ್ಷೆಗಳೇನು? ವಿವೇಕ ಬೆಟ್ಕುಳಿ ಅವರ ಈ ಪ್ರೀತಿ ಲೇಖನವನ್ನು ಓದಿ, ಅವರ ದನಿಯಲ್ಲೆ ಕೇಳಿ; ಪ್ರೀತಿಯ ಮೂಲವನ್ನು ಕಂಡುಕೊಳ್ಳಿ - ಸಂ.] ಅಪೇಕ್ಷೆ ಇಲ್ಲದೆ ಪ್ರೀತಿಸಲು ಸಾಧ್ಯವೇ? -- ವಿವೇಕ ಬೆಟ್ಕುಳಿ ಅನಾದಿ ಕಾಲದಿಂದ ಇಂದಿನವರೆಗೂ ಪ್ರೀತಿ ಎಂಬ ವಿಷಯ ಚಚೆ೯ ಆಗುತ್ತಲೇ ಇರುವುದು. ಮುಂದೆಯೂ ಸಹ ಆಗುತ್ತ ಇರುವುದು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ಹಾಗಾದರೆ ಪ್ರೀತಿ ಎಂದರೇನು? ಈ ಪ್ರಶ್ನೆಗೆ ಹಲವಾರು ಉತ್ತರಗಳು ಇವೆ. ಆದರೆ ಸರಳ ಉತ್ತರ ಎಂದರೆ ಒಂದೇ “ಪ್ರೀತಿ ಎಂದರೆ ಪ್ರೀತಿ” ಅಷ್ಟೆ! ಈ ಬಗ್ಗೆ ಉತ್ತರಿಸುವ ಎಲ್ಲರೂ, ಅವರವರು ನೋಡಿದ, ಅನುಭವಿಸಿದ ಘಟನೆಗಳನ್ನು ಆಧಾರವಾಗಿಟ್ಟುಕೊಂಡೆ ಪ್ರೀತಿಯನ್ನು ವ್ಯಾಖ್ಯಾನಿಸುವರು. ಹೊರತಾಗಿ ಪ್ರೀತಿಗೆ ಸ್ಪಷ್ಟವಾದ ಉತ್ತರ ಎಂಬುದು ಇಲ್ಲ. ಪ್ರೀತಿಯಲ್ಲಿ ವಿವಿಧ ಬಗೆಗಳಿವೆ. ಆದರೆ ಎಲ್ಲ ಬಗೆಯ ಪ್ರೀತಿಯೂ ಅಪೇಕ್ಷೆಯ ಕಾರಣಕ್ಕಾಗಿಯೇ ದುಖ:ದಲ್ಲಿ ಅಂತ್ಯವಾಗುವುದು. ತಂದೆ-ತಾಯಿ ಮಕ್ಕಳ ಪ್ರೀತಿ ಅಪ್ಪ ಅಮ್ಮನಿಗೆ ತನ್ನ ಮಗ/ಮಗಳು ತಾನು ಹೇಳಿದಂತೆ ಕೇಳಬೇಕು ಎನ್ನುವ ಅಪೇಕ್ಷೆ ಇರುವುದು. ಮಕ್ಕಳು ಚಿಕ್ಕವರಿದ್ದಾಗ ದಿನಾಲೂ ಶಾಲೆಗೆ ಹೋಗಿ ಬರಬೇಕು. ಚೆನ್ನಾಗಿ ಓದಬೇಕು. ಉತ್ತಮ ಅಂಕ ತೆಗೆಯಬೇಕೆಂಬ ಅಪೇಕ್ಷೆ. ಮಕ್ಕಳು ದೊಡ್ಡವರಾದಾಗ ಎಲ್ಲಾ ವಿಚಾರವನ್ನು ಚರ್ಚಿಸಬೇಕು, ಕೆಲಸ ಮಾಡಲು ಪ್ರಾರಂಭಿಸಿ ಮೇಲೆ ಸಂಬಳವನ್ನು ತಂದು ನೀಡಬೇಕು. ತಾವು ನೋಡಿದ ವರ/ವಧುವನ್ನೇ ಮದುವೆಯಾಗಬೇಕು. ತಾವು ಹೇಳಿದವರೊಂದಿಗೆ ಗೆಳೆತನ ಇರಬೇಕು. ತಾವು ನಿರ್ಧರಿಸುವ ಕೆಲಸವನ್ನೇ ಮಾಡಬೇಕು. ಮನೆಯಿಂದ ದೂರವಿದ್ದರೆ ದಿನವೂ ಪೋನ್‌ ಮಾಡಬೇಕು. ಒಟ್ಟಾರೆ ಮಕ್ಕಳು ತಮ್ಮ ಇಷ್ಟದಂತೆ ಇರಬೇಕು ಎಂದು ತಂದೆ ತಾಯಿಯರ ಅಪೇಕ್ಷೆಯಾಗಿರುವುದು. ಮಕ್ಕಳಿಗೋ, ಅಪ್ಪ ಅಮ್ಮ ಸ್ನೇಹಿತರಂತೆ ಇರಬೇಕು. ನನ್ನ ಎಲ್ಲಾ ಕಾರ್ಯಕ್ಕೂ ಸಹಕಾರ ನೀಡಬೇಕು. ಸಂಬಳದ ಬಗ್ಗೆ ಮಾತನಾಡಬಾರದು, ಕೆಲಸದ ಬಗ್ಗೆ ವಿಚಾರಿಸಬಾರದು, ಮದುವೆ ಎಂಬುದರಲ್ಲಿ ನನ್ನ ನಿಧಾ೯ರದಲ್ಲಿ ತಲೆ ಹಾಕಬಾರದು. ಅಪ್ಪ ಅಮ್ಮ ನಾನೇ ಏನೇ ತೀಮಾ೯ನ ಕೈಗೊಂಡರು ನನಗೆ ಸಪೋರ್ಟ ಮಾಡಬೇಕು. ನನಗೆ ಅವರ ಸಲಹೆ ಅಗತ್ಯ, ಮಾರ್ಗದರ್ಶನ ಅಗತ್ಯ ಎಂಬುದು ಮಕ್ಕಳ ಅಪೇಕ್ಷೆಯಾಗಿದೆ. ಹುಡುಗ ಹುಡುಗಿ ಪ್ರೀತಿ ನಾನು ಇಷ್ಟಪಡುವ ಹುಡುಗ/ಹುಡುಗಿ ಯಾವ ಹುಡುಗಿ /ಹುಡುಗರೊಂದಿಗೂ ಮಾತನಾಡಬಾರದು, ಅವನ/ಆಕೆಯ ಬಟ್ಟೆಯ ಬಣ್ಣ, ಹಾಕುವ ಚಪ್ಪಲಿ ಇವುಗಳ ಬಗ್ಗೆ ಹೀಗೆ ಇರಬೇಕೆಂಬ ಅಪೇಕ್ಷೆ. ಆತನ/ಆಕೆಯ ಊಟ, ತಿಂಡಿ, ಇತರೆ ಹವ್ಯಾಸಗಳ ಬಗ್ಗೆ ಒಂದು ಪೂರಕವಾಗಿ ಇಲ್ಲಾ ನಕಾರಾತ್ಮಕವಾದ ಅಪೇಕ್ಷೆ ಪರಸ್ಪರ ಇಬ್ಬರಲ್ಲಿಯೂ ಇರುವುದು. ಅಪೇಕ್ಷೆ ಹೆಚ್ಚಾಗಿ ಅದು ಆಗದೇ ಇದ್ದಾಗ ಬೇಸರ; ಬೇಸರ ಕಳೆಯಲು ಸಿಗರೇಟು, ಸರಾಯಿ, ಅಳು, ದುಖ: ಡಿಪ್ರೆಶನ್ ಇತ್ಯಾದಿ.ಇಬ್ಬರೂ ಪಶ್ಚಾತಾಪ ಪಟ್ಟು ಪುನ: ಸೇರಿದಾಗ ಪಶ್ಚಾತ್ತಾಪ. ನಂತರ, ಪ್ರೀತಿಯ ಹೆಸರಿನಲ್ಲಿ ಸಿನಿಮಾ, ಸುತ್ತಾಟ, ದೈಹಿಕ ಸಂಪರ್ಕ. ಪುನ: ದುಖ: ,ಪಶ್ಚಾತಾಪ...ಇದಕ್ಕೆ ಕೊನೆ ಎಂಬುದು ಇಲ್ಲವಾಗಿದೆ. ಗಂಡ ಹೆಂಡತಿ ಪ್ರೀತಿ ತಾನು ಕೆಲಸ ಮುಗಿಸಿ ಬಂದ ಮೇಲೆ ತನಗೆ ಟೀ ನಿಡಬೇಕು. ಮಾತನಾಡಬೇಕು, ಉತ್ತಮ ಅಡುಗೆ ಮಾಡಿ ಬಡಿಸಬೇಕು, ರಾತ್ರಿ ತನ್ನ ಆಕಾಂಕ್ಷೆಯನ್ನು ಈಡೇರಿಸಬೇಕು, ತನ್ನನ್ನು ಅರ್ಥಮಾಡಿಕೊಳ್ಳಬೇಕು ಎಂಬ ಅಪೇಕ್ಷೆ ಗಂಡಿನದಾದರೆ, ನನ್ನನ್ನು ಬೇರೆ ಬೇರೆ ಕಡೆ ತಿರುಗಾಡಲು ಕರೆದುಕೊಂಡು ಹೋಗಬೇಕು, ಆಭರಣ ಖರೀದಿಸಬೇಕು, ಆಗಾಗ ಉಡುಗೊರೆ ನೀಡಬೇಕು, ಮನೆಗೆ ಹಲವಾರು ರೀತಿಯ ಸಾಮಾನು ತರಬೇಕು, ಜಾಗ ಖರೀದಿಸಬೇಕು, ಮನೆ ಕಟ್ಟಬೇಕು, ಇತ್ಯಾದಿ ಅಪೇಕ್ಷೆಗಳು. ಎಲ್ಲಿ ಹೊಂದಾಣಿಕೆ ಇದೆಯೋ, ಅಥವಾ ಯಾರಾದರೂ ಒಬ್ಬರು ಶರಣಾಗಲು ಇಷ್ಟಪಡುವರೋ ಅಲ್ಲಿ ಎಲ್ಲವೂ ಒಳ್ಳೆಯದು. ಎಲ್ಲಿ ಭಿನ್ನಾಭಿಪ್ರಾಯ ಇದೆಯೋ ಅಲ್ಲಿ ಮೂರನೇ ವ್ಯಕ್ತಿ ಅಂದರೆ ಹಿರಿಯರ ಪ್ರವೇಶ ಬುದ್ದಿಮಾತು, ಕೋರ್ಟ ವಿಚ್ಛೇದನ ಇತ್ಯಾದಿ. “ಜೀವನದಲ್ಲಿ ಇವೆಲ್ಲ ಇರಬೇಕು, ಅಂದರೆ ಮಾತ್ರ ಜೀವನ ಸಾರ್ಥಕ” ಎಂದು ಪ್ರೀತಿಯ ಸುಳಿಯಲ್ಲಿ ಸಿಕ್ಕವರ ಹೇಳಿಕೆಯಾಗಿರುವುದು. ಪ್ರೀತಿಯಿಂದ ನೊಂದವರು “ಇನ್ನೊಮ್ಮೆ ನಾನು ಪ್ರೀತಿಯ ಹುಚ್ಚಿನಲ್ಲಿ ಬೀಳುವುದಿಲ್ಲ” ಎಂದು ಬಡಬಡಿಸುವರು. ಒಟ್ಟಾರೆ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಪ್ರೀತಿಯ ಮಕ್ಕಳೆ ಆಗಿರುವರು. ಪ್ರೀತಿಯ ಬಗೆ ಮಾತ್ರ ಬೇರೆ ಬೇರೆ ಆಗಿರಬಹುದು ಆದರೆ ಪ್ರೀತಿ ಇಲ್ಲದ ವ್ಯಕ್ತಿ ಜಗತ್ತಿನಲ್ಲಿ ಇರಲು ಸಾಧ್ಯವೇ ಇಲ್ಲಾ ಎಂದು ಹೇಳಬಹುದಾಗಿದೆ. ಅಪೇಕ್ಷೆ ರಹಿತ ಪ್ರೀತಿ ಸಾಧ್ಯವೇ? . . . ಪೂರ್ತಿ ಲೇಖನವನ್ನು ಇಲ್ಲಿ ಓದಿ: https://kannadakali.com/loveandexpectations.html _______ ಕನ್ನಡಕಲಿ, ಬಿತ್ತರಿಕೆ, ಫೆಬ್ರುವರಿ ೧೪, ೨೦೨೪ ಅಪೇಕ್ಷೆ ಇಲ್ಲದೆ ಪ್ರೀತಿಸಲು ಸಾಧ್ಯವೇ? ಲೇಖನ ಮತ್ತು ಓದು: ವಿವೇಕ ಬೆಟ್ಕುಳಿ ** Introductory Music: To Loom Is to Love - The Mini Vandals, Youtube Audio Library

Feb 12, 202409:57
Vidvaneva Vijanati : KalitaKovida (subhashita) - ಕಲಿತ ಕೋವಿದ : ವಿದ್ವಾನೇವ

Vidvaneva Vijanati : KalitaKovida (subhashita) - ಕಲಿತ ಕೋವಿದ : ವಿದ್ವಾನೇವ

ಕಲಿತ ಕೋವಿದ : ವಿದ್ವಾನೇವ

👍 Like it? ...... ⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠

👁️ ⁠⁠⁠⁠⁠⁠⁠Watch it⁠⁠⁠⁠⁠⁠⁠  🕮 ⁠⁠⁠⁠⁠⁠⁠Read it ⁠⁠⁠⁠⁠⁠⁠  👂 ⁠⁠⁠⁠⁠⁠⁠Listen it⁠⁠⁠⁠⁠⁠⁠ 

📧 ⁠⁠⁠⁠⁠⁠⁠Subscribe to our newsletter ವಿದ್ವಾನೇವ ವಿಜಾನಾತಿ ವಿದ್ವಜ್ಜನ ಪರಿಶ್ರಮಂ : ನ ಹಿ ವಂಧ್ಯಾ ವಿಜಾನಾತಿ ಗುರ್ವೀಂ ಪ್ರಸವವೇದನಾಂ. - ಅಪ್ಪಯ್ಯ ದೀಕ್ಷಿತ, ಕುವಲಯಾನಂದ -೫೧ (ಪ್ರತಿವಸ್ತು ಉಪಮಾ ಅಲಂಕಾರಕ್ಕೆ ಉದಾಹರಣೆ) ಅಪ್ಪಯ್ಯ ದೀಕ್ಷಿತ 16 ನೇ ಶತಮಾನದಲ್ಲಿ ಬದುಕಿದ ವಿದ್ವಾಂಸ. ಅವರು ರಚಿಸಿದ ಅನೇಕ ವಿದ್ವತ್ಪೂರ್ಣ ಕೃತಿಗಳಲ್ಲಿ, ಇಂದು, ಕೇವಲ 60 ಮಾತ್ರ ಉಳಿದುಕೊಂಡಿವೆ. ಅವುಗಳಲ್ಲಿ ಅಲಂಕಾರ ಶಾಸ್ತ್ರ ಗ್ರಂಥವಾದ ಕುವಲಯಾನಂದ ಎನ್ನುವುದೂ ಒಂದು. ಅದರಲ್ಲಿ, ಈ ಶ್ಲೋಕವನ್ನು ಪ್ರತಿವಸ್ತು ಉಪಮೆ ಅಲಂಕಾರದ ಉದಾಹರಣೆಯಾಗಿ ನೀಡಲಾಗಿದೆ. ಅದನ್ನು ಕನ್ನಡಕ್ಕೆ ಅನುವಾದಿಸು ಪ್ರಯತ್ನ ಇಲ್ಲಿದೆ: ಕಲಿತ ಕೋವಿದನಿಗೇ ಗೊತ್ತು ಕಲಿಕೆ ಹಿಂದಣ ದುಡಿಮೆ ಹೊತ್ತು : ಬಸಿರು ಹೆರಿಗೆಯ ತಾಯ ನೋವ ಅರಿಯಬಲ್ಲದೆ ಬಂಜೆ ಜೀವ? ಕಲಿಕೆ ವಿಷಯ ಯಾವುದೇ ಆಗಿರಲಿ; ಭಾಷೆ, ವಿಜ್ಞಾನ, ಗಣಿತ, ಇತಿಹಾಸ, ಸಂಗೀತ, ನೃತ್ಯ, ಕುಶಲ ಕೈಗಾರಿಕೆ, ಅಥವ ಕಲೆ -ಚತುಷ್ಷಷ್ಟಿ ಕಲೆಗಳಲ್ಲಿ, ಯಾವುದೇ ಇರಲಿ, ಅದರಲ್ಲಿ ಪಾಂಡಿತ್ಯ, ಪರಿಣತಿ ಗಳಿಸಬೇಕಾದರೆ ಪರಿಶ್ರಮ ಬೇಕು. ಒಮ್ಮನದ ದುಡಿಮೆ ಬೇಕು. ಇಲ್ಲಿ instant gratification ಇಲ್ಲ. ಅನಾತುರದಿಂದ ವಿವಿಧ ಮೂಲಗಳಿಂದ ಅರಗಿಸಿಕೊಳ್ಳಬೇಕು. ಒಂದು ಪುಸ್ತಕ ಓದಿದರೆ, ಒಂದು, ವಿಡಿಯೊ ನೋಡಿದರೆ, ಒಂದು ವಾಟ್ಸಾಪ್‌ ಸಂದೇಶ ಓದಿದರೆ, ಗೂಗಲಿಸಿ ಕಡತಗಳನ್ನು ಕಲೆ ಹಾಕಿದರೆ ಪಾಂಡಿತ್ಯ ಬಾರದು. ಕಲಿಕೆಯ ಪರಾಕಾಷ್ಠತೆಯನ್ನು ಮುಟ್ಟಿ ತಜ್ಞ ಎನ್ನಿಸಿಕೊಳಬೇಕಾದರೆ ಸರಿಯಾದ ಮಾರ್ಗದರ್ಶನ, ಸತತ ಅಭ್ಯಾಸ, ತದೇವ ಧ್ಯಾನ, ಮೇಲಾಗಿ ತ್ಯಾಗ ಸಮರ್ಪಣೆಗಳು ಬೇಕು ಅಂದರೆ ಇತರ ಮನರಂಜನೆ ಸುಖ-ಲೋಲುಪತೆಗಳನ್ನು ಬದಿಗಿಟ್ಟು, ತನ್ನನ್ನೆ ಮುಡುಪಿಡಬೇಕು. ಮನರಂಜನೆಯೆ ಗುರಿಯಾಗಿರುವ, ಪ್ರದರ್ಶನವೆ ಕೊನೆಯಾಗಿರುವ, ಇಂದಿನ ಓಟದ ಜಗತ್ತಿನಲ್ಲಿ ಇದಕ್ಕೆಲ್ಲ ಯಾರಿಗೂ ವ್ಯವಧಾನವಿಲ್ಲ. ಅಂತೆ, ನಿಜವಾಗಿ ಕಲಿತವನ ಕಲಿಕೆಯ ಹಿಂದಿರುವ ದುಡಿಮೆ, ತ್ಯಾಗ, ಸಮಯ, ಸಂಯಮ, ಕಲಿಕೆಯ ಹಾದಿಯಲ್ಲಿನ ನೋವುಗಳ ಅಳವು ಮತ್ತು ಬೆಲೆ ಅವನಿಗೇ ಗೊತ್ತು, ಕಲಿತ ಮತ್ತೊಬ್ಬ ತಿಳಿದು ಮೆಚ್ಚಬಲ್ಲ. ಇತರರು ಅವನ ಕಲಿಕೆಯ ಫಲವನ್ನು ಮೆಚ್ಚಬಲ್ಲರಾದರೂ, ಹೆರಿಗೆಯ ನೋವನ್ನು ತಿಳಿಯದ ಬಂಜೆ ಬೇರೆಯವಳ ಮಗುವನ್ನು ಕಂಡಾಗ, "how cute!" ಅನ್ನುವಂತೆ, ಅವರದು ಕೇವಲ "ಹೌದಾ, ಚೆನ್ನಾಗಿದೆ" ಎನ್ನುವ ಅಚ್ಚರಿಯ ಉದ್ಗಾರಕ್ಕೆ ಸೀಮಿತ. ನಿಮ್ಮವನೆ ಆದ ವಿಶ್ವೇಶ್ವರ ದೀಕ್ಷಿತ. ಕಲಿತ ಕೋವಿದ - ವಿದ್ವಾನೇವ ಕನ್ನಡ ಕಲಿ, ಬಿತ್ತರಿಕೆ,  January 10, 2024


Jan 13, 202403:44
ಗುರಿ ತಪ್ಪುತ್ತಿರುವ ಗುರು

ಗುರಿ ತಪ್ಪುತ್ತಿರುವ ಗುರು

ಗುರಿ ತಪ್ಪುತ್ತಿರುವ ಗುರು - Teachers missing their Goal 👍 Like it? ...... ⁠⁠⁠⁠⁠⁠Subscribe and Share! ⁠⁠⁠⁠⁠⁠

👁️ ⁠⁠⁠⁠⁠⁠Watch it⁠⁠⁠⁠⁠⁠  🕮 ⁠⁠⁠⁠⁠⁠Read it ⁠⁠⁠⁠⁠⁠  👂 ⁠⁠⁠⁠⁠⁠Listen it⁠⁠⁠⁠⁠⁠ 

📧 ⁠⁠⁠⁠⁠⁠Subscribe to our newsletter

[ಎಲ್ಲ ಶಿಕ಼ಕರೂ ಹೀಗಲ್ಲ ಅಂತ ಸಮಸ್ಯೆಯನ್ನೆ ತೊಡೆದು ಹಾಕುವುದು ಸರಿ ಅಲ್ಲ.  ಶೈಕ್ಷಣಿಕ ಕೊರತೆ, ಅವಕಾಶ ವಂಚನೆ, ಅನ್ಯಾಯ, ಅಥವ ಅನಾಹುತ ಒಂದೇ ಮಗುವಿಗೆ ಆದರೂ ಅದು ಸಮಾಜದ ಸೋಲು. ವಿವೇಕ ಬೆಟ್ಕುಳಿ ಅವರು ಇಲ್ಲಿ ಹೇಳಿರುವದಕ್ಕಿಂತ ಗುರುತರ ಹಗರಣಗಳು ಅಮೆರಿಕೆಯಲ್ಲೂ ಆಗಿವೆ. ಅಂಥವುಗಳು ಆಗದಂತೆ ನೋಡಿಕೊಳ್ಳುವುದು ನಮ್ಮ ಜವಾಬುದಾರಿ - ಅಂದರೆ ತಂದೆತಾಯಿಗಳು ಮಕ್ಕಳ ಶಿಕ್ಷಣದಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಮತ್ತು ಶಾಲೆಯ ಅಧಿಕಾರಿಗಳು ದಾರಿ ತಪ್ಪಿದ ಶಿಕ್ಷಕರ ನಡತೆಯನ್ನು ಕೂಡಲೆ ಸರಿಪಡಿಸುವುದು ಇಲ್ಲವೆ ವಜಾಗೊಳಿಸುವುದು.  ಇಂದಿನ ಭರಾಟೆಯ ಜೀವನದಲ್ಲಿ ತಮ್ಮನ್ನೆ ಕಳೆದುಕೊಂಡಿರುವ ತಂದೆತಾಯಿಗಳಿಗೆ, ಶಿಕ್ಷಣ ಕೇವಲ ದುಡ್ಡಿನ ವ್ಯವಹಾರವಾಗಿರುವ ಶಾಲೆಗಳಿಗೆ  ಅಥವ ಶಿಕ್ಷಕರಿಗೆ ಇದು ಸಾಧ್ಯವೆ? – ಸಂ.]


Jan 12, 202409:08
ಕಂನುಡಿ: ಪಠ್ಯ ಸಂಪಾದಕ (ಲಿಪಿಕಾರ) : ಲೋಕಾರ್ಪಣೆ Kannudi Text Editor : Release and Demonstration

ಕಂನುಡಿ: ಪಠ್ಯ ಸಂಪಾದಕ (ಲಿಪಿಕಾರ) : ಲೋಕಾರ್ಪಣೆ Kannudi Text Editor : Release and Demonstration

ಕಂನುಡಿ - ಕನ್ನಡಕ್ಕೆ ಒಂದು ನಿದರ್ಶಕ ಪದ ಸಂಪಾದಕ(OPOK! ಮತ್ತು OHOK! ನಿಯಮ ಮತ್ತು ನೆಲೆ-ತಿಳಿವುಗಳ ಆಧಾರದ ಮೇಲೆ) Released by Shri T.S. Nagabharana on Dec 15, 2022 Under Nimmallige Kannada Koota program by Karnataka Cultural Association of Southern California 👍 Like it? ...... ⁠⁠⁠⁠⁠Subscribe and Share! ⁠⁠⁠⁠⁠

👁️ ⁠⁠⁠⁠⁠Watch it⁠⁠⁠⁠⁠  🕮 ⁠⁠⁠⁠⁠Read it ⁠⁠⁠⁠⁠  👂 ⁠⁠⁠⁠⁠Listen it⁠⁠⁠⁠⁠ 

📧 ⁠⁠⁠⁠⁠Subscribe to our newsletter

ಕಂನುಡಿ, OPOK! ಮತ್ತು OHOK! ನಿಯಮಗಳನ್ನು ಆಧರಿಸಿ ಮತ್ತು ನೆಲೆ-ತಿಳಿವನ್ನು ಒಳಗೊಂಡು ರಚಿತವಾದ ಒಂದು ನಿದರ್ಶಕ ಪಠ್ಯ ಸಂಪಾದಕ.

ಕನ್ನಡಕ್ಕೆ OHOK!, ಅಂದರೆ Ottu Haku Ottu Koḍu! (ಒತ್ತು ಹಾಕು ಒತ್ತು ಕೊಡು), ಎನ್ನುವ ಒಂದು ಊಡುವಳಿಯನ್ನು ಎತ್ತಿ ತೋರಿಸುತ್ತಿದೆ. ಒತ್ತಡ ಗ್ರಹಿಸಬಲ್ಲ ಸೂಕ್ಷ್ಮ ಇನ್‌ಪುಟ್ ಸಾಧನಗಳಿಗೆ ಇದು ವಿಶೇಷವಾಗಿ ಸೂಕ್ತವಾಗಿದೆಯಾದರೂ, ಪ್ರಸ್ತುತ ಆನ್‌ಲೈನ್ ಅನುಷ್ಠಾನವು ಸಾಮಾನ್ಯ ಯಾಂತ್ರಿಕ ಕೀಬೋರ್ಡ್ ಅನ್ನು ಬಳಸುತ್ತದೆ.

OHOK! ಮೂರು ಸಂಭಾವ್ಯ ಬಗೆಗಳನ್ನು ಹೊಂದಿದೆ -

  1. ಸ್ವ-ಒತ್ತು (ದ್ವಿತ್ವ),
  2. ಕಂಡಂತೆ, ಮತ್ತು
  3. ಅಂದಂತೆ.

ಕಂಡಂತೆ ಬಗೆ ಉಲಿಮಿಕ ಕ್ರಮವನ್ನು ಅನುಸರಿಸುವುದಿಲ್ಲ ಎಂದು ಗಮನಿಸಬಹುದು. ಆದಾಗ್ಯೂ, ಉಲಿಮೆಗಳನ್ನು ಒಳದಿನಿಸುವ ಬದಲು ಟೈಪಿಸಿದಂತೆ ಕಾಣುವ ಒಲವು ಹೊಂದಿರುವವರಿಗೆ ಈ ಬಗೆ ಉತ್ತಮವಾಗಿ ಕಾರ್ಯನಿರ್ವಹಿಸಬಹುದು.

ವೇಗ, ನಿಖರತೆ, ಮತ್ತು ಬಳಸುಗ ಸ್ನೇಹಪರತೆಯನ್ನು ಸಮರ್ಥವಾಗಿ ಹೆಚ್ಚಿಸಲು ನೆಲೆ-ತಿಳಿವನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಬಹುದು ಎಂಬುದನ್ನು ಸಹ ಕಂನುಡಿ ತೋರಿಸಿ ಕೊಡುತ್ತದೆ, ಉದಾಹರಣೆಗೆ, ಊಹಿತ ಸ್ವರ ಆಯ್ಕೆ, ಸ್ವಯಂಚಾಲಿತ ಶೂನ್ಯೀಕರಣ ಮತ್ತು ಆರ್ಕೀಕರಣ. ಕನ್ನಡದಂತಹ ಉಲಿ-ಉಲಿಗಟ್ಟಿನ ಭಾಷೆಗಳಿಗೆ ಅಗತ್ಯವಾದ ನಾಲ್ಕು ರೀತಿಯ ಅಳಿಸುಗಳನ್ನು ಸಹ ಅಳವಡಿಸಲಾಗಿದೆ. ಕಂನುಡಿ ತಂತ್ರಾಂಶ ಇಲ್ಲಿ ಲಭ್ಯ: https://kannadakali.com/kannudi/kannudi.html

Jan 04, 202401:17:53
ಶಿಕ್ಷಕರ ದಿನ ಎಂದರೆ ನಿಜವಾಗಿ, ನ್ಯಾಯವಾಗಿ, ಈ ದಿನವೇ! ಸಾವಿತ್ರಿಬಾಯಿ ಫುಲೆ - Teachers' Day Savitribai Phule

ಶಿಕ್ಷಕರ ದಿನ ಎಂದರೆ ನಿಜವಾಗಿ, ನ್ಯಾಯವಾಗಿ, ಈ ದಿನವೇ! ಸಾವಿತ್ರಿಬಾಯಿ ಫುಲೆ - Teachers' Day Savitribai Phule

👍 Like it? ...... ⁠⁠⁠⁠⁠Subscribe and Share! ⁠⁠⁠⁠⁠

👁️ ⁠⁠⁠⁠⁠Watch it⁠⁠⁠⁠⁠  🕮 ⁠⁠⁠⁠⁠Read it ⁠⁠⁠⁠⁠  👂 ⁠⁠⁠⁠⁠Listen it⁠⁠⁠⁠⁠ 

📧 ⁠⁠⁠⁠⁠Subscribe to our newsletter

[ಪ್ರಿಯ ಕನ್ನಡ ಕಲಿಗಳೆ, ಬೆಳಿಗ್ಗೆ ಎದ್ದ ಕೂಡಲೆ ಮಿಂಚೆಯಲ್ಲಿ ಕಂಡ ಈ ಪತ್ರವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಮೈಸೂರು ನಿವಾಸಿಗಳಾದ ಶ್ರೀ ಎಸ್.ಜಿ. ಸೀತಾರಾಮ್‌ ಕಳುಹಿಸಿದ ಈ ಸಮಯೋಚಿತ ಸಂದೇಶ ಕಣ್ ತೆರೆಸುವಂತಿದೆ. ಸಾವಿತ್ರಿಬಾಯಿ ಫುಲೆ ಅವರಂಥ ಮಹಾನ್‌ ಶಕ್ತಿಗಳನ್ನು ಸ್ಮರಿಸಿಕೊಳ್ಳುವುದು ಇಂದು ಅಗತ್ಯವಾಗಿದೆ. ದುಷ್ಟರನ್ನು ಶಿಕ್ಷಿಸುವ ದುರ್ಗೆಗಿಂತ ಸಮಾಜ ಮತ್ತು ಸಂಪ್ರದಾಯಗಳ ಕತ್ತಲೆಯಲ್ಲಿ ಬಳಲುತ್ತ ಕೊಳೆಯುತ್ತಿದ್ದವರನ್ನು ಬೆಳಕಿನೆಡೆಗೆ ಒಯ್ಯುವ ಇಂಥ ಭರ್ಗೆಯರು ಬೇಕು. ಕನ್ನಡ ಕಲಿಯ ಎಲ್ಲ ಶಿಕ್ಷಕರಿಗೂ ಈ ದಿನ ಹೆಮ್ಮೆಯ ದಿನ, ಸ್ಫೂರ್ತಿಯ ದಿನ ಎನಿಸುವುದು ಖಂಡಿತ.] -------- ಶಿಕ್ಷಕರ ದಿನ ಎಂದರೆ ನಿಜವಾಗಿ, ನ್ಯಾಯವಾಗಿ, ಈ ದಿನವೇ! - ಎಸ್.‌ ಜಿ. ಸೀತಾರಾಮ್‌, ಮೈಸೂರು ಆತ್ಮೀಯರೇ: ಈವೊತ್ತು (ಜನವರಿ ಮೂರು) “ಸಾವಿತ್ರಿಬಾಯಿ ಫುಲೇ” ಅವರ ಜನ್ಮಸ್ಮರಣದಿನ. “ಕೆಲವು ವರ್ಗಗಳು ವಿದ್ಯಾರ್ಜನೆ ಮಾಡುವುದೇ ಮಹಾಪಾಪ” ಎಂಬ ನಂಬಿಕೆಯು ಗಾಢವಾಗಿದ್ದ, ಒಂದೂವರೆ ಶತಮಾನಕ್ಕೂ ಪೂರ್ವದ ಪತನೋನ್ಮುಖ ಕಾಲಮಾನದಲ್ಲಿ, ಕ್ರೂರ ಸಂಪ್ರದಾಯವಾದಿಗಳ ಹಲ್ಲೆ, ಹೀಯಾಳಿಕೆ, ಹೊಡೆತ ಮತ್ತು ಹಲಬಗೆಯ ಕಾಟ-ಕಿರುಕುಳ, ಸವಾಲು-ಸಮಸ್ಯೆಗಳಿಗೆ ಗುಂಡಿಗೆಯೊಡ್ಡಿ, ವಿದ್ಯಾವಂಚಿತರಾಗಿ, ಹೀನಾಯವಾದ ಹೊಡೆಬಾಳನ್ನು ಸಾಗಿಸುತ್ತಿದ್ದ ಶೋಷಿತ ಜನವರ್ಗಗಳಲ್ಲಿ, ಅದರಲ್ಲೂ ಹುಡುಗಿಯರಲ್ಲಿ, “ಬಂಧನದಿಂದ ಮುಕ್ತಿಗೆ ಎರಡಕ್ಕರವೇ ಸಾಕು!” ಎಂಬ ಚೊಕ್ಕ ತಿಳಿವಳಿಕೆಯನ್ನು ಬಿತ್ತಿ, ಹುರಿದುಂಬಿ, ಮೂಲೆಮೂಲೆಗಳಲ್ಲಿ ಮಟ್ಟಮೊದಲ ಪಾಠಶಾಲೆಗಳನ್ನು ತೆರೆದು, ಜ್ಞಾನಜ್ಯೋತಿಯನ್ನು ದೀನದಲಿತರ ಮನೆಮನೆಗಳಲ್ಲೂ ಬೆಳಗಿಸಿ, ಕಲಿಕೆಯ ಬುಡಮಟ್ಟದಲ್ಲಿ ಮೊದಲ ಸಂಚಲನವನ್ನೆಬ್ಬಿಸಿದ “ಸಾವಿತ್ರಿಬಾಯಿ” ಅಲ್ಲವೇ ನಮ್ಮ “ಮೊದಲ ಗುರುವು”? ದಮನಿತ-ಪೀಡಿತ-ತಿರಸ್ಕೃತ-ಧ್ವನಿವಂಚಿತ ಸಮುದಾಯಗಳನ್ನು ಹೀಗೆ ’ಸಾವಿನಿಂದ ಉಳಿಸಿದ’ ಅವರು “ಸಾವಿತ್ರಿ”ಯಷ್ಟೇ ಅಲ್ಲ, ಸತ್ಪಾತ್ರರಿಗೆ ಉದಾತ್ತ ವಿದ್ಯಾದಾನ ಮಾಡಿದ “ಸರಸ್ವತಿ” ಕೂಡ. ಸೋಲುಂಡಿದ್ದವರಿಗೆ “ಸೊಲ್ಲು” ನೀಡಿದ “ಸೊಲ್ವೆಣ್.” ಹೀಗಾಗಿ, ನಮ್ಮ ಶಿಕ್ಷಣವಲಯದ ಮೊದಲ ಮರ್ಯಾದೆ, ಪ್ರಥಮ ನಮಸ್ಕಾರ-ಪುರಸ್ಕಾರ ಈ “ಸರಸ್ವತಿಬಾಯಿ”ಯವರಿಗಲ್ಲದೇ ಬೇರಾರಿಗೆ ಸಲ್ಲಬೇಕು? ಇದಲ್ಲದೆ, ಸಮಾಜಸುಧಾರಕರಾಗಿ, ಜಾತೀಯತೆ, ಬಾಲ್ಯವಿವಾಹ, ಶಿಶುಹತ್ಯೆ ಮುಂತಾದ ಘೋರ ಸಾಮಾಜಿಕ ಪಿಡುಗಳ ವಿರುದ್ಧವೂ, ಹೆಣ್ಮಕ್ಕಳ ಹುಟ್ಟುಹಕ್ಕುಗಳ ಪರವೂ, ಮುಂಬರುವವರಿಗೆ ಮಾದರಿಯಾಗುವಂತೆ ಕೆಚ್ಚಿನಿಂದ ಕಾದಾಡಿ, ಕಡೆಗೆ ಜನಸೇವೆಯಲ್ಲೇ (ಪ್ಲೇಗ್-ಪೀಡಿತನೋರ್ವನನ್ನು ಉಳಿಸಲು ಹೋಗಿ) ಮಡಿದ ಸಾವಿತ್ರಿಬಾಯಿಯವರು ಅಪ್ಪಟ “ಹುತಾತ್ಮ”ರು! “ ಮಹಾತ್ಮ ”ಜೋತಿಬಾ ಅವರ ಸಾರ್ಥಕ ಸಂಗಾತಿಯಾದವರು!" “ಮಾಲಿ” ಎಂಬ "ತೋಟಗಾರ-ಹೂವಾಡಿಗ" ಪರಂಪರೆಯವರಾಗಿದ್ದು, “ಫುಲೇ” ಅರ್ಥಾತ್ “ಹೂವು” ("ಪ್ರಫುಲ್ಲ ಪುಷ್ಪ") ಎಂಬ ಹೆಸರಾಂತಿದ್ದ ಈ ದಂಪತಿಯು, ಮಕ್ಕಳ ಓದಿಗಾಗಿ “ಬಾಲ-ಉದ್ಯಾನ” (“kindergarten”) ಬೆಳೆಸಿದುದು ಸೋಜಿಗವೇ ಸರಿ. ಹಿಸುಕಿ-ಹೊಸಕಿ ಹೋಗುತ್ತಿದ್ದ ಹೂಮೊಗ್ಗುಗಳು ಹೊರಳಿ ಹೊಸತಾಗಿ ಹಿಗ್ಗಿ, ಹಸನಾದ ಹೂಗಂಪನ್ನು ಹೊರಹೊಮ್ಮುವಂತಾಗಿಸಿದ, ಹಾಗೂ ವಿದ್ಯೆಯ ಗಂಧವೇ ತಾಕದಿದ್ದವರಲ್ಲಿ ಅದರ ಪರಿಮಳವನ್ನು ಅರಳಿಸಿದ, ಫುಲೇ! ದಂಪತಿಗಿದೋ, ಹೂಗೊಂಚಲೊಂದಿಗೆ, "ಭಲೇ! ಭಲೇ!" ಜೈಕಾರ. ಸಾವಿತ್ರಿಬಾಯಿಯವರ ಸ್ಮರಣೆಯಲ್ಲಿ ಈ ದಿನವು ಮಹಾರಾಷ್ಟ್ರದಲ್ಲಿ “ಬಾಲಿಕಾ ದಿನ” ಆಗಿದೆ, ನಿಜ. ಆದರೆ, ಸಾವಿತ್ರಿಬಾಯಿ ಅವರ ದಿವ್ಯ ಸ್ಮರಣೆಯಲ್ಲಿ ಅವರ ಈ ಜನ್ಮದಿನಾಂಕವನ್ನೇ “ಶಿಕ್ಷಕರ ದಿನ-ಅಕ್ಷರದ ದಿನ” ಎಂದು ನ್ಯಾಯಸಮ್ಮತವಾಗಿ, ಆದರಪೂರ್ವಕವಾಗಿ ದೇಶಾದ್ಯಂತ ಮಾನ್ಯಮಾಡಬೇಕು. ಇಡೀ ಭಾರತವು, “ಆ ಮಾತಾಯಿ ನಮ್ಮ ನಡುವೆ ಎದ್ದು ಬಂದು, ಬಿದ್ದು ಬೇನೆಯಲ್ಲಿದ್ದ ಲೆಕ್ಕವಿಲ್ಲದಷ್ಟು ಮಂದಿ ಎದ್ದುಬರುವಂತೆ ಮಾಡಿದಳಲ್ಲ!" ಎಂಬ ಅಭಿಮಾನದಿಂದ, ಧನ್ಯತೆಯಿಂದ ಅವರನ್ನು ಈವೊತ್ತು ನೆನಪಿಸಿಕೊಳ್ಳಬೇಕು. ಹಾಗಾದರೆ, “ಸೆಪ್ಟೆಂಬರ್ ೫” ಯಾವ ದಿನಾಚರಣೆಯಾಗಬೇಕು? ಅದು “ಪ್ರಾಧ್ಯಾಪಕರ ದಿನ-ಪಂಡಿತರ ದಿನ” ಎಂದಾಗಿ, ಉನ್ನತ ಅಧ್ಯಯನ, ಅಧ್ಯಾಪನ, ಸಂಶೋಧನ, ಪ್ರವಚನ ಇತ್ಯಾದಿ ಕಾರ್ಯಗಳಲ್ಲಿ ನಿರತರಾಗಿರುವವರಿಂದ ಆಚರಿಸಲ್ಪಡಬಹುದು. “ಶಿಕ್ಷಣ” ಎಂಬುದನ್ನು ತಳಹದಿಯಾಗಿ ಒದಗಿಸುವ “ಮೇಷ್ಟ್ರು-ಮೇಡಮ್ಮು”ಗಳ ಹೆಸರಿನಲ್ಲಿ ಈ ದಿನವು “Schoolteachers’ Day” ಎಂದಾಗಿ, ಆ ದಿನವು “Lecturers’ Day, Professors’ Day or Scholars’ Day” ಎಂದಾಗಬಹುದಲ್ಲವೇ? ಅಕ್ಕರದ ಕಲಿಕೆಯಲಿ ಅಕ್ಕರೆಯೆಂದಿಗೂ ತುಂಬಿರಲಿ! ಶಿಕ್ಷಣ ಎಂದಾಕ್ಷಣ “ಶಿಕ್ಷೆ”ಯು ಪ್ರತ್ಯಕ್ಷವಾಗದಿರಲಿ! ನಿಮ್ಮ ಎಸ್.ಜಿ. ಸೀತಾರಾಮ್ ಕನ್ನಡಕಲಿ, ಬಿತ್ತರಿಕೆ, ಜನವರಿ ೦೩, ೨೦೨೪ ಶಿಕ್ಷಕರ ದಿನ ಎಂದರೆ ನಿಜವಾಗಿ, ನ್ಯಾಯವಾಗಿ, ಈ ದಿನವೇ! ಲೇಖಕರು: ಎಸ್.‌ ಜಿ. ಸೀತಾರಾಮ್‌, ಮೈಸೂರು

Jan 04, 202405:19
ಕೃಷ್ಣಮಾಸದ ಪಾರ್ಥನ ಪ್ರಾರ್ಥನೆ‌ : Arjuna's Prayer in Krishnamasa

ಕೃಷ್ಣಮಾಸದ ಪಾರ್ಥನ ಪ್ರಾರ್ಥನೆ‌ : Arjuna's Prayer in Krishnamasa

👍 Like it? ...... ⁠⁠⁠⁠⁠Subscribe and Share! ⁠⁠⁠⁠⁠

👁️ ⁠⁠⁠⁠⁠Watch it⁠⁠⁠⁠⁠  🕮 ⁠⁠⁠⁠⁠Read it ⁠⁠⁠⁠⁠  👂 ⁠⁠⁠⁠⁠Listen it⁠⁠⁠⁠⁠ 

📧 ⁠⁠⁠⁠⁠Subscribe to our newsletter

ಎಲ್ಲರಿಗೂ ಕೃಷ್ಣಮಾಸ ಶುಭ-ಶೋಭೆಗಳನ್ನು ತರಲಿ ಶ್ರೀ ಕೃಷ್ಣ ಪರಮಾತ್ಮ ನರನಿಗೆ ಗೀತೋಪದೇಶ ಮಾಡಿದ ತಿಂಗಳು. ಅಂದರೆ, ಗೀತಾ ಜಯಂತಿಯ ತಿಂಗಳು. ಗೀತೆಯನ್ನು ಪಠಿಸುತ್ತ, ಮನನಿಸುತ್ತ, ಅರ್ಜುನನ ನಿಮಿತ್ತ ಮನುಜರಿಗೆ ದೊರಕಿದ ಕೃಷ್ಣ ಎನ್ನುವ ಜ್ಞಾನಾಮೃತವನ್ನು ಸವಿಯುತ್ತ ಕೃಷ್ಣಮಾಸವಿಡಿ ನಲಿಯೋಣ ***** ಕೃಷ್ಣಮಾಸದ ಪಾರ್ಥನ ಪ್ರಾರ್ಥನೆ‌ ***** ಗೀತೆಯ ೧೧ನೆ ಅಧ್ಯಾಯದಲ್ಲಿ, ವಿಶ್ವರೂಪ ದರ್ಶನದ ನಂತರ, ಬರುವ ಕೆಲವು ಶ್ಲೋಕಗಳು. ಅರ್ಜುನನಿಗೆ ತನ್ನ ಕರ್ತವ್ಯ ಏನು, ಅಂದರೆ, ತಾನು ಮಾಡಬೇಕಾದುದು ಏನು ಮತು ತನ್ನ ಪಾತ್ರ ಏನು; ‌ ಮುಖ್ಯವಾಗಿ, ಕೃಷ್ಣನ ನೈಜ ಸ್ವರೂಪ ಯಾವುದು, ಕೃಷ್ಣ ಅಂದರೆ ಯಾರು ಎನ್ನುವ ಅರಿವು ಮೂಡಿದಾಗ, ಜ್ಞಾನೋದಯ ಆದಾಗ, ಅರ್ಜುನ ಭಗವಂತನಿಗೆ ಹೇಳಿದ ಮಾತುಗಳು ಇವು. ಯಾರೇ ಆಗಲಿ, ತಮ್ಮ ತಪ್ಪಿನ ಅರಿವಾದಾಗ, ಸಂಶಯಗಳು ಅಳಿದು ಮಾರ್ಗದರ್ಶನ ದೊರೆತಾಗ‌, ಮನಸ್ಸಿನಲ್ಲಿ ಏಳುವ ವಿನಮ್ರತೆಯ ಮತ್ತು ಧನ್ಯತೆಯ ಭಾವಗಳನ್ನು ಮನೋಜ್ಞವಾಗಿ ಬಿಂಬಿಸುವ, ಕಣ್ಣಲ್ಲಿ ನೀರು ತರಿಸುವಂಥ ಮಾತುಗಳು ಇವು. ಸಂಜಯ ಉವಾಚ ಏತಚ್ಛ್ರುತ್ವಾ ವಚನಂ ಕೇಶವಸ್ಯ ಕೃತಾಂಜಲಿರ್ವೇಪಮಾನಃ ಕಿರೀಟೀ ನಮಸ್ಕೃತ್ವಾ ಭೂಯ ಏವಾಹ ಕೃಷ್ಣಂ ಸಗದ್ಗದಂ ಭೀತಭೀತಃ ಪ್ರಣಮ್ಯ ೧೧.೩೫ ಸಂಜಯನು ಹೇಳಿದನು: ಕೇಳಿ ಅರಿಸೂದನನ ಆ ಮಾತುಗಳನು, ಕೈಮುಗಿದು, ಅದಿರುತ್ತ ಗಾಂಡೀವಿ ಆಗ ನಮಿಸಿ ಮಾಧವನಿಗೆ, ಅಳುಕಿನಲ್ಲಿ ಮತ್ತೆ ಹೇಳಿದನು ಮಣಿಯುತ್ತ ನಡುಗು ದನಿಯಲ್ಲಿ: ಅರ್ಜುನ ಉವಾಚ ತ್ವಮಾದಿದೇವಃ ಪುರುಷಃ ಪುರಾಣಃ ತ್ವಮಸ್ಯ ವಿಶ್ವಸ್ಯ ಪರಂ ನಿಧಾನಂ ವೇತ್ತಾಸಿ ವೇದ್ಯಂ ಚ ಪರಂ ಚ ಧಾಮ ತ್ವಯಾ ತತಂ ವಿಶ್ವಮನಂತರೂಪ ೧೧.೩೮ ಅರ್ಜುನನು ಪ್ರಾರ್ಥಿಸಿದನು: ದೇವ ಮೊದಲಿಗನು ನೀ, ಹಳೆಯಾಳು ನೀನು; ಜಗಕೆ ನೆರ, ಮೂಲ, ಕಡು ಆಸರೆಯು ನೀನು; ಪರಮ ನೆಲೆ, ಅರಿಯುವುದು ಅರಿಯುವವ ನೀನು, ವಿಶ್ವವನು ಹೊದಳಿರುವ ರೂಪ ಅಗಣಿತನು. ವಾಯುರ್ಯಮೋಽಗ್ನಿರ್ವರುಣಃ ಶಶಾಂಕಃ ಪ್ರಜಾಪತಿಸ್ತ್ವಂ ಪ್ರಪಿತಾಮಹಶ್ಚ ನಮೋ ನಮಸ್ತೇಽಸ್ತು ಸಹಸ್ರಕೃತ್ವಃ ಪುನಶ್ಚ ಭೂಯೋಽಪಿ ನಮೋ ನಮಸ್ತೇ ೧೧.೩೯ ಬೆಂಕಿ, ಯಮ, ಜಲ, ಗಾಳಿ, ಚಂದಿರನು ನೀನು; ಜಗಕೆ ಮುತ್ತಾತ ನೀ, ಹೊಂಬಸಿರ ನೀನು; ಸಾವಿರ ಸರತಿ ಮಣಿವೆ, ಕೈ ಮುಗಿವೆ ನಾನು, ಬಾಗುವೆನು ನಿನಗೆ, ಎರಗುವೆನು ತಿರುತಿರುಗಿ.ನಮಃ ಪುರಸ್ತಾದಥ ಪೃಷ್ಠತಸ್ತೇ ನಮೋಽಸ್ತು ತೇ ಸರ್ವತ ಏವ ಸರ್ವ ಅನಂತವೀರ್ಯಾಮಿತವಿಕ್ರಮಸ್ತ್ವಂ ಸರ್ವಂ ಸಮಾಪ್ನೋಷಿ ತತೋಽಸಿ ಸರ್ವಃ ೧೧.೪೦ ನಮಿಸುವೆನು ನಾ ಮುಂದೆ, ನಮಿಸುವೆನು ಹಿಂದೆ, ನಮಿಸುವೆನು ಎಲ್ಲೆಡೆಗೆ, ಓ ಎಲ್ಲ, ನಿನಗೆ. ಕೊನೆ ಇರದ ಕೆಚ್ಚು ನೀ, ಬಲು ಬಲ್ಮೆ ಅದಟು, ಹಬ್ಬಿರುವಿ ಎಲ್ಲವನು; ಇಂತೆಲ್ಲ ನೀನೆ. ಸಖೇತಿ ಮತ್ವಾ ಪ್ರಸಭಂ ಯದುಕ್ತಂ ಹೇ ಕೃಷ್ಣ ಹೇ ಯಾದವ ಹೇ ಸಖೇತಿ ಅಜಾನತಾ ಮಹಿಮಾನಂ ತವೇದಂ ಮಯಾ ಪ್ರಮಾದಾತ್ಪ್ರಣಯೇನ ವಾಽಪಿ ೧೧.೪೧ ಮಿತಿಯಿರದೆ, ಮುಂಗಣಿಸಿ, ಬರಿ ಗೆಳೆಯನೆಂದು, ತಿಳಿಯದೆಯೆ, ಒಲವಿನಲಿ, ಗಮನಿಸದೆ ನಾನು "ಹೇ ಗೆಳೆಯ, ಹೇ ಕೃಷ್ಣ, ಯಾದವನೆ" ಎಂದು ಏನನೆಂದೆನೊ ನಿನ್ನ ಹಿರಿಮೆಯನರಿಯದೆ!ಯಚ್ಚಾವಹಾಸಾರ್ಥಮಸತ್ಕೃತೋಽಸಿ ವಿಹಾರಶಯ್ಯಾಸನಭೋಜನೇಷು ಏಕೋಽಥವಾಪ್ಯಚ್ಯುತ ತತ್ಸಮಕ್ಷಂ ತತ್ಕ್ಷಾಮಯೇ ತ್ವಾಮಹಮಪ್ರಮೇಯಂ ೧೧.೪೨ ಕುಳಿತಿರಲು, ಮಲಗಿರಲು, ಉಣುತಿರಲು ನಾವು, ಆಟದಲಿ, ಮಾನಿಸದೆ ಉಪಹಾಸಕೆಂದು ಒಬ್ಬನೆಯೆ ಯಾ ಗೆಳೆಯರೊಡಗೂಡಿ ನಾನು ಏನೆ ಅಂದುದನು ನೀ ಕ್ಷಮಿಸು, ಅಳವಿಲನೆ. ತಸ್ಮಾತ್ಪ್ರಣಮ್ಯ ಪ್ರಣಿಧಾಯ ಕಾಯಂ ಪ್ರಸಾದಯೇ ತ್ವಾಮಹಮೀಶಮೀಡ್ಯಂ ಪಿತೇವ ಪುತ್ರಸ್ಯ ಸಖೇವ ಸಖ್ಯುಃ ಪ್ರಿಯಃ ಪ್ರಿಯಾಯಾರ್ಹಸಿ ದೇವ ಸೋಢುಂ ೧೧.೪೪ ಅಂತೆ, ನಿನ್ನೆದುರು ನಾ ಮೈಯೊಡ್ಡಿ ಉದ್ದ ನಮಿಸುವೆನು, ಹಾತೊರೆವೆ ನಿನ್ನ ಕ್ಷಮೆ ದಯೆಗಳಿಗೆ, ಒಲವಿನೊಡೆಯನೆ; ಗೆಳೆಯ ಗೆಳೆಯನನು, ತಂದೆ ಮಗನನು, ಇನಿಯ ಇನಿಯಳನು ಕ್ಷಮಿಸುವಂತೆನ್ನನ್ನು ನೀ ಕ್ಷಮಿಸು, ಎರೆಯನೆ, ಕರುಣಿಸಿ ಕನ್ನಡ ಕಲಿ ಬಿತ್ತರಿಕೆ ಕೃಷ್ಣಮಾಸದ ‌ಪಾರ್ಥನ ಪ್ರಾರ್ಥನೆ‌ ಸಂಸ್ಕೃತ ಮೂಲ : ವೇದವ್ಯಾಸ ಕನ್ನಡಕ್ಕೆ: ವಿಶ್ವೇಶ್ವರ ದೀಕ್ಷಿತ ಡಿಸೆಂಬರ್‌ ೨೨, ೨೦೨೩

Jan 04, 202414:15
Novರಾತ್ರಿ ಸರಣಿ, ದಿನ ೧೦, ಮಿಥ್ಯೆ ೧೧ : ಬೋನಸ್!‌ ಕನ್ನಡ ಅಭಿಮಾನ

Novರಾತ್ರಿ ಸರಣಿ, ದಿನ ೧೦, ಮಿಥ್ಯೆ ೧೧ : ಬೋನಸ್!‌ ಕನ್ನಡ ಅಭಿಮಾನ

👍 Like it? ...... ⁠⁠⁠⁠Subscribe and Share! ⁠⁠⁠⁠

👁️ ⁠⁠⁠⁠Watch it⁠⁠⁠⁠  🕮 ⁠⁠⁠⁠Read it ⁠⁠⁠⁠  👂 ⁠⁠⁠⁠Listen it⁠⁠⁠⁠ 

📧 ⁠⁠⁠⁠Subscribe to our newsletter⁠⁠⁠⁠

⁠⁠⁠⁠ಎಲ್ಲ ೧೦ ಮಿಥ್ಯೆಗಳು ಮತ್ತು ಬೋನಸ್⁠⁠⁠⁠

“ದ್ವೇಷ ಅಸೂಯಗಳಿಲ್ಲದೆ, ತಮ್ಮತನವನ್ನು ಬಿಡದೆ, ಎಲ್ಲರೊಂದಿಗೆ ಸಹಜೀವನ ನಡೆಸುತ್ತ, ಉತ್ಕೃಷ್ಟತೆಯೆ ಗುರಿಯಾಗಿ, ಭವಿಷ್ಯವನ್ನು ರೂಪಿಸಿಕೊಳ್ಳುತ್ತ ಬಾಳುವವರು ಕನ್ನಡಿಗರು.” ಕನ್ನಡದ ಬಗ್ಗೆ ಕನ್ನಡಿಗರಲ್ಲಿ ಹಬ್ಬಿಕೊಂಡಿರುವ ೧೦ ತಪ್ಪು ತಿಳುವಳಿಕೆಗಳು ಮಿಥ್ಯೆ ೧೧. (ಬೋನಸ್!) ಕನ್ನಡಿಗರು ಅಭಿಮಾನಶೂನ್ಯರು ತಪ್ಪು. ಕನ್ನಡಿಗರು ಅನೇಕ ಸಾಮ್ರಾಜ್ಯಗಳನ್ನು ಸ್ಥಾಪಿಸಿದರು. ಬನವಾಸಿಯ ಕದಂಬರು ಕೋಲಾರದ ಗಂಗರು, ಬಾದಾಮಿ ಮತ್ತು ಕಲ್ಯಾಣದ ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ವಿಜಯನಗರ ಮತ್ತು ಮೈಸೂರು ರಾಜ್ಯ ಇವೆಲ್ಲ ಗೊತ್ತಿರುವ ವಿಷಯಗಳು. ಇವರು ಇಂದಿನ ಕರ್ನಾಟಕದ ಒಳಗೆ ಮತ್ತು ಹೊರಗೆ ಹಬ್ಬಿ ಕನ್ನಡದಲ್ಲಿ ಆಳಿದರು. ಇಂದು, ಕನ್ನಡಿಗರು ಭಾರತದ ತುಂಬ ಹರಡಿಕೊಂಡಿದ್ದಾರೆ. ವಿದೇಶಗಳಲ್ಲಿ ನೆಲೆಸಿದ್ದಾರೆ. ಅವರಾರೂ ಕನ್ನಡವನ್ನು ಮರೆತಿಲ್ಲ. ನೇಪಾಳದ ಪಶುಪತಿ ದೇವಸ್ಥಾನದ ಅರ್ಚಕರು ಪರಂಪರಾಗತವಾಗಿ ಕನ್ನಡಿಗರು. ಕನ್ನಡ ಬಲ್ಲವರು. ದಿಲ್ಲಿ ಮುಂಬಯಿಗಳಲ್ಲಿ ಕನ್ನಡಿಗರು ತುಂಬಿಕೊಂಡಿದ್ದಾರೆ. ಬೆಳಿಗ್ಗೆ ಹೊರಗೆ ಹಣಿಕೆ ಹಾಕಿದರೆ ಮೂಲೆ ಮೂಲೆಗಳ ಹೊಟೇಲುಗಳಲ್ಲಿ ಕನ್ನಡದ್ದೆ ಸುಪ್ರಭಾತ! ಎಲ್ಲ ಊರುಗಳಲ್ಲೂ ಕ್ರಿಯಾಶೀಲ ಕನ್ನಡ ಸಂಘಗಳು ಇವೆ. ಕನ್ನಡ ವರ್ತಮಾನ ಪತ್ರಗಳು ಪ್ರಕಟವಾಗುತ್ತವೆ. ಕಾಯ್ಕಿಣಿ ಮತ್ತು ಜಿ.ವಿ. ಕುಲಕರ್ಣಿ "ಜೀವಿ" ಅಂಥ ಸತ್ವಯುತ ಸಾಹಿತಿಗಳು ಇದ್ದಾರೆ. ಮೇಲಾಗಿ, ದೂರದ ಹಳ್ಳಿಗಳಲ್ಲಿ ಇರುವ ಕನ್ನಡಿಗರು ಮನೆಯಲ್ಲಿ ಕನ್ನಡವನ್ನೆ ಮಾತಾಡುತ್ತಾರೆ; ಇದು ನಾನು ಗಮನಿಸಿದ ಸಂಗತಿ. ಅಮೆರಿಕೆಯಲ್ಲಿ, ಅದೂ ನಮ್ಮ ಕರ್ನಾಟಕ ಸಾಂಸ್ಕೃತಿಕ ಸಂಘದಲ್ಲಿ(KCA) ಹುಟ್ಟಿದ ಕನ್ನಡ ಕಲಿಯ ಕಿಡಿ ಇಂದು ಜಗತ್ತಿನ ಎಲ್ಲೆಡೆ ಹಬ್ಬಿಕೊಂಡು, ಮಕ್ಕಳು ಕನ್ನಡ ಕಲಿಯುತ್ತಿದ್ದಾರೆ. ಬೇರೆ ಭಾಷೆಗಳನ್ನು ಪಳಗಿಸಿಕೊಳ್ಳುವ ಮತ್ತು ಬೇರೆ ಭಾಷಿಕರನ್ನು ತನ್ನವರನ್ನಾಗಿ ಮಾಡಿಕೊಳ್ಳುವ ಶಕ್ತಿ ಕನ್ನಡಕ್ಕೆ ಇದೆ. ಇದಕ್ಕೆ, ಜ್ಞಾನಪೀಠ ಪ್ರಶಸ್ತಿ ವಿಜೇತ ಬೇಂದ್ರೆ ಮಾಸ್ತಿ ಅಂಥ ಸಾಹಿತಿಗಳನ್ನು, ಬೇರೆ ಭಾಷೆಗಳಿಂದ ಕನ್ನಡಕ್ಕೆ ಒಗ್ಗಿಕೊಂಡ ಪದಗಳನ್ನು, ಅಲ್ಲದೆ, ಧಾರವಾಡ ಪೇಢೆಯನ್ನೂ ಉದಾಹರಿಸಬಹುದು. ಒಟ್ಟಿನಲ್ಲಿ, ದ್ವೇಷ ಅಸೂಯಗಳಿಲ್ಲದೆ, ತಮ್ಮತನವನ್ನು ಬಿಡದೆ, ಎಲ್ಲರೊಂದಿಗೆ ಸಹಜೀವನ ನಡೆಸುತ್ತ, ಉತ್ಕೃಷ್ಟತೆಯೆ ಗುರಿಯಾಗಿ, ಭವಿಷ್ಯವನ್ನು ರೂಪಿಸಿಕೊಳ್ಳುತ್ತ ಬಾಳುವವರು ಕನ್ನಡಿಗರು. ಕನ್ನಡದ ಮೇಲಿನ ಪ್ರೀತಿ ಮತ್ತು ಅಭಿಮಾನ ಇರದೆ ಇವೆಲ್ಲ ಆಗಲು ಸಾಧ್ಯವಿಲ್ಲ. ಕನ್ನಡಿಗರು ಅಭಿಮಾನಿಗಳು, ದುರಭಿಮಾನಿಗಳಲ್ಲ, ಅಭಿಮಾನಶೂನ್ಯರಂತೂ ಖಂಡಿತ ಅಲ್ಲ. ಇನ್ನೇಕೆ ಸಂಕೋಚ? ಕನ್ನಡ ಕಲಿಯೋಣ; ಕನ್ನಡದಲ್ಲಿ ಮಾತಾಡೋಣ; ನಿತ್ಯ ಕನ್ನಡಿಗರಾಗೋಣ! ರಾಜ್ಯೋತ್ಸವದ ಶುಭಾಶಯಗಳು! ನಿಮ್ಮವನೆ ಆದ ವಿಶ್ವೇಶ್ವರ ದೀಕ್ಷಿತ ಕನ್ನಡ ಕಲಿ ಬಿತ್ತರಿಕೆ, Novರಾತ್ರಿ ಸರಣಿ, ದಿನ ೧೦, ನವಂಬರ ೧, ೨೦೨೩

Nov 01, 202304:05
Novರಾತ್ರಿ ಸರಣಿ, ದಿನ ೧೦, ಮಿಥ್ಯೆ ೧೦ : ಕನ್ನಡದಲ್ಲಿ ಆಡಳಿತ

Novರಾತ್ರಿ ಸರಣಿ, ದಿನ ೧೦, ಮಿಥ್ಯೆ ೧೦ : ಕನ್ನಡದಲ್ಲಿ ಆಡಳಿತ


👍 Like it? ...... ⁠⁠⁠Subscribe and Share! ⁠⁠⁠

👁️ ⁠⁠⁠Watch it⁠⁠⁠  🕮 ⁠⁠⁠Read it ⁠⁠⁠  👂 ⁠⁠⁠Listen it⁠⁠⁠ 

📧 ⁠⁠⁠Subscribe to our newsletter⁠⁠⁠

⁠⁠⁠ಎಲ್ಲ ೧೦ ಮಿಥ್ಯೆಗಳು ಮತ್ತು ಬೋನಸ್⁠⁠⁠

Novರಾತ್ರಿ ಸರಣಿ, ದಿನ ೧೦, ಮಿಥ್ಯೆ ೧೦ : ಕನ್ನಡದಲ್ಲಿ ಆಡಳಿತ ೧೦. ಕನ್ನಡ ಆಡಳಿತ ಭಾಷೆ ಆದದ್ದು ಕರ್ನಾಟಕ ಹುಟ್ಟಿದ ಮೇಲೆ ತಪ್ಪು. ಕದಂಬ, ಗಂಗ, ಚಾಲುಕ್ಯ, ರಾಷ್ಟ್ರಕೂಟ, ವಿಜಯನಗರ ಸಾಮ್ರಾಜ್ಯಗಳು ಮತ್ತು ಇತ್ತೀಚಿನ ಮೈಸೂರು ರಾಜ್ಯ ಎಲ್ಲವುಗಳಲ್ಲೂ ಕನ್ನಡ ಆಡಳಿತ ಭಾಷೆ ಆಗಿತ್ತು. ಬ್ರಿಟಿಷರು ಕೂಡ, ಕನ್ನಡ ಕಲಿತು, ಕನ್ನಡಿಗರೊಡನೆ ಕನ್ನಡದಲ್ಲಿ ವ್ಯವಹರಿಸುವ ನೀತಿಯನ್ನು ಇಟ್ಟುಕೊಂಡಿದ್ದರು. ಒಂದು ಸಾಮ್ರಾಜ್ಯದ ಮಂತ್ರಾಲೋಚನೆ, ರಕ್ಷಣೆ, ಹಣಕಾಸು, ಕಾನೂನು ಮತ್ತು ನ್ಯಾಯ, ಸಂಸ್ಕೃತಿ, ಮತ್ತು ಜನರ ನಿತ್ಯ ವ್ಯವಹಾರ ಎಲ್ಲವುಗಳನ್ನು ನಿಭಾಯಿಸಲು ಕನ್ನಡ ಆಗ ಸಮರ್ಥವಾಗಿತ್ತು, ಈಗಲೂ ಸಮರ್ಥವಾಗಿದೆ. ಇಲ್ಲಿಯ ವರೆಗೆ ತಾಳ್ಮೆಯಿಂದ ಓದಿಕೊಂಡು ಬಂದ ನಿಮಗೆ ಕಾಯ್ದಿದೆ: ರಾಜ್ಯೋತ್ಸವದ ಬೋನಸ್ಸು! ಮಿಥ್ಯೆ ೧೧ ಕನ್ನಡ ಅಭಿಮಾನ. ಇದನ್ನೂ ನೋಡಿ/ಓದಿ. ನಿಮ್ಮವನೆ ಆದ ವಿಶ್ವೇಶ್ವರ ದೀಕ್ಷಿತ ಕನ್ನಡ ಕಲಿ ಬಿತ್ತರಿಕೆ, Novರಾತ್ರಿ ಸರಣಿ, ದಿನ ೧೦, ರಾಜ್ಯೋತ್ಸವ, ನವಂಬರ ೦೧, ೨೦೨೩

Nov 01, 202302:22
Novರಾತ್ರಿ ಸರಣಿ, ದಿನ ೯, ಮಿಥ್ಯೆ ೯ : ಕನ್ನಡದ ಮರೆವು

Novರಾತ್ರಿ ಸರಣಿ, ದಿನ ೯, ಮಿಥ್ಯೆ ೯ : ಕನ್ನಡದ ಮರೆವು

👍 Like it? ...... ⁠⁠⁠Subscribe and Share! ⁠⁠⁠

👁️ ⁠⁠⁠Watch it⁠⁠⁠  🕮 ⁠⁠⁠Read it ⁠⁠⁠  👂 ⁠⁠⁠Listen it⁠⁠⁠ 

📧 ⁠⁠⁠Subscribe to our newsletter⁠⁠⁠

⁠⁠⁠ಎಲ್ಲ ೧೦ ಮಿಥ್ಯೆಗಳು ಮತ್ತು ಬೋನಸ್⁠⁠⁠

“ದ್ವೇಷ ಅಸೂಯಗಳಿಲ್ಲದೆ, ತಮ್ಮತನವನ್ನು ಬಿಡದೆ, ಎಲ್ಲರೊಂದಿಗೆ ಸಹಜೀವನ ನಡೆಸುತ್ತ, ಉತ್ಕೃಷ್ಟತೆಯೆ ಗುರಿಯಾಗಿ, ಭವಿಷ್ಯವನ್ನು ರೂಪಿಸಿಕೊಳ್ಳುತ್ತ ಬಾಳುವವರು ಕನ್ನಡಿಗರು.” ಕನ್ನಡದ ಬಗ್ಗೆ ಕನ್ನಡಿಗರಲ್ಲಿ ಹಬ್ಬಿಕೊಂಡಿರುವ ೧೦ ತಪ್ಪು ತಿಳುವಳಿಕೆಗಳು Novರಾತ್ರಿ ಸರಣಿ, ದಿನ ೯, ಮಿಥ್ಯೆ ೯ : ಕನ್ನಡದ ಮರೆವು ೯. ಕನ್ನಡ ಮಾತಾಡದಿದ್ದರೆ ಮರೆತು ಹೋಗುತ್ತದೆ ತಪ್ಪು. ಬಹಳ ಕಾಲ ಕನ್ನಡ ಮಾತಾಡದೆ ಇದ್ದಾಗ, ಓದದೆ ಇದ್ದಾಗ, ಅಥವ ಬೇರೆ ದೇಶಕ್ಕೆ ವಲಸೆ ಹೋದಾಗ ಕನ್ನಡ ಮರೆತಂತೆ ಅನಿಸಿದರೂ ಬೇರುಗಳು ಗಟ್ಚಿಯಾಗಿ ಉಳಿದಿರುತ್ತವೆ. ಸರಿ ಸಂದರ್ಭದಲ್ಲಿ ಕನ್ನಡ ಮತ್ತೆ ಚಿಗುರುವುದು ಖಚಿತ. ನನ್ನದೆ ಉದಾಹರಣೆ ಕೊಡುವುದಾದರೆ, ಅಮೆರಿಕಕ್ಕೆ ಬಂದ ಮೇಲೆ ಕೆಲ ವರ್ಷ ಕನ್ನಡ ಮಾತಾಡಲೆ ಇಲ್ಲ. ಅಂಥ ಸಂದರ್ಭಗಳೆ ಬರಲಿಲ್ಲ. ಮುಂದೆ, ೨೦ ವರ್ಷಗಳ ನಂತರ ಭಗವದ್ಗೀತೆಯನ್ನು ಕನ್ನಡಕ್ಕೆ ಅನುದನಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾಯ್ತು. ಕನ್ನಡ ಮರೆತಿದೆ, ಕನ್ನಡ ನನಗೆ ಬಾರದು, ಕನ್ನಡ ಕಠಿನ ಎನ್ನುವ ಅನೇಕ ಶಂಕೆಗಳನ್ನು ತಲೆಯಲ್ಲಿ ತುಂಬಿಕೊಂಡು, ಮೊದಲ ಅಧ್ಯಾಯದಲ್ಲೆ, ಆ ಅರ್ಜುನನ ಹಾಗೆಯೆ ಕೈ ಚೆಲ್ಲಿ ಕುಳಿತುಕೊಂಡೆ. ಮುಂದೆ ನಡೆದದ್ದು ಕರ್ನಾಟಕ! ನುಡಿದದ್ದು ಭಗವತ್ ಕಂನುಡಿ! music -Separator ಕನ್ನಡದಲ್ಲಿ ಆಡಳಿತದ ಮಿಥ್ಯೆ ೧೦ನ್ನು ನಾಳೆ ಅರಿತುಕೊಳ್ಳೋಣ ನಿಮ್ಮವನೆ ಆದ ವಿಶ್ವೇಶ್ವರ ದೀಕ್ಷಿತ ಕನ್ನಡ ಕಲಿ ಬಿತ್ತರಿಕೆ, Novರಾತ್ರಿ ಸರಣಿ, ದಿನ ೯, ಅಕ್ಟೋಬರ ೩೧, ೨೦೨೩

Oct 31, 202302:38
Novರಾತ್ರಿ ಸರಣಿ,ದಿನ ೮,ಮಿಥ್ಯೆ ೮: ಕನ್ನಡದ ವೈಜ್ಞಾನಿಕ ದೌರ್ಬಲ್ಯ

Novರಾತ್ರಿ ಸರಣಿ,ದಿನ ೮,ಮಿಥ್ಯೆ ೮: ಕನ್ನಡದ ವೈಜ್ಞಾನಿಕ ದೌರ್ಬಲ್ಯ

👍 Like it? ...... ⁠⁠⁠Subscribe and Share! ⁠⁠⁠

👁️ ⁠⁠⁠Watch it⁠⁠⁠  🕮 ⁠⁠⁠Read it ⁠⁠⁠  👂 ⁠⁠⁠Listen it⁠⁠⁠ 

📧 ⁠⁠⁠Subscribe to our newsletter⁠⁠⁠

⁠⁠⁠ಎಲ್ಲ ೧೦ ಮಿಥ್ಯೆಗಳು ಮತ್ತು ಬೋನಸ್⁠⁠⁠

“ದ್ವೇಷ ಅಸೂಯಗಳಿಲ್ಲದೆ, ತಮ್ಮತನವನ್ನು ಬಿಡದೆ, ಎಲ್ಲರೊಂದಿಗೆ ಸಹಜೀವನ ನಡೆಸುತ್ತ, ಉತ್ಕೃಷ್ಟತೆಯೆ ಗುರಿಯಾಗಿ, ಭವಿಷ್ಯವನ್ನು ರೂಪಿಸಿಕೊಳ್ಳುತ್ತ ಬಾಳುವವರು ಕನ್ನಡಿಗರು.” ಕನ್ನಡದ ಬಗ್ಗೆ ಕನ್ನಡಿಗರಲ್ಲಿ ಹಬ್ಬಿಕೊಂಡಿರುವ ೧೦ ತಪ್ಪು ತಿಳುವಳಿಕೆಗಳು Novರಾತ್ರಿ ಸರಣಿ, ದಿನ ೮, ಮಿಥ್ಯೆ ೮ : ಕನ್ನಡದ ವೈಜ್ಞಾನಿಕ ದೌರ್ಬಲ್ಯ ೮. ಮುಂದುವರೆದ ವಿಜ್ಞಾನ ಮತ್ತು ತಾಂತ್ರಿಕ ಶಿಕ್ಷಣ ಕನ್ನಡದಲ್ಲಿ ಅಸಾಧ್ಯ ತಪ್ಪು. ಈ ನಿಟ್ಟಿನಲ್ಲಿ ಕರ್ನಾಟಕ ಸರಕಾರ ಮತ್ತು ಅದರ ಅನೇಕ ಘಟಕಗಳು, ಪ್ರಾಧಿಕಾರಗಳು ಸಾಕಷ್ಟು ಕೆಲಸ ಮಾಡಿವೆ, ಮಾಡುತ್ತಿವೆ. ಕನ್ನಡದಲ್ಲಿ ವೈಜ್ಞಾನಿಕ ಮತ್ತು ತಾಂತ್ರಿಕ ಪುಸ್ತಕಗಳ ಪ್ರಕಟಣೆ ವಿವಿಧ ಕ್ಷೇತ್ರಗಳ ಪಾರಿಭಾಷಿಕ ಪದಗಳ ಪಟ್ಟಿ ವಿಜ್ಞಾನ ಪ್ರದರ್ಶನ, ಮತ್ತು ಕಾರ್ಯಾಗಾರಗಳನ್ನು ನಡೆಸುತ್ತಿವೆ. ಕರ್ನಾಟಕ ವಿಜ್ಞಾನ ಪರಿಷತ್ತು ನಿರಂತರ ದುಡಿಯುತ್ತಿದೆ. ಸದ್ಯ, ಕನ್ನಡದಲ್ಲಿ ಮುಂದುವರೆದ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿಲ್ಲ, ನಿಜ; ಆದರೆ ಹಾಗೆ ಕಲಿಯುವುದೇ ಅಸಾಧ್ಯ ಎನ್ನುವುದು ತಪ್ಪು. ಕನ್ನಡದಲ್ಲಿ ಕಲಿತ ವಿಜ್ಞಾನದ ವಿದ್ಯಾರ್ಥಿಗಳು ಸಮರ್ಥ ವಿಜ್ಷಾನಿಗಳು, ಇಂಜಿನಿಯರುಗಳು, ವೈದ್ಯರು, ಮತ್ತು ಸಂಶೋಧಕರು ಆಗಿದ್ದಾರೆ. ಕನ್ನಡದ ಮರೆವಿನ ಮಿಥ್ಯೆ ೯ನ್ನು ನಾಳೆ ಅರಿತುಕೊಳ್ಳೋಣ ನಿಮ್ಮವನೆ ಆದ ವಿಶ್ವೇಶ್ವರ ದೀಕ್ಷಿತ ಕನ್ನಡ ಕಲಿ ಬಿತ್ತರಿಕೆ, Novರಾತ್ರಿ ಸರಣಿ, ದಿನ ೮, ಅಕ್ಟೋಬರ ೩೦, ೨೦೨೩

Oct 30, 202302:26
Novರಾತ್ರಿ ಸರಣಿ, ದಿನ ೭, ಮಿಥ್ಯೆ ೭ : ಕನ್ನಡದ ಕಠಿನತೆ

Novರಾತ್ರಿ ಸರಣಿ, ದಿನ ೭, ಮಿಥ್ಯೆ ೭ : ಕನ್ನಡದ ಕಠಿನತೆ

👍 Like it? ...... ⁠⁠⁠Subscribe and Share! ⁠⁠⁠

👁️ ⁠⁠⁠Watch it⁠⁠⁠  🕮 ⁠⁠⁠Read it ⁠⁠⁠  👂 ⁠⁠⁠Listen it⁠⁠⁠ 

📧 ⁠⁠⁠Subscribe to our newsletter⁠⁠⁠

⁠⁠⁠ಎಲ್ಲ ೧೦ ಮಿಥ್ಯೆಗಳು ಮತ್ತು ಬೋನಸ್⁠⁠⁠

“ದ್ವೇಷ ಅಸೂಯಗಳಿಲ್ಲದೆ, ತಮ್ಮತನವನ್ನು ಬಿಡದೆ, ಎಲ್ಲರೊಂದಿಗೆ ಸಹಜೀವನ ನಡೆಸುತ್ತ, ಉತ್ಕೃಷ್ಟತೆಯೆ ಗುರಿಯಾಗಿ, ಭವಿಷ್ಯವನ್ನು ರೂಪಿಸಿಕೊಳ್ಳುತ್ತ ಬಾಳುವವರು ಕನ್ನಡಿಗರು.” ಕನ್ನಡದ ಬಗ್ಗೆ ಕನ್ನಡಿಗರಲ್ಲಿ ಹಬ್ಬಿಕೊಂಡಿರುವ ೧೦ ತಪ್ಪು ತಿಳುವಳಿಕೆಗಳು Novರಾತ್ರಿ ಸರಣಿ, ದಿನ ೭, ಮಿಥ್ಯೆ ೭ : ಕನ್ನಡದ ಕಠಿನತೆ ೭. ಕನ್ನಡ ಕಲಿಯುವುದು ಸುಲಭವಲ್ಲ ತಪ್ಪು. ಇದು ಕನ್ನಡವನ್ನು ಇಂಗ್ಲೀಷಿಗೆ ಮೇಲ್ನೋಟದಲ್ಲಿ ಹೋಲಿಸಿ ಸಾಮಾನ್ಯವಾಗಿ ಹೇಳುವ ಹಗುರ ಮಾತು. "ಕನ್ನಡದಲ್ಲಿ ೪೯ ಅಕ್ಷರಗಳು ಮತ್ತು ಅವುಗಳ ಒತ್ತಕ್ಷರಗಳು ಇವೆ; ಇಂಗ್ಲಿಷಲ್ಲಿ ಕೇವಲ ೨೬" ಎಂಬುದು ಅವರ ವಾದ, ಕೇವಲ ಸಂಖ್ಯೆಗಳ ಗುದ್ದಾಟ. ಕೆದಕಿ ನೋಡಿದರೆ, ಇಂಗ್ಲೀಷ್ ನಲ್ಲಿ ದೊಡ್ಡ ಮತ್ತು ಸಣ್ಣ ಅಕ್ಷರಗಳು ಸೇರಿ ೫೨ ಅಕ್ಷರಗಳು ಮೇಲಾಗಿ ೪೪ ಉಲಿಮೆಗಳು (phonemes) ಕೂಡ ಇವೆ. ಉಚ್ಚಾರಕ್ಕೂ ಬರೆಯುವುದಕ್ಕೂ ಏಕರೂಪಿ ಸಂಬಂಧವಿಲ್ಲ. ಕನ್ನಡ ವರ್ಣಮಾಲೆ ತಾರ್ಕಿಕವಾಗಿದ್ದು ಮತ್ತು ಉಲಿಮಿಕ (phonetic) ಆಗಿದೆ. ಸಂಧಿ, ಸಮಾಸ, ಮತ್ತು ಹೊಸ ಪದಗಳನ್ನು ಹುಟ್ಟಿಸಿಕೊಳ್ಳಲು ತದ್ಭವ ನಿಯಮಗಳಿವೆ. ಮೇಲಾಗಿ ಕನ್ನಡ ಅರ್ಥ ದೃಷ್ಟಿಯಿಂದ (semantically) ಶ್ರೀಮಂತವಾಗಿದೆ. ಕನ್ನಡದ ವೈಜ್ಞಾನಿಕ ದೌರ್ಬಲ್ಯದ ಮಿಥ್ಯೆ ೮ನ್ನು ನಾಳೆ ಅರಿತುಕೊಳ್ಳೋಣ ನಿಮ್ಮವನೆ ಆದ ವಿಶ್ವೇಶ್ವರ ದೀಕ್ಷಿತ ಕನ್ನಡ ಕಲಿ ಬಿತ್ತರಿಕೆ, Novರಾತ್ರಿ ಸರಣಿ, ದಿನ ೭, ಅಕ್ಟೋಬರ ೨೯, ೨೦೨೩

Oct 29, 202302:37
Novರಾತ್ರಿ ಸರಣಿ, ದಿನ ೬,ಮಿಥ್ಯೆ ೬: ಕನ್ನಡದ ದುಷ್ಪ್ರಭಾವ

Novರಾತ್ರಿ ಸರಣಿ, ದಿನ ೬,ಮಿಥ್ಯೆ ೬: ಕನ್ನಡದ ದುಷ್ಪ್ರಭಾವ

👍 Like it? ...... ⁠⁠⁠Subscribe and Share! ⁠⁠⁠

👁️ ⁠⁠⁠Watch it⁠⁠⁠  🕮 ⁠⁠⁠Read it ⁠⁠⁠  👂 ⁠⁠⁠Listen it⁠⁠⁠ 

📧 ⁠⁠⁠Subscribe to our newsletter⁠⁠⁠

⁠⁠⁠ಎಲ್ಲ ೧೦ ಮಿಥ್ಯೆಗಳು ಮತ್ತು ಬೋನಸ್⁠⁠⁠

“ದ್ವೇಷ ಅಸೂಯಗಳಿಲ್ಲದೆ, ತಮ್ಮತನವನ್ನು ಬಿಡದೆ, ಎಲ್ಲರೊಂದಿಗೆ ಸಹಜೀವನ ನಡೆಸುತ್ತ, ಉತ್ಕೃಷ್ಟತೆಯೆ ಗುರಿಯಾಗಿ, ಭವಿಷ್ಯವನ್ನು ರೂಪಿಸಿಕೊಳ್ಳುತ್ತ ಬಾಳುವವರು ಕನ್ನಡಿಗರು.” ಕನ್ನಡದ ಬಗ್ಗೆ ಕನ್ನಡಿಗರಲ್ಲಿ ಹಬ್ಬಿಕೊಂಡಿರುವ ೧೦ ತಪ್ಪು ತಿಳುವಳಿಕೆಗಳು Novರಾತ್ರಿ ಸರಣಿ: ಬನ್ನಿ, ದಿನಕ್ಕೊಂದು ತಪ್ಪು ತಿಳುವಳಿಕೆಯನ್ನು, ತಾಯಿ ಭುವನೇಶ್ವರಿಯ ಕೃಪಾಕಟಾಕ್ಷದಿಂದ ಪರಿಹರಿಸಿಕೊಂಡು, ೧೦ನೆಯ ದಿನ, ಅಂದರೆ ನವಂಬರ ೧ರಂದು, ತಿಳಿಮನಸ್ಸಿನಿಂದ ರಾಜ್ಯೋತ್ಸವವನ್ನು ಆಚರಿಸೋಣ. ೬. ಕನ್ನಡ ಕಲಿತರೆ ಇತರ ಭಾಷೆಗಳ ಕಲಿಕೆ ಕುಂಠಿತವಾಗುತ್ತದೆ ತಪ್ಪು. ಈ ಕಲ್ಪನೆ ತಪ್ಪು ಎಂದು ಅನೇಕ ವರದಿಗಳು ಸಾಬೀತು ಮಾಡಿವೆ. ಮೇಲಾಗಿ ಎರಡು ಭಾಷೆಗಳನ್ನು ಕಲಿತಾಗ ಬುದ್ದಿ ಚುರುಕಾಗುವುದು ಎಂದು ತಿಳಿಸುತ್ತವೆ. ಬೆಂಗಳೂರಿನಲ್ಲಿ, ಪ್ರಚಲಿತವಿರುವ ಎಲ್ಲ ಭಾಷೆಗಳನ್ನು ತಿಳಿದು ವ್ಯವಹರಿಸುವವರು ಕನ್ನಡಿಗರು ಮಾತ್ರ! ಬೆಂಗಳೂರು ಭಾರತದ ಸಿಲಿಕಾನ್ ನಗರವಾಗಿ ಎಲ್ಲ ಭಾಷಿಕರನ್ನು ಆಕರ್ಷಿಸುತ್ತಿರುವುದು ಸುಮ್ಮನೆ ಏನು? ಅತ್ಯಂತ ಸೃಜನ ಶೀಲ ಉದ್ಯಮ, ಸಾಹಿತ್ಯ, ಸಂಸ್ಕೃತಿಗಳ ಕೇಂದ್ರವಾಗಿ ಸಿಲಿಕಾನ್ ನಗರ ಎಂದು ಹೆಸರಾಗಿದ್ದು, ಇದಕ್ಕೆ ಕನ್ನಡಿಗರ ಬಹುಭಾಷಿಕತನವೆ ಕಾರಣ ಅಲ್ಲವೆ? ಕನ್ನಡದ ಕಠಿನತೆಯ ಮಿಥ್ಯೆ ೭ನ್ನು ನಾಳೆ ಅರಿತುಕೊಳ್ಳೋಣ ನಿಮ್ಮವನೆ ಆದ ವಿಶ್ವೇಶ್ವರ ದೀಕ್ಷಿತ ಕನ್ನಡ ಕಲಿ ಬಿತ್ತರಿಕೆ, Novರಾತ್ರಿ ಸರಣಿ, ದಿನ ೬, ಅಕ್ಟೋಬರ ೨೮, ೨೦೨೩

Oct 28, 202302:16
Novರಾತ್ರಿ ಸರಣಿ, ದಿನ ೫, ಮಿಥ್ಯೆ ೫: ಕನ್ನಡದ ಅದೈವಿಕತೆ

Novರಾತ್ರಿ ಸರಣಿ, ದಿನ ೫, ಮಿಥ್ಯೆ ೫: ಕನ್ನಡದ ಅದೈವಿಕತೆ

👍 Like it? ...... ⁠⁠⁠Subscribe and Share! ⁠⁠⁠

👁️ ⁠⁠⁠Watch it⁠⁠⁠  🕮 ⁠⁠⁠Read it ⁠⁠⁠  👂 ⁠⁠⁠Listen it⁠⁠⁠ 

📧 ⁠⁠⁠Subscribe to our newsletter⁠⁠⁠

⁠⁠⁠ಎಲ್ಲ ೧೦ ಮಿಥ್ಯೆಗಳು ಮತ್ತು ಬೋನಸ್⁠⁠⁠

“ದ್ವೇಷ ಅಸೂಯಗಳಿಲ್ಲದೆ, ತಮ್ಮತನವನ್ನು ಬಿಡದೆ, ಎಲ್ಲರೊಂದಿಗೆ ಸಹಜೀವನ ನಡೆಸುತ್ತ, ಉತ್ಕೃಷ್ಟತೆಯೆ ಗುರಿಯಾಗಿ, ಭವಿಷ್ಯವನ್ನು ರೂಪಿಸಿಕೊಳ್ಳುತ್ತ ಬಾಳುವವರು ಕನ್ನಡಿಗರು.” ಕನ್ನಡದ ಬಗ್ಗೆ ಕನ್ನಡಿಗರಲ್ಲಿ ಹಬ್ಬಿಕೊಂಡಿರುವ ೧೦ ತಪ್ಪು ತಿಳುವಳಿಕೆಗಳು Novರಾತ್ರಿ ಸರಣಿ: ಬನ್ನಿ, ದಿನಕ್ಕೊಂದು ತಪ್ಪು ತಿಳುವಳಿಕೆಯನ್ನು, ತಾಯಿ ಭುವನೇಶ್ವರಿಯ ಕೃಪಾಕಟಾಕ್ಷದಿಂದ ಪರಿಹರಿಸಿಕೊಂಡು, ೧೦ನೆಯ ದಿನ, ಅಂದರೆ ನವಂಬರ ೧ರಂದು, ತಿಳಿಮನಸ್ಸಿನಿಂದ ರಾಜ್ಯೋತ್ಸವವನ್ನು ಆಚರಿಸೋಣ. Novರಾತ್ರಿ ಸರಣಿ, ದಿನ ೫, ಮಿಥ್ಯೆ ೫ : ಕನ್ನಡದ ಅದೈವಿಕತೆ ೪. ಕನ್ನಡ ದೇವಭಾಷೆ (ಧಾರ್ಮಿಕ ಭಾಷೆ) ಅಲ್ಲ ತಪ್ಪು. ಹಲವಾರು ಜೈನ ಗ್ರಂಥಗಳು ಕನ್ನಡದಲ್ಲಿ ಇವೆ. ಲಿಂಗಾಯತ ಭಾಷೆ ಕನ್ನಡ. ಪುರಂದರಾದಿ ದಾಸಶ್ರೇಷ್ಠರೆಲ್ಲ ಕನ್ನಡದಲ್ಲೆ ಆರಾಧಿಸಿ ವಿಪುಲ ಸಂಗೀತ-ಸಾಹಿತ್ಯ ಸೃಷ್ಟಿಸಿದ್ದಾರೆ. “ದೇವರಿಗೆ ತಿಳಿಯುವುದು ಒಂದೇ ಭಾಷೆ, ಅದು ಕನ್ನಡ ಅಲ್ಲ” ಎನ್ನುವುದು ಹಾಸ್ಯಾಸ್ಪದ. ಸರ್ವಜ್ಞನಾದ ದೇವರಿಗೆ ಎಲ್ಲ ಭಾಷೆಗಳೂ ಗೊತ್ತು. ಸಂಸ್ಕೃತವೂ ದೇವಭಾಷೆ, ಕನ್ನಡವೂ ದೇವಭಾಷೆ; ತಮಿಳು, ತೆಲುಗು, ತುಳು, ಬಡಗ, ಕೊಡವ, ಕೊರಗ, ಕುಡಿಯ, ಗೊಂಡಿ, ಕೊಂಡ. ಮಂಡ, ಕುವಿ, ಕೋಯಾ, ಕೊಲಾಮಿ, ಕುರುಖ, ಒಳ್ಳಾರಿ, ತೋಡ, ದುರುವ, ಬ್ರಾಹ್ವಿಗಳೂ ದೇವಭಾಷೆಗಳು. ಭಕ್ತಿಯೆ ಪರಮ ಭಾಷೆ ಆಗಿರುವ ದೇವರಿಗೆ "ಸುಲಿದ ಬಾಳೆಯ ಹಣ್ಣಿನಂದದಿ ಸುಲಭವಾಗಿಹ ಕನ್ನಡ" ಅಂತರಂಗದ ಮಾತು. ಕನ್ನಡದ ದುಷ್ಪ್ರಭಾವದ ಮಿಥ್ಯೆ ೬ನ್ನು ನಾಳೆ ಅರಿತುಕೊಳ್ಳೋಣ ನಿಮ್ಮವನೆ ಆದ ವಿಶ್ವೇಶ್ವರ ದೀಕ್ಷಿತ ಕನ್ನಡ ಕಲಿ ಬಿತ್ತರಿಕೆ, Novರಾತ್ರಿ ಸರಣಿ, ದಿನ ೫, ಅಕ್ಟೋಬರ ೨೭, ೨೦೨೩

Oct 27, 202302:21
Novರಾತ್ರಿ ಸರಣಿ, ದಿನ ೪,ಮಿಥ್ಯೆ ೪: ಕನ್ನಡದ ಪ್ರಾಂತೀಯತೆ

Novರಾತ್ರಿ ಸರಣಿ, ದಿನ ೪,ಮಿಥ್ಯೆ ೪: ಕನ್ನಡದ ಪ್ರಾಂತೀಯತೆ

👍 Like it? ...... ⁠⁠Subscribe and Share! ⁠⁠

👁️ ⁠⁠Watch it⁠⁠  🕮 ⁠⁠Read it ⁠⁠  👂 ⁠⁠Listen it⁠⁠ 

📧 ⁠⁠Subscribe to our newsletter⁠⁠


⁠⁠ಎಲ್ಲ ೧೦ ಮಿಥ್ಯೆಗಳು ಮತ್ತು ಬೋನಸ್⁠⁠ “ದ್ವೇಷ ಅಸೂಯಗಳಿಲ್ಲದೆ, ತಮ್ಮತನವನ್ನು ಬಿಡದೆ, ಎಲ್ಲರೊಂದಿಗೆ ಸಹಜೀವನ ನಡೆಸುತ್ತ, ಉತ್ಕೃಷ್ಟತೆಯೆ ಗುರಿಯಾಗಿ, ಭವಿಷ್ಯವನ್ನು ರೂಪಿಸಿಕೊಳ್ಳುತ್ತ ಬಾಳುವವರು ಕನ್ನಡಿಗರು.” ಕನ್ನಡದ ಬಗ್ಗೆ ಕನ್ನಡಿಗರಲ್ಲಿ ಹಬ್ಬಿಕೊಂಡಿರುವ ೧೦ ತಪ್ಪು ತಿಳುವಳಿಕೆಗಳು Novರಾತ್ರಿ ಸರಣಿ: ಬನ್ನಿ, ದಿನಕ್ಕೊಂದು ತಪ್ಪು ತಿಳುವಳಿಕೆಯನ್ನು, ತಾಯಿ ಭುವನೇಶ್ವರಿಯ ಕೃಪಾಕಟಾಕ್ಷದಿಂದ ಪರಿಹರಿಸಿಕೊಂಡು, ೧೦ನೆಯ ದಿನ, ಅಂದರೆ ನವಂಬರ ೧ರಂದು, ತಿಳಿಮನಸ್ಸಿನಿಂದ ರಾಜ್ಯೋತ್ಸವವನ್ನು ಆಚರಿಸೋಣ. Novರಾತ್ರಿ ಸರಣಿ, ದಿನ ೪, ಮಿಥ್ಯೆ ೪ : ಕನ್ನಡದ ಪ್ರಾಂತೀಯತೆ ೪. ಕನ್ನಡ ಒಂದು ಪ್ರಾಂತೀಯ ಭಾಷೆ (Kannada is a regional, provincial, parochial, or a vernacular language) ತಪ್ಪು. ಕನ್ನಡಕ್ಕೆ ಯಾವ ಸೀಮೆಯೂ ಇಲ್ಲ. ಕನ್ನಡಿಗರು ಭಾರತದ ತುಂಬ ಇದ್ದಾರೆ. ವಿದೇಶಗಳಲ್ಲಿಯೂ ಗಣನೀಯ ಸಂಖ್ಯೆಯಲ್ಲಿ ಇದ್ದಾರೆ. ಇಲ್ಲಿಯೂ ಅಲ್ಲಿಯೂ ಕನ್ನಡ ಮಾತಾಡುತ್ತಾರೆ. ಪ್ರಶ್ನೆ "ಕನ್ನಡ ಮಾತ್ರ ಗೊತ್ತಿರುವ ಒಬ್ಬ ಭಾರತದ ಎಲ್ಲೆಡೆ ಬದುಕುಳಿಯಬಹುದೆ? ಜಗತ್ತಿನ ಎಲ್ಲೆಡೆ ಬದುಕುಳಿಯಬಹುದೆ?" ಎಂದಾದರೆ ಉತ್ತರ “ಇಲ್ಲ.” ಜಗತ್ತಿನ ಎಲ್ಲ ಭಾಷೆಗಳಿಗೂ ಇದೇ ಉತ್ತರ! ಕನ್ನಡ ಗೊತ್ತಿದ್ದರೆ ಕರ್ನಾಟಕದಲ್ಲಿ ಖಂಡಿತ ಬಾಳಬಹುದು ಮತ್ತು ಬೆಳೆಯಬಹುದು. ಆದ್ದರಿಂದ ಕನ್ನಡ ಮತ್ತು ಇತರ ಹಲವು ಭಾರತೀಯ ಭಾಷೆಗಳು ರಾಜ್ಯಗಳ ಭಾಷಗಳು. ಕನ್ನಡ ಕರ್ನಾಟಕ ರಾಜ್ಯದ ಭಾಷೆ. ಈ ಮೊದಲು ಹೇಳಿದಂತೆ, ಎಲ್ಲ ಭಾರತೀಯ ಭಾಷೆಗಳು ರಾಷ್ಟ್ರದ ಭಾಷೆಗಳು ಮತ್ತೂ ಭಾರತೀಯ ಸಂಸ್ಕೃತಿಯ ಆಕರ ಮತ್ತು ವಾಹಿನಿಗಳು. ಆದ್ದರಿಂದ ಕನ್ನಡವನ್ನು (ಭಾರತೀಯ ಭಾಷೆಯನ್ನು) regional, provincial, parochial, vernacular, ಪ್ರಾಂತೀಯ, ಎಂದೆಲ್ಲ ಸಂಬೋಧಿಸುವುದು ತಪ್ಪು. ನಿಜವಾಗಿಯೂ, ಇಂಥ ಮಾತುಗಳು ಹೀಗೆ ಅಸಡ್ಡೆಯಿಂದ ಮಾತಾಡುವವರ ಕಲೋನಿಯಲ್ ಗುಲಾಮೀಯ ಮಾನಸಿಕ ಮತ್ತು ಸಾಂಸ್ಕೃತಿಕ ದೌರ್ಬಲ್ಯಕ್ಕೆ ಕನ್ನಡಿ ಹಿಡಿಯುತ್ತವೆ. ಕನ್ನಡದ ಅದೈವಿಕತೆಯ ಮಿಥ್ಯೆ ೫ನ್ನು ನಾಳೆ ಅರಿತುಕೊಳ್ಳೋಣ ನಿಮ್ಮವನೆ ಆದ ವಿಶ್ವೇಶ್ವರ ದೀಕ್ಷಿತ ಕನ್ನಡ ಕಲಿ ಬಿತ್ತರಿಕೆ, Novರಾತ್ರಿ ಸರಣಿ, ದಿನ ೪, ಅಕ್ಟೋಬರ ೨೬, ೨೦೨೩

Oct 26, 202303:09
Novರಾತ್ರಿ ಸರಣಿ : ದಿನ ೩, ಮಿಥ್ಯೆ೩ - ಕನ್ನಡದ ಅರಾಷ್ಟ್ರೀಯತೆ

Novರಾತ್ರಿ ಸರಣಿ : ದಿನ ೩, ಮಿಥ್ಯೆ೩ - ಕನ್ನಡದ ಅರಾಷ್ಟ್ರೀಯತೆ

👍 Like it? ...... ⁠⁠Subscribe and Share! ⁠⁠

👁️ ⁠⁠Watch it⁠⁠  🕮 ⁠⁠Read it ⁠⁠  👂 ⁠⁠Listen it⁠⁠ 

📧 ⁠⁠Subscribe to our newsletter⁠⁠

⁠⁠ಎಲ್ಲ ೧೦ ಮಿಥ್ಯೆಗಳು ಮತ್ತು ಬೋನಸ್⁠⁠

“ದ್ವೇಷ ಅಸೂಯಗಳಿಲ್ಲದೆ, ತಮ್ಮತನವನ್ನು ಬಿಡದೆ, ಎಲ್ಲರೊಂದಿಗೆ ಸಹಜೀವನ ನಡೆಸುತ್ತ, ಉತ್ಕೃಷ್ಟತೆಯೆ ಗುರಿಯಾಗಿ, ಭವಿಷ್ಯವನ್ನು ರೂಪಿಸಿಕೊಳ್ಳುತ್ತ ಬಾಳುವವರು ಕನ್ನಡಿಗರು.” ಕನ್ನಡದ ಬಗ್ಗೆ ಕನ್ನಡಿಗರಲ್ಲಿ ಹಬ್ಬಿಕೊಂಡಿರುವ ೧೦ ತಪ್ಪು ತಿಳುವಳಿಕೆಗಳು ೩. ಕನ್ನಡ ರಾಷ್ಟ್ರೀಯ ಭಾಷೆ ಅಲ್ಲ ತಪ್ಪು. ಭಾರತದ ರಾಷ್ಟ್ರ ಭಾಷೆ( National Language of India)ಅನ್ನುವುದೇ ಇಲ್ಲ. ರಾಷ್ಟ್ರ ಭಾಷೆ ಎಂದು ಯಾವ ಭಾಷೆಯನ್ನೂ ಗುರುತಿಸಿಲ್ಲ. ಸಂವಿಧಾನದ ಅನುಚ್ಛೇದ ೧೨೦ರಲ್ಲಿ ಕನ್ನಡ ಮತ್ತು ಹಿಂದಿ ಸಹಿತ ೨೨ ಭಾಷೆಗಳನ್ನು ಭಾರತದ ಅಧಿಕೃತ ಭಾಷೆಗಳು ಎಂದು ನಮೂದಿಸಲಾಗಿದೆ. ಇವು ಯಾವೂ ರಾಷ್ಟ್ರ ಭಾಷೆಗಳು(national language)ಗಳು ಅಲ್ಲ; ಎಲ್ಲವೂ ರಾಷ್ಟ್ರೀಯ ಭಾಷೆಗಳು, ಅಂದರೆ ರಾಷ್ಟ್ರಕ್ಕೆ ಸಂಬಂಧಿಸಿದ ಭಾಷೆಗಳು. ಸಂವಿಧಾನದಲ್ಲಿ ನಮೂದಿಸದ ಇನ್ನೂ ಸಾವಿರಾರು ಭಾರತೀಯ ಭಾಷೆಗಳು ಇವೆ. ಜನಮನದಲ್ಲಿ, ನಡೆನುಡಿಗಳಲ್ಲಿ ನೆಲೆಗೊಂಡಿರುವ ಈ ಭಾಷೆಗಳನ್ನು ಭಾರತದ ರಾಷ್ಟ್ರೀಯ ಭಾಷೆಗಳು ಅಲ್ಲ ಅನ್ನಬಹುದೇ? ‌ ಕನ್ನಡದ ಪ್ರಾಂತೀಯತೆಯ ಮಿಥ್ಯೆ ೪ನ್ನು ನಾಳೆ ಅರಿತುಕೊಳ್ಳೋಣ ನಿಮ್ಮವನೆ ಆದ ವಿಶ್ವೇಶ್ವರ ದೀಕ್ಷಿತ ಕನ್ನಡ ಕಲಿ ಬಿತ್ತರಿಕೆ, Novರಾತ್ರಿ ಸರಣಿ, ದಿನ ೩, ಅಕ್ಟೋಬರ ೨೫, ೨೦೨೩

Oct 25, 202302:26
Novರಾತ್ರಿ ಸರಣಿ : ದಿನ ೨, ಮಿಥ್ಯೆ೨ - ಕನ್ನಡ ಲಿಪಿ

Novರಾತ್ರಿ ಸರಣಿ : ದಿನ ೨, ಮಿಥ್ಯೆ೨ - ಕನ್ನಡ ಲಿಪಿ

👍 Like it? ...... ⁠⁠Subscribe and Share! ⁠⁠

👁️ ⁠⁠Watch it⁠⁠  🕮 ⁠⁠Read it ⁠⁠  👂 ⁠⁠Listen it⁠⁠ 

📧 ⁠⁠Subscribe to our newsletter⁠⁠


⁠⁠ಎಲ್ಲ ೧೦ ಮಿಥ್ಯೆಗಳು ಮತ್ತು ಬೋನಸ್⁠⁠

“ದ್ವೇಷ ಅಸೂಯಗಳಿಲ್ಲದೆ, ತಮ್ಮತನವನ್ನು ಬಿಡದೆ, ಎಲ್ಲರೊಂದಿಗೆ ಸಹಜೀವನ ನಡೆಸುತ್ತ, ಉತ್ಕೃಷ್ಟತೆಯೆ ಗುರಿಯಾಗಿ, ಭವಿಷ್ಯವನ್ನು ರೂಪಿಸಿಕೊಳ್ಳುತ್ತ ಬಾಳುವವರು ಕನ್ನಡಿಗರು.” ಕನ್ನಡದ ಬಗ್ಗೆ ಕನ್ನಡಿಗರಲ್ಲಿ ಹಬ್ಬಿಕೊಂಡಿರುವ ೧೦ ತಪ್ಪು ತಿಳುವಳಿಕೆಗಳು Novರಾತ್ರಿ ಸರಣಿ, ದಿನ ೨, ಮಿಥ್ಯೆ ೨ : ಕನ್ನಡ ಲಿಪಿ ೨. ಕನ್ನಡ ಲಿಪಿ ದೇವನಾಗರಿ ಲಿಪಿಯಿಂದ ಹುಟ್ಟಿದೆ ತಪ್ಪು. ಕನ್ನಡ ಮತ್ತು ದೇವನಾಗರಿ ಸಹಿತ ಬಹುತೇಕ ಎಲ್ಲ ಭಾರತೀಯ ಲಿಪಿಗಳಿಗೂ ಮೂಲ ಬ್ರಾಹ್ಮೀ ಲಿಪಿ. ಅಶೋಕನ ಶಿಲಾ ಶಾಸನಗಳು (ಕ್ರಿಪೂ ೨ನೆ ಶತಮಾನ) ಬ್ರಾಹ್ಮೀ ಲಿಪಿಯಲ್ಲಿ ಇವೆ. ಕದಂಬರ ಕಾಲದಲ್ಲಿ (ಕ್ರಿ.ಶ. ೩೪೫-೫೪೦)ಬ್ರಾಹ್ಮೀ ಲಿಪಿ ಮಾರ್ಪಾಟಾಗಿದ್ದು ಕನ್ನಡದ ಮೊದಲ ಲಿಪಿ ಎಂದು ಗುರುತಿಸಲಾಗಿದೆ. ಇಂದಿನ ಕನ್ನಡ ಲಿಪಿ ಕದಂಬ ಲಿಪಿಯಿಂದ ನೇರವಾಗಿ ವಿಕಾಸಗೊಂಡಿದೆ. ಗುಪ್ತರ ಕಾಲದಲ್ಲಿ (೪-೬ನೆ ಶತಮಾನ) ಬ್ರಾಹ್ಮೀಯಿಂದ ನಾಗರೀ, ಶಾರದಾ ಮತ್ತಿತರ ಲಿಪಿಗಳು ಹುಟ್ಚಿದವು. ನಂತರ, ನಾಗರಿಯಿಂದ ದೇವನಾಗರಿ, ಬಂಗಾಲಿ, ತಿಬೇಟಿ ಮಂತಾದ ಲಿಪಿಗಳು ಹುಟ್ಚಿದವು. ಅಂದರೆ ಕನ್ನಡ ಲಿಪಿ ದೇವನಾಗರಿಗಿಂತ ಮುಂಚೆಯೇ ಮತ್ತು ಸ್ವತಂತ್ರವಾಗಿ ಹುಟ್ಚಿದ್ದು. ಕನ್ನಡದ ಅರಾಷ್ಟ್ರೀಯತೆಯ ಮಿಥ್ಯೆ ೩ನ್ನು ನಾಳೆ ಅರಿತುಕೊಳ್ಳೋಣ ನಿಮ್ಮವನೆ ಆದ ವಿಶ್ವೇಶ್ವರ ದೀಕ್ಷಿತ ಕನ್ನಡ ಕಲಿ ಬಿತ್ತರಿಕೆ, Novರಾತ್ರಿ ಸರಣಿ, ದಿನ ೨, ಅಕ್ಟೋಬರ ೨೪, ೨೦೨೩

Oct 24, 202302:36
Novರಾತ್ರಿ ಸರಣಿ : ದಿನ ೧, ಮಿಥ್ಯೆ೧ - ಕನ್ನಡದ ಹುಟ್ಟು

Novರಾತ್ರಿ ಸರಣಿ : ದಿನ ೧, ಮಿಥ್ಯೆ೧ - ಕನ್ನಡದ ಹುಟ್ಟು

👍 Like it? ...... Subscribe and Share! 

👁️ Watch it  🕮 Read it   👂 Listen it 

📧 Subscribe to our newsletter


ಎಲ್ಲ ೧೦ ಮಿಥ್ಯೆಗಳು ಮತ್ತು ಬೋನಸ್

“ದ್ವೇಷ ಅಸೂಯಗಳಿಲ್ಲದೆ, ತಮ್ಮತನವನ್ನು ಬಿಡದೆ, ಎಲ್ಲರೊಂದಿಗೆ ಸಹಜೀವನ ನಡೆಸುತ್ತ, ಉತ್ಕೃಷ್ಟತೆಯೆ ಗುರಿಯಾಗಿ, ಭವಿಷ್ಯವನ್ನು ರೂಪಿಸಿಕೊಳ್ಳುತ್ತ ಬಾಳುವವರು ಕನ್ನಡಿಗರು.” ಕನ್ನಡದ ಬಗ್ಗೆ ಕನ್ನಡಿಗರಲ್ಲಿ ಹಬ್ಬಿಕೊಂಡಿರುವ ೧೦ ತಪ್ಪು ತಿಳುವಳಿಕೆಗಳು Novರಾತ್ರಿ ಸರಣಿ: ಬನ್ನಿ, ದಿನಕ್ಕೊಂದು ತಪ್ಪು ತಿಳುವಳಿಕೆಯನ್ನು, ತಾಯಿ ಭುವನೇಶ್ವರಿಯ ಕೃಪಾಕಟಾಕ್ಷದಿಂದ ಪರಿಹರಿಸಿಕೊಂಡು, ೧೦ನೆಯ ದಿನ, ಅಂದರೆ ನವಂಬರ ೧ರಂದು, ತಿಳಿಮನಸ್ಸಿನಿಂದ ರಾಜ್ಯೋತ್ಸವವನ್ನು ಆಚರಿಸೋಣ. Novರಾತ್ರಿ ಸರಣಿ, ದಿನ ೧, ಮಿಥ್ಯೆ೧ : ಕನ್ನಡದ ಹುಟ್ಟುಸಂಸ್ಕೃತದಿಂದ ಕನ್ನಡ ಹುಟ್ಟಿದೆ

ತಪ್ಪು. ಕನ್ನಡ ಸಂಸ್ಕೃತದಿಂದ ವಿಭಿನ್ನವಾದ ಮತ್ತು ಬೇರೆ ಮೂಲದ ಭಾಷೆ. ಕನ್ನಡ ದ್ರಾವಿಡ ಭಾಷಾ ಗುಂಪಿಗೆ ಸೇರಿದ ಒಂದು ಸ್ವತಂತ್ರ ಭಾಷೆ. ಜನರ ಬೆರೆಕೆ ಮತ್ತು ಪರಸ್ಪರ ವ್ಯವಹಾರಗಳಿಂದ ಭಾಷೆಗಳು ಒಂದರ ಮೇಲೊಂದು ಪ್ರಭಾವ ಬೀರುವುದು ಸಹಜ. ಸಂಸ್ಕೃತ ಮತ್ತು ಪ್ರಾಕೃತ ಎರಡೂ ಕನ್ನಡದ ಮೇಲೆ ಬಹಳ ಪ್ರಭಾವ ಬೀರಿವೆ. ಹಾಗೆಯೆ, ಕನ್ನಡ ಕೂಡ ಸಂಸ್ಕೃತದ ಮೇಲೆ ಪ್ರಭಾವ ಬೀರಿದೆ. ಕನ್ನಡ ಪದಗಳು "ತತ್ಸಮಗೊಂಡು" ಸಂಸ್ಕೃತದಲ್ಲಿ ಸೇರಿವೆ. ಇಂಥ ಅನೇಕ ಪದಗಳನ್ನು ರೆ. ಕಿಟೆಲ್ ತಮ್ಮ ಕೋಶದಲ್ಲಿ ಪಟ್ಟಿ ಮಾಡಿದ್ದಾರೆ. ಕನ್ನಡ ವ್ಯಾಕರಣದ ಮೇಲೆ ಸಂಸ್ಕೃತದ ಛಾಯೆ ಸಾಕಷ್ಟು ಬಿದ್ದಿದೆ. ಕನ್ನಡದ ನಾಲಗೆಗೆ ಒಗ್ಗದೆ ಇದ್ದರೂ, ಕನ್ನಡದಲ್ಲಿ ಸಂಸ್ಕೃತ ವರ್ಣಗಳು ಮತ್ತು ಸಂಸ್ಕೃತ ಮೂಲದ ಪದಗಳು ಹಾಸುಹೊಕ್ಕಾಗಿ ಸೇರಿಕೊಂಡಿವೆ; ಪೂರ್ತಿ ಕನ್ನಡದಲ್ಲಿ ಬೆರೆತುಕೊಳ್ಳದೆ, ಇಂದಿಗೂ ಸಂಸ್ಕೃತ ವ್ಯಾಕರಣ ನಿಯಮಗಳನ್ನೆ ಅನುಸರಿಸುತ್ತ ಪ್ರತ್ಯೇಕತೆಯನ್ನು, ಕಾಪಾಡಿಕೊಂಡಿವೆ. ಆದ್ದರಿಂದ, ಪುರಾತನವಾದ, ಜ್ಞಾನರಾಶಿಯನ್ನು ಹೊಂದಿರುವ, ಸಂಸ್ಕೃತವನ್ನು ಕನ್ನಡದ ಜನ್ಮದಾತೆ ಎನ್ನುವುದಕ್ಕಿಂತ ಕನ್ನಡದ ದೃಷ್ಟಿಯಿಂದ, ನೆರೆಮನೆಯ ಜಾಣ ಅಜ್ಜಿ ಎನ್ನುವುದು ಉಚಿತ. ಕನ್ನಡ ಲಿಪಿಯ ಮಿಥ್ಯೆ ೨ನ್ನು ನಾಳೆ ಅರಿತುಕೊಳ್ಳೋಣ ನಿಮ್ಮವನೆ ಆದ ವಿಶ್ವೇಶ್ವರ ದೀಕ್ಷಿತ ಕನ್ನಡ ಕಲಿ ಬಿತ್ತರಿಕೆ, Novರಾತ್ರಿ ಸರಣಿ, ದಿನ ೧, ಅಕ್ಟೋಬರ ೨೩, ೨೦೨೩

Oct 23, 202302:58
Novರಾತ್ರಿ ಸರಣಿ : ಏನಿದು Novರಾತ್ರಿ?

Novರಾತ್ರಿ ಸರಣಿ : ಏನಿದು Novರಾತ್ರಿ?

👍 Like it? ...... Subscribe and Share! 
👁️ Watch it 🕮 Read it  👂 Listen it 
📧 Subscribe to our newsletter

ಎಲ್ಲ ೧೦ ಮಿಥ್ಯೆಗಳು ಮತ್ತು ಬೋನಸ್ ಅಕ್ಟೋಬರ್ 23ರಿಂದ Novರಾತ್ರಿ ಪ್ರಾರಂಭ! ಏನಿದು Novರಾತ್ರಿ? ಒಂಬತ್ತು ದಿನ ಒಂದೊಂದು ಕನ್ನಡ ವಿಷಯದ ಮೇಲೆ ಬೆಳಕು ಚೆಲ್ಲಿ ತಿಳಿವು ಹೀರುತ್ತ, ಹತ್ತನೆಯ ದಿನ, ಅಂದರೆ ನವೆಂಬರ್ ೧ ರಂದು, ತಿಳಿಮನಸ್ಸಿನಿಂದ ರಾಜ್ಯೋತ್ಸವ ಆಚರಿಸುವುದು! ಹಚ್ಚೇವು ಕನ್ನಡದ ದೀಪ ಹಚ್ಚೇವು ಕನ್ನಡದ ದೀಪ ಬಹುದಿನಗಳಿಂದ ಮೈಮರೆವೆಯಿಂದ ಕೂಡಿರುವ ಕೊಳೆಯ ಕೊಚ್ಚೇವು ಎಲ್ಲೆಲ್ಲಿ ಕನ್ನಡದ ಕಂಪು ಸೂಸಲು ಅಲ್ಲಲ್ಲಿ ಕರಣ ಚಾಚೇವು - ಡಿ.ಎಸ್.‌ ಕರ್ಕಿ ಕಾಯ್ದು ನೋಡಿ: ಕನ್ನಡದ ಬಗ್ಗೆ ಕನ್ನಡಿಗರಲ್ಲಿ ಹಬ್ಬಿಕೊಂಡಿರುವ ೧೦ ತಪ್ಪು ತಿಳುವಳಿಕೆಗಳು ಹಮ್ಮುಗೆ: ದಿನ ೧, ಮಿಥ್ಯೆ ೧ : ಕನ್ನಡದ ಹುಟ್ಟು ದಿನ ೨, ಮಿಥ್ಯೆ ೨ : ಕನ್ನಡ ಲಿಪಿ ದಿನ ೩, ಮಿಥ್ಯೆ ೩ : ಕನ್ನಡದ ಅರಾಷ್ಟ್ರೀಯತೆ ದಿನ ೪, ಮಿಥ್ಯೆ ೪ : ಕನ್ನಡದ ಪ್ರಾಂತೀಯತೆ ದಿನ ೫, ಮಿಥ್ಯೆ ೫ : ಕನ್ನಡದ ಅದೈವಿಕತೆ ದಿನ ೬, ಮಿಥ್ಯೆ ೬ : ಕನ್ನಡದ ದುಷ್ಪ್ರಭಾವ ದಿನ ೭, ಮಿಥ್ಯೆ ೭ : ಕನ್ನಡದ ಕಠಿನತೆ ದಿನ ೮, ಮಿಥ್ಯೆ ೮ : ಕನ್ನಡದ ವೈಜ್ಞಾನಿಕ ದೌರ್ಬಲ್ಯ ದಿನ ೯, ಮಿಥ್ಯೆ ೯ : ಕನ್ನಡದ ಮರೆವು ದಿನ ೧೦, ಮಿಥ್ಯೆ ೧೦ : ಕನ್ನಡದಲ್ಲಿ ಆಡಳಿತ

ರಾಜ್ಯೋತ್ಸವದ ಬೋನಸ್! ಮಿಥ್ಯೆ ೧೧. ಕನ್ನಡಿಗರು ಅಭಿಮಾನಶೂನ್ಯರು!

Oct 19, 202302:06
ಹಳೆಯದೆಂದೆಲ್ಲವೂ ಒಳಿತೆನಲು ಹೊಲ್ಲ - ಕಾಳಿದಾಸನ ಕಾವ್ಯದೃಷ್ಟಿ : Kalidasa on Poetry - Old and New

ಹಳೆಯದೆಂದೆಲ್ಲವೂ ಒಳಿತೆನಲು ಹೊಲ್ಲ - ಕಾಳಿದಾಸನ ಕಾವ್ಯದೃಷ್ಟಿ : Kalidasa on Poetry - Old and New

👍 Like it? ...... Subscribe and Share! 
👁️ Watch it 🕮 Read it  👂 Listen it 
📧 Subscribe to our newsletter

ಹಳೆಯದೆಂದೆಲ್ಲವೂ ಒಳಿತೆನಲು ಹೊಲ್ಲ ಕಾಳಿದಾಸನ ಕಾವ್ಯದೃಷ್ಟಿ ಪುರಾಣ ಅಂದರೆ ಹಿಂದಿನದು, ಹಳೆಯದು. ಅದೆಲ್ಲ ಒಳ್ಳೆಯದು. ಹೊಸದೆಲ್ಲವೂ ಕೆಟ್ಟದ್ದು. ಹಿಂದಿನದನ್ನು ಪ್ರಶ್ನಾತೀತವಾಗಿ ಪಾಲಿಸಬಹುದು. ಆದರೆ ಹೊಸದನ್ನು ಒಪ್ಪಿಕೊಳ್ಳುವ ಮಾತೇ ಇಲ್ಲ. ಯಾವುದೇ ಹೊಸ ಮಾರ್ಗ, ಹೊಸ ವಿಚಾರವನ್ನು ಅನುಸರಿಸುವುದರಲ್ಲಿ ಮನುಷ್ಯನಿಗೆ ಅಳುಕು ಸಹಜವಾದದ್ದು. ಆದರೆ ಈ ಸಾಮಾನ್ಯ ನಿಲುವು ಎಷ್ಟು ಸರಿ? ಕಾಳಿದಾಸ ಹೇಳಿದ್ದೇನು? ಕವಿ ಕಾಣದ್ದನ್ನು ಕಂಡವರಾರು? ಗಾದೆ ಮಾತು ಹೇಳಿದ್ದೇನು? ಪುರಾಣಮಿತ್ಯೇವ ನ ಸಾಧು ಸರ್ವಂ ನ ಚಾಪಿ ಕಾವ್ಯಂ ನವಮಿತ್ಯವದ್ಯಮ್; ಸಂತಃ ಪರೀಕ್ಷ್ಯಾನ್ಯತರದ್ಭಜಂತೇ ಮೂಢಃ ಪರಪ್ರತ್ಯಯನೇಯಬುದ್ಧಿಃ.

- ಕಾಳಿದಾಸ (ಮಾಲವಿಕಾಗ್ನಿಮಿತ್ರ, ೧-೨) ಇದು ಕಾಳಿದಾಸನ ಮಾಲವಿಕಾಗ್ನಿಮಿತ್ರ ನಾಟಕದಲ್ಲಿ ಬರುವ ಸೂತ್ರಧಾರನ ಮಾತು. ಇದರ ಕನ್ನಡ ಭಾವಾನುವಾದ ಹೀಗಿದೆ: ಹಳೆಯದೆಂದೆಲ್ಲವೂ ಒಳಿತೆನಲು ಹೊಲ್ಲ; ಹೊಳವು ಹೊಸತೆಂದು ಹೀಗಳೆಯಲೂ ಸಲ್ಲ. ಬಲ್ಲವರು ಒಪ್ಪುವರು ಆರಯ್ದು ಎಲ್ಲ, ಹೆಡ್ಡರಿಗೆ ಹೆರನುಡಿಯೆ ನನ್ನಿ, ಸವಿಬೆಲ್ಲ! ಇಲ್ಲಿ ಪುರಾಣ ಅಂದರೆ ʼಪುರಾಣʼ,ಭಾಗವತ ಇತ್ಯಾದಿ, ಅಷ್ಟೇ ಅಲ್ಲ. ಕಾಳಿದಾಸ ಹೇಳಿದ್ದು ಕಾವ್ಯ ರಚನೆಯ ಹಿನ್ನೆಲೆಯಲ್ಲಿ. ಕಾಳಿದಾಸನಿಗಿಂತ ಮುಂಚಿನವರು, ಪೂರ್ವಸೂರಿಗಳಾದ ಭಾಸ, ಸೌಮಿಲ್ಲ ಮುಂತಾದವರು, ತಮ್ಮ ಪ್ರಸಿದ್ಧ ಕಾವ್ಯಗಳಿಂದ ಬೇರೆ ಕಾವ್ಯಗಳೆ ಇಲ್ಲ ಎನ್ನುವಂತೆ ಕಾವ್ಯದ ವ್ಯಾಖ್ಯಾನವನ್ನು ಜನಮನದಲ್ಲಿ ಸೃಷ್ಟಿಸಿದ್ದರು‌ ಎನ್ನಬಹುದು. ಇಂತಹ ವಾತಾವರಣದಲ್ಲಿ, ಎಷ್ಟೇ ಪ್ರತಿಭಾನ್ವಿತನಾಗಿದ್ದರೂ ಹೊಸ ಕವಿಯಾದ ಕಾಳಿದಾಸನಿಗೆ ಅಳುಕು ಇದ್ದದ್ದೇ. ಆಗ, ಕಾವ್ಯ, ಹೊಸದಿರಲಿ ಹಳೆಯದಿರಲಿ, ಅದರ ಗುಣಾವಗುಣಗಳನ್ನು ಪರಿಶೀಲಿಸಿ ಅದರ ಶ್ರೇಷ್ಠತೆಯನ್ನು ‌ ನಿರ್ಣಯಿಸಬೇಕು ಎಂದು, ಹಿಂದಿನವರನ್ನು ಮನ್ನಿಸುತ್ತಲೂ, ಸಹೃದಯರಲ್ಲಿ ವಿನಯಪೂರ್ವಕವಾಗಿಯೂ, ತನಗೇ ತಿರುಗೇಟು ಕೊಡುವ ಸಂಭವ ಇದ್ದರೂ, ಈ ಮಾತಿನಲ್ಲಿ ಸಮಾಧಾನ ಹೇಳಿಕೊಂಡಿದ್ದಾನೆ. ಈಗ, ಜನರ ತಿಳುವಳಿಕೆ ಕಾಳಿದಾಸನ ಹೇಳಿಕೆಯ ಕಾವ್ಯವಿಶೇಷತೆಯನ್ನು ಮೀರಿ ವಿಸ್ತರಿಸಿದೆ. ಹಳೆಯದು ಎಂದರೆ ಆಗಲೆ ಪ್ರತಿಷ್ಠಿತವಾದದ್ದು, ಯಾವುದೇ ಪ್ರಶ್ನೆ/ಸಂಶಯ/ಸಂಕೋಚ ಇಲ್ಲದೆ ಕೂಡಲೆ ಒಪ್ಪಿಕೊಳ್ಳಬೇಕಾದದ್ದು ಎನ್ನುವ ಅರ್ಥ. ಅದು ಮೂರ್ತ ವಸ್ತುವಾಗಲಿ, ಅಮೂರ್ತ ವಿಷಯವಾಗಲಿ, ಯೋಜನೆ ಆಗಲಿ, ಯೋಚನೆ ಆಗಲಿ, ರಚನೆ ಆಗಲಿ, ಬರಿ ಕಲ್ಪನೆ ಆಗಲಿ, ಎಲ್ಲದಕ್ಗೂ ಅನ್ವಯಿಸುವಂತೆ ಅರ್ಥೈಸಲಾಗಿದೆ. ಇಂಥ ಅಭಿಪ್ರಾಯವನ್ನೆ "ಅಜ್ಜ ನೆಟ್ಟ ಆಲದ ಮರ ಅಂತ ಅದಕ್ಕೆ ನೇಣು ಹಾಕಿಕೊಳ್ಳಬಹುದೆ?" ಮತ್ತು ಅನುಲೋಮವಾಗಿ, " All that glitters is not gold" ಎನ್ನುವ ಗಾದೆ ಮಾತುಗಳಲ್ಲಿ ಕಾಣಬಹುದು. ಅದಕ್ಕೇ, ರವಿ ಕಾಣದ್ದನ್ನು ಕವಿ ಕಂಡ; ಕವಿ ಕಾಣದ್ದನ್ನು? ಓದುಗ ಕಂಡ! ಇದೇ ಕಾವ್ಯದ ಲಕ್ಷಣ ಅಲ್ಲವೆ? ನಿಮ್ಮವನೆ ಆದ ವಿಶ್ವೇಶ್ವರ ದೀಕ್ಷಿತ ಹಳೆಯದೆಂದೆಲ್ಲವೂ ಒಳಿತೆನಲು ಹೊಲ್ಲ, ಕಾಳಿದಾಸನ ಕಾವ್ಯದೃಷ್ಟಿ ಕನ್ನಡ ಕಲಿ, ಬಿತ್ತರಿಕೆ,  October 09, 2023 kannada bhashe,vishweshwar dixit,KAR TET/HSTR/GPSTR/SDA/FDA,ಕನ್ನಡ ಭಾಷೆ,ಕನ್ನಡ ಲಿಪಿ,ಕನ್ನಡ ಕಲಿಕೆ,Kalidasa,Poetry Old Vs New

Oct 10, 202304:29
ಕನ್ನಡ ಮತ್ತು AI, ಒಂದು ಪ್ರಯೋಗ : Kannada and AI, an Experiment

ಕನ್ನಡ ಮತ್ತು AI, ಒಂದು ಪ್ರಯೋಗ : Kannada and AI, an Experiment

👍 Like it? ...... Subscribe and Share! https://www.youtube.com/mykannadakali/?sub_confirmation=1
👁️ Watch at https//www.youtube.com/channel/UCCON6n4lEgj6NsPqCLZdDSw
🕮 Read at http://kannadakali.com/publications/podcasts
👂 Listen at https://anchor.fm/kannadakali
📧 Subscribe to our newsletter: https://kannadakali.com/kankalimitraru/?p=subscribe ಕನ್ನಡ ಮತ್ತು AI, ಒಂದು ಪ್ರಯೋಗ : Kannada and AI, AN Experiment ಕಳೆದ ಹತ್ತು ವರ್ಷಗಳಲ್ಲಿ ಗಣಕಗಳು ಅಗಾಧವಾದ ಸಾಮರ್ಥ್ಯವನ್ನು ಕಂಡಿವೆ. ಯಂತ್ರಾಂಶ (hardware)ಮತ್ತು ತಂತ್ರಾಂಶ (software)ಎರಡೂ ವರ್ಷ ವರ್ಷವೂ ಹೆಚ್ಚುತ್ತಿರುವ ಗತಿಯಲ್ಲಿ ಅಭಿವೃದ್ಧಿ ಹೊಂದಿವೆ. ಚಂದ್ರನ ಮೇಲೆ ಇಳಿದ ಮೊದಲ ಅಪೋಲೋ ನಿಯೋಜನೆಯಲ್ಲಿಯ ಗಣಕಗಳಿಗಿಂತ ಇಂದಿನ ಮೊಬೈಲ ದೂರವಾಣಿಗಳು ಕೂಡ ಸಾವಿರಾರು ಪಟ್ಟು ಶಕ್ತಿಯುತವಾಗಿವೆ ಅಂದರೆ ಇಂದಿನ ಸುಪರ-ಗಣಕಗಳ ಸಾಮರ್ಥ್ಯವನ್ನು ನೀವೇ ಊಹಿಸಿಕೊಳ್ಳಿ. ಚದುರಂಗದಾಟ, ಸಹಜ ನುಡಿ ತಿಳಿವಿಕೆ (natural language understanding), ಮಾತು ಗ್ರಹಿಕೆ ಇತ್ಯಾದಿ ಯಾವನ್ನು ನಾವು ಮಾನವನ ಬುದ್ದಿಮತ್ತೆಗೆ ಮೀಸಲು ಎಂದುಕೊಂಡಿದ್ದೆವೋ ಅವುಗಳಲ್ಲೆಲ್ಲ ಮೀರಿದ ಪ್ರಗತಿಯನ್ನು ಗಣಕಗಳು ಸಾಧಿಸಿವೆ. ಜೊತೆಗೆ ಅಂತರ್ಜಾಲದ ಬೆಳವಣಿಗೆ ಮತ್ತು ವ್ಯಾಪಕತೆಯಿಂದ ವಿಶ್ವಕೋಶಗಟ್ಟಲೆ ಜ್ಞಾನ ಪ್ರತಿಯೊಬ್ಬರ ಅಂಗೈಯಲ್ಲೂ ದೊರೆತಿದೆ. ಹೀಗೆ, ಕಳೆದ ೫೦ ವರ್ಷಗಳಿಂದ ನಡೆದ ಸಂಶೋಧನೆಯ ಫಲವಾಗಿ ಇಂದು ಕೃತಕಮತಿ (ಕೃ.ಮತಿ) ಮುಂಚೂಣಿಗೆ ಬಂದಿದೆ. ಉದಾಹರಣೆಗಾಗಿ, OpenAI ಕಂಪನಿಯ ChatGPT ಎನ್ನುವ ತಂತ್ರಾಂಶವು ಸಂಶೋಧಕರಲ್ಲೂ, ಶಾಲಾ ವಿದ್ಯಾರ್ಥಿಗಳಲ್ಲೂ, ಸಾಮಾನ್ಯರಲ್ಲೂ ಚಲಾವಣೆಗೆ ಬಂದಿದೆ. ChatGPT ತಂತ್ರಾಂಶ ಓಪನ್‌ ಏ.ಆಯ್.(OpenAI)ಅನ್ನುವ ಕಂಪನಿಯಿಂದ ಅಭಿವೃದ್ಧಿಪಡಿಸಲಾದ ಒಂದು ಕೃತಕ-ಮತಿ (AI)ಭಾಷಾ ಮಾದರಿ. ಇದು ಅಂತರ್ಜಾಲದಿಂದ ಬೃಹತ್ ಪ್ರಮಾಣದ ಪಠ್ಯದ ಮೇಲೆ ತರಬೇತಿ ಪಡೆದಿದೆ. ನಿರ್ದಿಷ್ಟ ಪ್ರಾಂಪ್ಟ್‌ ಒಂದನ್ನು ಕೊಟ್ಟಾಗ, ಮಾನವ ತರಹದ ನೈಸರ್ಗಿಕ ಭಾಷೆಯ ಪಠ್ಯವನ್ನು ರಚಿಸಬಹುದು. ಪ್ರಶ್ನೆಗಳಿಗೆ ಉತ್ತರಿಸಬಹುದು, ವಿವಿಧ ವಿಷಯಗಳ ಕುರಿತು ಸಂವಾದಿಸಬಹುದು. ಮತ್ತು ಸೃಜನಶೀಲ ಬರವಣಿಗೆಯ ತುಣುಕುಗಳನ್ನು ರಚಿಸಬಹುದು. ಹೆಚ್ಚಿನ ಮಾಹಿತಿಗೆ: https://chat-gpt.org/ ಇಂಥ ಕೃಮತಿ(AIಯನ್ನು ಕನ್ನಡಕ್ಕೆ ಹೇಗೆ ಉಪಯೋಗಿಸಿಕೊಳ್ಳಬಹುದು? ಬರೆಹ ಕ್ಷೇತ್ರ ಒಂದನ್ನೆ ತೆಗೆದುಕೊಳ್ಳೋಣ. ಉತ್ತಮ ಲೇಖನ/ಕವಿತೆಗಳನ್ನು ಕೃಮತಿ(AI)ಬರೆಯಬಲ್ಲುದೆ? ಬರೆದದ್ದು ಸ್ವತಂತ್ರ ಮತ್ತು ಸೃಜನಶೀಲ ಬರವಣಿಗೆ ಅನ್ನಬಹುದೆ? ಅಂಥದ್ದನ್ನು ಕೃಮತಿ ಬರೆದದ್ದು ಎಂದು ಸಾಮಾನ್ಯ ಓದುಗ ಗುರುತಿಸಬಲ್ಲನೆ? ಗುರುತಿಸಿದರೂ, ಸ್ವಾಗತಿಸುವನೋ, ತಿರಸ್ಕರಿಸುವನೋ? ಈ ಪ್ರಶ್ನೆಗಳನ್ನು ಉತ್ತರಿಸುವ ಪ್ರಯತ್ನದಲ್ಲಿ, ಒಂದು ಪುಟ್ಟ ಸರಳ ಪ್ರಯೋಗ ಯಾಕೆ ಮಾಡಬಾರದು? ಸಂದರ್ಭ: ದಕ್ಷಿಣ ಕ್ಯಲಿಫೋರ್ನಿಯ ಕರ್ನಾಟಕ ಸಾಂಸ್ಕೃತಿಕ ಸಂಘದ (ಕೆಸಿಎ https://socalkca.com) ೫೦ನೇ ಹುಟ್ಟು ಹಬ್ಬ, ಸುವರ್ಣ ಮಹೋತ್ಸವ. ಅದರ ಸ್ಮರಣ ಸಂಚಿಕೆಗೆ ಒಂದು ಅಭಿನಂದನಾತ್ಮಕ ಸಂದೇಶ ಅಥವ ಲೇಖನ ಬೇಕಾಗಿತ್ತು. ಅದಕ್ಕಾಗಿ ಕೆಳಗಿನ ಪ್ರಾಂಪ್ಟ್‌ಗಳನ್ನು ChatGPTಗೆ ಒಂದೊಂದಾಗಿ ಕೊಟ್ಟೆ. ಏನಿದು ಪ್ರಾಂಪ್ಟು? ಅದೊಂದು ನಿರ್ದೇಶ ವಾಕ್ಯ, ಅಥವ ಪ್ರಶ್ನೆ ಆಗಬಹುದು. ಅದರೊಂದಿಗೆ ಕೆಲವು ಸೂಚ್ಯ ಮಾಹಿತಿ ತುಣುಕುಗಳನ್ನು ಸೇರಿಸಿದಷ್ಟೂ ಉತ್ತಮ ಉತ್ತರ ಬರಬಹುದು. ನಾ ಕೊಟ್ಟ ಪ್ರಾಂಪ್ಟಗಳು ಇಂಗ್ಲಿಷಲ್ಲೆ ಇದ್ದವು; ಕನ್ನಡದಲ್ಲಿ ಕೇಳಬಹುದಾಗಿತ್ತೇನೋ. ಇರಲಿ. ಈ ಪ್ರಾಂಪ್ಟುಗಳು ಯಾವವು? 1. write an essay in kannada about karnataka cultural association of southern california - ಇಲ್ಲಿ essay ಅಂತ ಕೇಳಿದರೂ ನಾ ಎಣಿಸಿದಂತೆ ಪುಟಗಟ್ಟಲೆ ಉತ್ತರ ಬರಲಿಲ್ಲ. ಬದಲಾಗಿ ಮೂಡಿದ್ದು ಒಂದು ಪ್ಯಾರಾ! 2. write a poem on ದಕ್ಷಿಣ ಕ್ಯಾಲಿಫೋನಿಯದ ಕರ್ನಾಟಕ ಸಾಂಸ್ಕೃತಿಕ ಸಂಘ - ಇಲ್ಲಿ ಕವಿತೆ ಅಂದರೆ ಅದೇನೂ ಛಂದೋಬದ್ಧವಾಗಿರಲಿಲ್ಲ; ಲಯ ಪ್ರಾಸಗಳೂ ಇರಲಿಲ್ಲ; ಸುಮ್ಮ ಸುಮ್ಮನೆ ಅಲ್ಲಲ್ಲಿ ವಾಕ್ಯಗಳನ್ನು ಒಡೆದು ಸಾಲು ಸಾಲುಗಳಲ್ಲಿ ಪೋಣಿಸುವ ನಟನೆಯೂ ಇರಲಿಲ್ಲ; ಸಾಮಾನ್ಯ ಗದ್ಯವೂ ಅಲ್ಲ; ಒಂದು ರೀತಿಯ "ನವೋನವ ಕವಿತೆ" ಅನ್ನಬಹುದು! 3. write a jingle in kannada for Golden Jubiliy celebration of Karnataka Cultural association of southern california ಉತ್ತರಗಳು ತುಸು ಅಸಹಜ ಎನಿಸಿದರೂ, ಅಚ್ಚರಿಗೊಳಿಸುವಂಥವು. ಇಲ್ಲಿ ಕಂಡ ಕೆಲವು ಅಂಶಗಳು ಹೀಗಿವೆ: ೧. ಅದೆ ಪ್ರಾಂಪ್ಟನ್ನು ಮತ್ತೆ ಕೊಟ್ಟರೂ ಉತ್ತರ ಬೇರೆ; ೨. ಅನೇಕ ಪುನರುಕ್ತಿಗಳು; ೩. ಉದ್ದುದ್ದ ವಾಕ್ಯಗಳು; ೪. ಮಾತು-ಬರಹಗಳಲ್ಲಿ ಸಾಮಾನ್ಯವಾಗಿ ಕಂಡುಬರದ ಅಥವ ಅರ್ಥಹೀನ ಎನಿಸುವ ಪದಗಳ ಬಳಕೆ; ೫. ಕವನ ಬರೆಯಲು ಕೇಳಿದರೂ ಗದ್ಯ ಬರಬಹುದು; ೬. ವ್ಯಾಕರಣ ದೋಷಗಳು; ಮತ್ತು ೭. ಕೆಲವು ಅಸಂಬಂಧಿತ ವಿಷಯ/ವಾಕ್ಯಗಳು. ChatGPTಯ ಮರುನುಡಿಗಳಲ್ಲಿ ಇದ್ದ ಪುನರುಕ್ತಿ ಮತ್ತು ಅಪ್ರಸ್ತುತ ವಾಕ್ಯಗಳನ್ನು ಕೈಬಿಟ್ಟು, ಕೆಲವು ವ್ಯಾಕರಣ ದೋಷಗಳನ್ನು ತಿದ್ದಿ, ಮತ್ತು ʼಪದ್ಯʼವನ್ನು ಸಾಲು ಸಾಲಾಗಿ ಜೋಡಿಸಿ ಒಂದು ಗದ್ಯ-ಪದ್ಯ ಲೇಖನವನ್ನು ಸ್ಮರಣ ಸಂಚಿಕೆಗೆ ಸಿದ್ಧಗೊಳಿಸಿದೆ. ಈ ಲೇಖನ ಕೃಮತಿ (AI)ತಂತ್ರಾಂಶ (ChatGPT)ಬರೆದ ಮೊದಲ ಕನ್ನಡ ಗದ್ಯ-ಪದ್ಯ ಏನೋ! ಇದೊಂದು ಅದ್ಭುತ ಬೆಳವಣಿಗೆ ಎಂದು ಕೆಲವರು ಸ್ವಾಗತಿಸಿ ಕೊಂಡಾಡಿದರೆ, ಇನ್ನು ಕೆಲವರು ಕೃಮತಿ ಮಾನವ ಕುಲವನ್ನೆ ನಾಶಮಾಡಬಲ್ಲ ಅಪಾಯಕಾರಿ ಬೆಳವಣಿಗೆ, ಇದನ್ನು ಇಲ್ಲಿಗೇ ನಿಲ್ಲಿಸಬೇಕು ಎನ್ನುತ್ತಿದ್ದಾರೆ. ChatGPT ನಿಜವಾಗಿಯೂ ಸೃಜನಶೀಲವಾಗಿ ಬರೆಯಬಲ್ಲುದೆ ಅಥವ ಅಂತರ್ಜಾಲದಲ್ಲಿನ ತುಣುಕುಗಳನ್ನು ತುಸು ಪೋಣಿಸಿ, ತುಸು ಕುಸುರಿಸಿ, ತುಸು - ಮುಂದೆ ಓದಿ ನಿಮ್ಮವನೆ ಆದ, ವಿಶ್ವೇಶ್ವರ ದೀಕ್ಷಿತ ಕನ್ನಡ ಕಲಿ ಬಿತ್ತರಿಕೆ ಸಪ್ಟಂಬರ ೧, ೨೦೨೩

Sep 01, 202308:45
ಸುಳ್ಳು, ಸತ್ಯ, ಕಾವ್ಯ, ಮತ್ತು ನೇಮಿಚಂದ್ರ - Suḷḷu, Satya, Kāvya, mattu Nēmicandra

ಸುಳ್ಳು, ಸತ್ಯ, ಕಾವ್ಯ, ಮತ್ತು ನೇಮಿಚಂದ್ರ - Suḷḷu, Satya, Kāvya, mattu Nēmicandra

Like it? ...... Subscribe and Share! https://www.youtube.com/mykannadakali/?sub_confirmation=1
Watch at https//www.youtube.com/channel/UCCON6n4lEgj6NsPqCLZdDSw
Read at http://kannadakali.com/publications/podcasts
Listen at https://anchor.fm/kannadakali
Subscribe to our newsletter: https://kannadakali.com/kankalimitraru/?p=subscribe

ಸುಳ್ಳು, ಸತ್ಯ, ಕಾವ್ಯ, ಮತ್ತು ನೇಮಿಚಂದ್ರ ಕಟ್ಟುಗೆ ಕಟ್ಟದಿರ್ಕೆ ಕಡಲಂ ಕಪಿಸಂತತಿ ಲೇಖನ : ವಿಶ್ವೇಶ್ವರ ದೀಕ್ಷಿತ ಸಂಗೀತ: ಆಕಾಶ ದೀಕ್ಷಿತ ಕಟ್ಟು-ಮುಟ್ಟು-ಮೆಟ್ಟು ಕಟ್ಟುಗೆ ಕಟ್ಟದಿರ್ಕೆ ಕಡಲಂ ಕಪಿಸಂತತಿ, ವಾಮನಕ್ರಮಂ ಮುಟ್ಟುಗೆ ಮುಟ್ಟದಿರ್ಕೆ ಮುಗಿಲಂ, ಹರನಂ ನರನೊತ್ತಿ ಗಂಟಲಂ ಮೆಟ್ಟುಗೆ ಮೆಟ್ಟದಿರ್ಕೆ, ಕವಿಗಳ್‌ ಕೃತಿಬಂಧದೊಳಲ್ತೆ ಕಟ್ಟಿದರ್‌, ಮುಟ್ಟಿದರೊತ್ತಿ ಮೆಟ್ಟಿದರದೇನಳವಗ್ಗಳಮೋ ಕವೀಂದ್ರರಾ! - ನೇಮಿಚಂದ್ರ, ಲೀಲಾವತಿ ಪ್ರಬಂಧ ಗಣ: ಅಕ್ಷರ, ಜಾತಿ: ಕೃತಿ-೨೦, ಮಟ್ಟು: ಉತ್ಪಲಮಾಲೆ ವೃತ್ತ ಸೂತ್ರ: ಭ ರ ನ ಭ ಭ ರ ಲ ಗಂ ಭ ರ ನ ಭ ಭ ರ ಲ ಗಂ - ಸೂತ್ರದ ಅಕ್ಷರ ಗಣ, ಕೃತಿ-೨೦ ಜಾತಿ:, ಉತ್ಪಲಮಾಲೆ ವೃತ್ತ ಎನ್ನುವ ಮಟ್ಟಿನಲ್ಲಿರುವ‌ ಇದು ನೇಮಿಚಂದ್ರನ ಲೀಲಾವತಿ ಪ್ರಬಂಧದಲ್ಲಿ ಬರುವ ಒಂದು ಪದ್ಯ. ನೇಮಿಚಂದ್ರ ೧೨ನೆ ಶತಮಾನದ ಕೊನೆಯ ಅರ್ಧದಲ್ಲಿ ಜೀವಿಸಿದ್ದ ಒಬ್ಬ ಕವಿ. ಸವದತ್ತಿಯ ರಟ್ಟ ವಂಶದ ಲಕ್ಷ್ಮಣರಾಜನ ಆಶ್ರಯದಲ್ಲಿ, ಅಂದರೆ ೧೧೭೦ರ ಆಸುಪಾಸಿನಲ್ಲಿ, ಲೀಲಾವತಿ ಪ್ರಬಂಧ ಎನ್ನುವ ಹದಿನಾಲ್ಕು ಆಶ್ವಾಸಗಳುಳ್ಳ ಪ್ರೌಢ ಚಂಪೂ ಕಾವ್ಯವನ್ನು ರಚಿಸಿದ. ಶೃಂಗಾರ ರಸವೆ ಈ ಕಾವ್ಯದ ಕೇಂದ್ರ ಬಿಂದು. ನೇಮಿನಾಥ ಪುರಾಣ ಎನ್ನುವುದು ಈತನ ಇನ್ನೊಂದು ಚಂಪೂ ಕಾವ್ಯ. ಮೊದಲೆನೆಯದಾಗಿ, ಹೀಗೆ, ಪಂಪ ರನ್ನರ ನಂತರ, ಅಳಿದು ಹೋಗುತ್ತಿದ್ದ ಚಂಪೂ ಕಾವ್ಯ ಪರಂಪರೆಯನ್ನು ಮತ್ತೆ ಪ್ರಚಲಗೊಳಿಸಿದ ಕೀರ್ತಿ ನೇಮಿಚಂದ್ರನಿಗೆ ಸಲ್ಲುತ್ತದೆ. ಅಸಾಧ್ಯವೆಲ್ಲವೂ ಸುಳ್ಳೆ? ಕ᳒ಟ್ಟು᳴ಗೆ᳴| ಕ᳒ಟ್ಟ᳴ದಿ᳒|ರ್ಕೆ᳴ ಕ᳴ಡ᳴|ಲಂ᳒ ಕ᳴ಪಿ᳴|ಸಂ᳒ತ᳴ತಿ᳴|, ವಾ᳒ಮ᳴ನ᳒|ಕ್ರ᳴ಮಂ᳒| ಮು᳒ಟ್ಟು᳴ಗೆ᳴| ಮು᳒ಟ್ಟ᳴ದಿ᳒|ರ್ಕೆ᳴ ಮು᳴ಗಿ᳴|ಲಂ᳒, ಹ᳴ರ᳴|ನಂ᳒ ನ᳴ರ᳴|ನೊ᳒ತ್ತಿ᳴ ಗಂ᳒|ಟ᳴ಲಂ᳒| ಮೆ᳒ಟ್ಟು᳴ಗೆ᳴| ಮೆ᳒ಟ್ಟ᳴ದಿ᳒|ರ್ಕೆ᳴, ಕ᳴ವಿ᳴|ಗ᳒ಳ್‌ ಕೃ᳴ತಿ᳴|ಬಂ᳒ಧ᳴ದೊ᳴|ಳ᳒ಲ್ತೆ᳴ ಕ᳒|ಟ್ಟಿ᳴ದ᳒|ರ್‌, ಮು᳒ಟ್ಟಿ᳴ದ᳴|ರೊ᳒ತ್ತಿ᳴ ಮೆ᳒|ಟ್ಟಿ᳴ದ᳴ರ᳴|ದೇ᳒ನ᳴ಳ᳴|ವ᳒ಗ್ಗ᳴ಳ᳴|ಮೋ᳒ ಕ᳴ವೀಂ᳒|ದ್ರ᳴ರಾ᳒|! ಎರಡನೆಯದಾಗಿ, ಒಂದು ಮುಖ್ಯ ಪ್ರಶ್ನೆಯನ್ನು ಇಲ್ಲಿ ಕೇಳುತ್ತಿದ್ದಾನೆ ನೇಮಿಚಂದ್ರ. ಸತ್ಯ ಎಂದರೆ ಏನು? what is Truth? ಪ್ರತ್ಯಕ್ಷವಾಗಿ ನಿಷ್ಕರ್ಷಿಸಬಹುದಾದ ವಾಸ್ತವಿಕ ಸತ್ಯವೋ, ಅಂತರ್ಗೋಚರ ಅನುಭವವೇದ್ಯ ಸತ್ಯವೋ? ವಸ್ತುನಿಷ್ಠ ವೈಜ್ಞಾನಿಕ ಸತ್ಯವೋ, ಅನುಭವನಿಷ್ಠ ಸಂವೇದ್ಯ ಕಾವ್ಯಸತ್ಯವೋ? Experimental truth or experiential truth? ಕಟ್ಟುಗೆ ಕಟ್ಟದಿರ್ಕೆ : ಕಟ್ಟಲಿ ಕಟ್ಟದೆ ಇರಲಿ. ಏನು ಕಟ್ಟುವುದು? ಕಡಲಂ : ಸಮುದ್ರಕ್ಕೆ ಸೇತುವೆಯನ್ನು ಕಟ್ಟುವುದು. ಯಾರು ಕಟ್ಟಿದರು? ಕಪಿಸಂತತಿ : ಕೋತಿಗಳು! ಎಲ್ಲಿ?! : ರಾಮಾಯಣದಲ್ಲಿ. ಮುಟ್ಟುಗೆ ಮುಟ್ಟದಿರ್ಕೆ: ಮುಟ್ಟಲಿ ಮುಟ್ದೆ ಇರಲಿ. ಏನು ಮುಟ್ಟುವುದು? ಮುಗಿಲಂ : ಆಕಾಶವನ್ನು. ಯಾರು? ವಾಮನಕ್ರಮಂ : ಕುಳ್ಳ ವಾಮನ ಮುಗಿಲೆತ್ತರಕ್ಕೆ ಬೆಳೆದು ಬೆಳೆದು, ಮೊದಲನೆ ಹೆಜ್ಜೆಯಿಂದ ಭೂಮಿಯನ್ನು ಆಕ್ರಮಿಸಿ, ಎರಡನೆ ಹೆಜ್ಜೆಯಿಂದ ಆಕಾಶವನ್ನು ಆವರಿಸಿ, ಮೂರನೆಯ ಹೆಜ್ಜೆಯಿಂದ ಬಲಿಯನ್ನು ಪಾತಾಳಕ್ಕಿಳಿಸಿ ತ್ರಿವಿಕ್ರಮನಾದನಲ್ಲ! ಎಲ್ಲಿ? ದಶಾವತಾರದಲ್ಲಿ! ಮೆಟ್ಟುಗೆ ಮೆಟ್ಟದಿರ್ಕೆ: ತುಳಿಯಲಿ ತುಳಿಯದೆ ಇರಲಿ. ಏನು ತುಳಿಯುವುದು? ಹರನಂ: ಶಿವನನ್ನು. ಯಾರು? ಹೇಗೆ? ನರನೊತ್ತಿ ಗಂಟಲಂ : ಅರ್ಜುನನು ಶಿವನ ಗಂಟಲನ್ನು ಹಿಸುಕಿ. ಎಲ್ಲಿ? ಮಹಾಭಾರತದ ವನಪರ್ವದಲ್ಲಿ. ಇದೆಲ್ಲ ಸಾಧ್ಯವೋ? ಸತ್ಯ ಎನಿಸಿಕೊಳ್ಳಬೇಕಾಗಿದ್ದರೆ ಸಾಧ್ಯವಾಗಿರಬೇಕಿಲ್ಲ, (ಸಂಭವನೀಯವಾಗಿದ್ದರೆ) ಸಾಧ್ಯವಾಗಬಹುದಾಗಿದ್ದರೆ ಸಾಕು; ಅಂದರೆ ಊಹೆಗೆ ನಿಲುಕಿ ಮನಸ್ಸಿನ ಕಣ್‌ ಮುಂದೆ ಮಿಂಚಿ ಪುಳಕವಾದರೆ ಅದು ಕಾವ್ಯಸತ್ಯ. ಹಗ್ಗದಲ್ಲಿ ಹಾವನ್ನು ಮೊದಲ ಬಾರಿ ಕಂಡಾಗ ನಿಜ ಹಾವೇ ಎಂದು ಹೆದರಿಕೆ ಆಗುವದು ಸಹಜ. ಆದರೆ ಒಮ್ಮೆ ವಸ್ತುನಿಷ್ಠ ಸತ್ಯದ ಅರಿವಾದರೆ, ಮತ್ತೆ ಮತ್ತೆ ಹಗ್ಗದಲ್ಲಿ ಹಾವನ್ನು ಕಾಣುವುದು ಅಸಾಧ್ಯ ಮತ್ತು ಒಲ್ಲದ ಮಾತು. ಆದರೆ, ಕಾವ್ಯಸತ್ಯವನ್ನು ಮತ್ತೆ ಮತ್ತೆ ಅನುಭವಿಸಲು ಸಾಧ್ಯವೂ ಹೌದು ಮತ್ತು ಇಷ್ಟವೂ ಹೌದು. ಇದೇ ಕಾವ್ಯದ ಮಹತ್ವ. , ವಿರಹ-ಪ್ರೇಮಗಳ ರಸವನ್ನು ಹರಿಸಿ, ಸಂದೇಶ ಒಂದನ್ನು ಮುಟ್ಟಿಸುವಂತೆ, ಮುಗಿಲಲ್ಲಿ ಮನ ಬಂದಂತೆ ಹಾರಾಡುವ ಮೋಡ ಒಂದನ್ನು ಒಪ್ಪಿಸುವುದು ಸಾಧ್ಯವೆ? ಅಸಾಧ್ಯ! ಆದರೂ‌, ಕಾಳಿದಾಸನ ಮೇಘದೂತವನ್ನು ಮತ್ತೆ ಮತ್ತೆ ಓದಬೇಕೆನಿಸುವುದಿಲ್‌ಲವೆ? ಮತ್ತೆ ಮತ್ತೆ ಓದಿ ಆನಂದಿಸುವುದಿಲ್ಲವೆ? ಅಷ್ಟೇ ಏಕೆ, ಎಷ್ಟು ಭಾಷೆಗಳಲ್ಲಿ ಈ ಮೇಘದೂತ ಹುಟ್ಟಿಕೊಂಡಿಲ್ಲ? ಕಾಳಿದಾಸನ ನಂತರ, ಇಂತಹ ಎಷ್ಟು ಇತರ ಕಾವ್ಯಗಳು ಹುಟ್ಟಿಕೊಂಡಿಲ್ಲ? ಹೀಗೆ, ಸಂದೇಶ-ಕಾವ್ಯ ಎನ್ನುವ ಒಂದು ಕಾವ್ಯ-ಪ್ರಕಾರವನ್ನೆ ಈ ಮೇಘದೂತ ಹುಟ್ಟು ಹಾಕಿಲ್ಲವೆ? ಕವಿಗಳ್‌ ಕೃತಿಬಂಧದೊಳಲ್ತೆ ಕಟ್ಟಿದರ್‌, ಮುಟ್ಟಿದರೊತ್ತಿ ಮೆಟ್ಟಿದರದೇನ್‌ ಅಳವಗ್ಗಳಮೋ ಕವೀಂದ್ರರಾ! ಇಂಥ ಅಸಾಧ್ಯಗಳನ್ನಲ್ಲ ತಮ್ಮ ಕಾವ್ಯಗಳಲ್ಲಿ ಸಾಧ್ಯಗೊಳಿಸಿ ಕಟ್ಟಿದರು, ಮುಟ್ಟಿದರು, ಮತ್ತು ಮೆಟ್ಟಿದರು. ನಮ್ಮ ಕವೀಂದ್ರರ ಕಲ್ಪನಾ ಶಕ್ತಿಗೆ ಮೇರೆ ಇದೆಯೆ? ಈಗ ನೀವೇ ಹೇಳಿ ಯಾವುದು ಸತ್ಯ? ನೇಮಿಚಂದ್ರನಿಗೆ ಒಂದಿನಿತು ಸಂಶಯವೂ ಇಲ್ಲ! ನಿಮ್ಮವನೆ ಆದ, ವಿಶ್ವೇಶ್ವರ ದೀಕ್ಷಿತ ಕನ್ನಡ ಕಲಿ, ಕನ್ನಡದ ಗುಟ್ಟು ಸುಳ್ಳು, ಸತ್ಯ, ಕಾವ್ಯ, ಮತ್ತು ನೇಮಿಚಂದ್ರ ಲೇಖನ: ವಿಶ್ವೇಶ್ವರ ದೀಕ್ಷಿತ ಸಂಗೀತ: ಆಕಾಶ ದೀಕ್ಷಿತ ಬಿತ್ತರಿಕೆ ೧೨ ಕಾಲ ೨೦೨೩, ಸಂಖ್ಯೆ ೦೨: ಬಿಕಾಸ ೧೨-೨೦೨೩-೦೨ Episode 12, Year 2023 No. 02 : BIKASA 12-2023-02

Aug 10, 202307:44
ಬೆಳಕು ತೋರಿದ ಬದುಕು : ಹೆಲನ್ ಕೆಲರ್ : Helen Keller

ಬೆಳಕು ತೋರಿದ ಬದುಕು : ಹೆಲನ್ ಕೆಲರ್ : Helen Keller

Like it? ...... Subscribe and Share! https://www.youtube.com/mykannadakali/?sub_confirmation=1
Watch at https://www.youtube.com/channel/UCCON6n4lEgj6NsPqCLZdDSw
Read at http://kannadakali.com/publications/podcasts
Listen at https://anchor.fm/kannadakali
Subscribe to our newsletter: https://kannadakali.com/kankalimitraru/?p=subscribe


ಬೆಳಕು ತೋರಿದ ಬದುಕು: ಹೆಲನ್ ಕೆಲರ್

ಎಸ್. ಜಿ. ಸೀತಾರಾಮ್

[’ಹೆಲನ್ ಕೆಲರ್’ ಎಂದೊಡನೆ ಕಣ್ಣರಳುವುದು, ಕಿವಿ ನಿಮಿರುವುದು, ಮಾತು ನಿಲ್ಲುವುದು. ಮಗುವಾಗಿದ್ದಾಗಲೇ ನೋಡುವ, ಕೇಳುವ ಮತ್ತು ಮಾತನಾಡುವ ಮೂರು ಮೂಲ ಚೇತನಗಳನ್ನೇ ತಾನು ಕಳೆದುಕೊಂಡರೂ, ಬೆಳವಣಿಗೆಯ ತೊಡಕುಗಳಿಂದ ಹತಾಶರಾಗಿರುವವರಿಗೆ ಆಶಾದೀಪವಾಗಿಯೂ, ನೊಂದಜೀವಿಗಳಿಗೆ “Helen Healer” ಎಂದಾಗಿಯೂ, ಜಗವೇ ಬೆಕ್ಕಸಬೆರಗಾಗುವಂತೆ, ೮೮ ವರ್ಷಗಳ ಪರ್ಯಂತ ಚಕಚಕಿಸಿದ “ಹೆಲನ್ ಕೆಲರ್‍” ಜನಿಸಿದ್ದು, ಜೂನ್ ೨೭, ೧೮೮೦; ಕಾಲವಾಗಿದ್ದು, ಜೂನ್ ೧, ೧೯೬೮. ಅವಳ ವೈವಿಧ್ಯಮಯ, ಸಾಹಸಪೂರ್ಣ, ವಾತ್ಸಲ್ಯಪೂರಿತ, ಜ್ಞಾನಕೌತೂಹಲಭರಿತ ಜೀವನ ಮತ್ತು ಸಾಧನೆಗಳನ್ನೂ, ಅವಳು ಮಾಡಿದ ಲೋಕಾಧಿಕ ಉಪಕಾರವನ್ನೂ ಸ್ಮರಿಸಲು ನೆರವಾಗುವಂತೆ, ಸಂಕ್ಷಿಪ್ತ ವೃತ್ತಾಂತವೊಂದು ಇಲ್ಲಿದೆ] ___________________________

Reference: https://www.youtube.com/@IamHelenKeller
[Video1] Helen Keller in her office (1919-54), https://www.youtube.com/watch?v=Pqb9B8EIY-c‌
[Video2] Helen Keller photo album (India visit-1955), https://www.youtube.com/watch?v=FeWBg63TMDo
[Video3] Helen Keller visits India, https://youtu.be/5xNulmM9c-k
[Video4] Helen Keller speaks out, https://www.youtube.com/watch?v=8ch_H8pt9M8
ಕನ್ನಡ ಕಲಿ ಬಿತ್ತರಿಕೆ, ಜುಲೈ ೨೨, ೨೦೨೩
ಬೆಳಕು ತೋರಿದ ಬದುಕು : ಹೆಲನ್ ಕೆಲರ್
ಬರೆಹ: ಎಸ್. ಜಿ. ಸೀತಾರಾಮ್
ಓದು : ರಾಜೇಶ್ವರಿ ಎಚ್.‌ ರಾವ್
ಚಿತ್ರಗಳು: ಅಂತರ್ಜಾಲ ಕೃಪೆ
Beḷaku Tōrida Baduku, Helen‌ Kelar
Author: Es. Ji. Sītārām, Maisūru
Reader: Rājēśvari ec‌. rāv‌, Arvain‌

Jul 22, 202315:52
ತೋಳಬಂದಿ ಮತ್ತು ಸೌಂದರ್ಯಸಾಧನೆ Tōḷabandi Mattu Saundarya

ತೋಳಬಂದಿ ಮತ್ತು ಸೌಂದರ್ಯಸಾಧನೆ Tōḷabandi Mattu Saundarya

Like it? ...... Subscribe and Share!
Watch at https://www.youtube.com/channel/UCCON6n4lEgj6NsPqCLZdDSw
Read at http://kannadakali.com/publications/podcasts
Listen at https://anchor.fm/kannadakali
Subscribe to our newsletter: https://kannadakali.com/kankalimitraru/?p=subscribe ಚೆನ್ನುಡಿ ತೋಳಬಂದಿ ಮತ್ತು ಸೌಂದರ್ಯಸಾಧನೆ ಮನುಷ್ಯ‌, ಹೆಂಗಸಾಗಲಿ ಗಂಡಸಾಗಲಿ, ತನ್ನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಏನೇನೋ ಮಾಡುತ್ತಾನೆ. ಹಾಲು, ಜೇನು, ತೈಲ, ತುಪ್ಪ ಗಳೊಂದಿಗೆ, ಸುಗಂಧ ದ್ರವ್ಯಗಳನ್ನು ಬೆರೆಸಿ, ಉಜ್ಜಿ ಉಜ್ಜಿ ಅಭ್ಯಂಜನ ಸ್ನಾನ ಮಾಡುತ್ತಾನೆ. ನಯವಾದ ರೇಷ್ಮೆಯ ಬಟ್ಟೆಯನ್ನು, ನಾಗಚರ್ಮದ ಪಾದರಕ್ಷೆಗಳನ್ನು ತೊಡುತ್ತಾನೆ. ಹೊಳೆಯುವ ಚಿನ್ನದ ಆಭರಣಗಳನ್ನು, ಕೋರೈಸುವ ವಜ್ರದ ಓಲೆ ಉಂಗುರಗಳನ್ನು, ನಡುವಲ್ಲಿ ವಂಕಿ, ಡಾಬುಗಳನ್ನು, ಕಾಲಲ್ಲಿ ಗೆಜ್ಜೆ, ಪಿಲ್ಲೆ, ಪೈಜಣ, ರುಳಿ, ಸರಪಳಿಗಳನ್ನು, ಮೂಗುತಿಯನ್ನು, ಕೈಗಳಲ್ಲಿ, ತೋಡೆ, ಕಡಗ, ಬಳೆಗಳನ್ನು ಹಾಕಿಕೊಳ್ಳುತ್ತಾನೆ. ಇವುಗಳಲ್ಲಿ ಯಾವುದು ನಿಜವಾದ ಸೌಂದರ್ಯವರ್ಧಕ? ಯಾವುದು ಶಾಶ್ವತ? ಇದಕ್ಕೆ ೭ನೆ ಶತಮಾನದ, ವಿದ್ವಾಂಸನಾದ ಭರ್ತೃಹರಿಯನ್ನು ಕೇಳೋಣ. ಈತ "ಸುಭಾಷಿತ ತ್ರಿಶತೀ" ಎನ್ನುವ ಗ್ರಂಥವನ್ನು ಬರೆದಿದ್ದಾನೆ. ಇದರಲ್ಲಿ ನೀತಿಶತಕ, ಶೃಂಗಾರಶತಕ, ವೈರಾಗ್ಯಶತಕ ಎನ್ನುವ ಮೂರು ಶತಕಗಳು - ಅಂದರೆ ನೂರು ಬಿಡಿ ಪದ್ಯಗಳ ಕಂತೆಗಳು ಇವೆ. ಈಗ ನೀತಿಶತಕದಲ್ಲಿನ ಪದ್ಯ ಒಂದನ್ನು ನೋಡೋಣ: ಕೇಯೂರಾ ನ ವಿಭೂಷಯಂತಿ ಭರ್ತೃಹರಿ, ನೀತಿಶತಕ, ಪದ್ಯ ೧೭. ಕೇಯೂರಾ ನ ವಿಭೂಷಯಂತಿ ಪುರುಷಂ ಹಾರಾ ನ ಚಂದ್ರೋಜ್ವಲಾಃ ನ ಸ್ನಾನಂ ನ ವಿಲೇಪನಂ ನ ಕುಸುಮಂ ನಾಲಂಕೃತಾ ಮೂರ್ಧಜಾಃ ವಾಣ್ಯೇಕಾ ಸಮಲಂಕರೋತಿ ಪುರುಷಂ ಯಾ ಸಂಸ್ಕೃತಾ ಧಾರ್ಯತೇ ಕ್ಷೀಯಂತೇ ಖಲು ಭೂಷಣಾನಿ ಸತತಂ ವಾಗ್ಭೂಷಣಂ ಭೂಷಣಂ ತೋಳಬಂದಿ ಒಡವೆಯಲ್ಲ ಚಂದ್ರ ಹೊಳಪಿನ ಹಾರ ತೋಳಬಂದಿಗಳೊಡವೆಯಲ್ಲ; ಮೈ ತೊಳೆದು ಪರಿಮಳಿಸಿ ತಲೆಯಲ್ಲಿ ಹೂ ಮುಡಿದರಲ್ಲ! ಕಂನಡೆಯು ತುಂಬಿರುವ ಕಂನುಡಿಯೆ ಚೆನ್ನೊಡವೆ ನರಗೆ; ನುಡಿಯೊಡವೆಯೇ ಒಡವೆ, ಅಳಿಯುವವು ಮಿಗಿದೊಡವೆ ಎಲ್ಲ. ಮೈ ಕೈ, ತೋಳು, ನಡು, ತಲೆ, ಕಾಲುಗಳಲ್ಲಿ ಏನೇ ಹಾಕಿಕೊಂಡರೂ ಅವು ಎಲ್ಲ ಕ್ರಮೇಣ ಮಸುಕಾಗಿ, ಕ್ಷೀಣಿಸುತ್ತ, ಅಳಿದು ಹೋಗುತ್ತವೆ. ಆದರೆ, ಒಳ್ಳೆಯ ನಡೆ ನಡತೆಯ ಜೊತೆ ಓಳ್ಳೆಯ ಮಾತುಗಳು ಅವು ನಿಜವಾದ, ಯಾವಾಗಲೂ ಕೆಡದೆ ಇರುವ, ಯವಾಗಲೂ ಶೋಭೆಯನ್ನು ಕೊಡುವ ಅಲಂಕಾರಗಳು, ಒಡವೆಗಳು. ಪ್ರಶ್ನೆ / ಚಾಲೆಂಜ್‌ : ಪ್ರಯತ್ನಿಸಿ ೧. ಈ ಬಿತ್ತರಿಕೆಯಲ್ಲಿ ಹೇಳಿದವುಗಳಲ್ಲದೆ^ ಇತರ ಒಂದು ನೂರು (೧೦೦) ಸಾಂಪ್ರದಾಯಿಕ ಮತ್ತು ಆಧುನಿಕ ಉಡುಗೆ/ತೊಡುಗೆ/ಒಡವೆ/ಆಭರಣಗಳನ್ನು ಪಟ್ಟಿ ಮಾಡಬಲ್ಲಿರಾ? ೨. ಮನುಷ್ಯ ಸ್ನಾನಕ್ಕೆ ಬಳಸುವ ಒಂದು ನೂರು (೧೦೦) ಸಾಧನ/ದ್ರವ್ಯಗಳನ್ನು ಪಟ್ಟಿ ಮಾಡಬಲ್ಲಿರಾ? _________ ^ ರೇಷ್ಮೆಯ ಬಟ್ಟೆ, ನಾಗಚರ್ಮದ ಪಾದರಕ್ಷೆ, (ಚಿನ್ನದ / ವಜ್ರದ) ಓಲೆ ಉಂಗುರಗಳು, ವಂಕಿ, ಡಾಬು, ಗೆಜ್ಜೆ, ಪಿಲ್ಲೆ, ಪೈಜಣ, ರುಳಿ, ಸರಪಳಿ,, ಮೂಗುತಿ, ತೋಡೆ, ಕಡಗ, ಬಳೆ ಕನ್ನಡ ಕಲಿ, ಬಿತ್ತರಿಕೆ, ತೋಳಬಂದಿ ಮತ್ತು ಸೌಂದರ್ಯಸಾಧನೆ Kannada Kali Bittarike, July 08, 2023

Jul 08, 202304:34
ಮುಗ್ಧ ಮನಸ್ಸುಗಳ ಸಾಕ್ಷಾತ್ಕಾರವೇ ಸಾಕೇತ ಸಿದ್ಧಾಂತ Mugdha Manas'sugaḷa Sākṣātkāravē Sākēta Sid'dhānta

ಮುಗ್ಧ ಮನಸ್ಸುಗಳ ಸಾಕ್ಷಾತ್ಕಾರವೇ ಸಾಕೇತ ಸಿದ್ಧಾಂತ Mugdha Manas'sugaḷa Sākṣātkāravē Sākēta Sid'dhānta

Like it? ...... Subscribe and Share!
Watch at https://www.youtube.com/channel/UCCON6n4lEgj6NsPqCLZdDSw
Read at http://kannadakali.com/publications/podcasts
Listen at https://anchor.fm/kannadakali
Subscribe to our newsletter: https://kannadakali.com/kankalimitraru/?p=subscribe

ಮುಗ್ಧ ಮನಸ್ಸುಗಳ ಸಾಕ್ಷಾತ್ಕಾರವೇ
ಸಾಕೇತ ಸಿದ್ಧಾಂತ ಒಂದು ಸಂದೇಶ
ಬರೆಹ ಮತ್ತು ಓದು: ರೂಪ ಮಂಜುನಾಥ

ಮೊನ್ನೆ ತಾನೆ ಕನ್ನಡ ಕಲಿಯ ಬಿತ್ತರಿಕೆ ಬಿಕಾಸ ೧೧-೨೦೨೩-೦೧ರಲ್ಲಿ ನಿಮಗೆ ಪರಿಚಯಿಸಿದ ಸಾಕೇತ ಸಿದ್ದಾಂತಕ್ಕೆ ಸ್ಪಂದಿಸಿ ಒಂದು ಸಂದೇಶವನ್ನು, ಲಲಿತ ಪ್ರಬಂಧವನ್ನು ಅನ್ನಿ, ಕಳಿಸಿದ್ದಾರೆ ರೂಪ ಮಂಜುನಾಥ. ಕರ್ನಾಟಕ ಸಾಂಸ್ಕೃತಿಕ ಸಂಘದ ಸುವರ್ಣ ಮಹೋತ್ಸವ‌ ಕಾರ್ಯಕ್ರಮದ ಕವಿಗೋಷ್ಠಿಯಲ್ಲಿ, ಕವನ ಓದಿದ ಮಕ್ಕಳ ಬಗ್ಗೆ, ಅವರನ್ನು ಬೆಳೆಸಿದ ತಾಯಿ ತಂದೆಯರ ಬಗ್ಗೆ, ಅರಳು ಮಲ್ಲಿಗೆ ಮತ್ತು ಗೋಕುಲ ಮಕ್ಕಳು ಎನ್ನುವ ಪುಟ್ಟ ಕನ್ನಡ ಸಾಂಸ್ಕೃತಿಕ ಸಮುದಾಯಗಳ ಬಗ್ಗೆ, ಹಾಗೂ ಸಾಕೇತ ಸಿದ್ಧಾಂತರ ಕವನಗಳನ್ನು ಪ್ರಕಟಿಸಿದ ಕನ್ನಡ ಕೂಟದ ಸ್ಮರಣ ಸಂಚಿಕೆಯ ಬಗ್ಗೆ, ತಮ್ಮ ಅನಿಸಿಕೆಗಳನ್ನು ಇಲ್ಲಿ ತೆರೆದಿಟ್ಟಿದ್ದಾರೆ.

ರೂಪ ಮಂಜುನಾಥ
ಕಲೆ ಹಾಗೂ ಸಾಹಿತ್ಯ ಸೇವೆಗಳಲ್ಲಿ ತೊಡಗಿಸಿಕೊಂಡಿರುವ, ಹಾಸನ ಜಿಲ್ಲೆಯ ಹೊಳೆ ನರಸೀಪುರದ ರೂಪ ಮಂಜುನಾಥ ಅವರು, ಬಹುಮುಖ ಪ್ರತಿಭೆ ಎಂಬ ಗೌರವಕ್ಕೆ ಪಾತ್ರರಾದ ಲೇಖಕಿ, ಕವಯಿತ್ರಿ, ಚಿತ್ರಕಲಾವಿದೆ, ಮತ್ತು ಗಮಕ ಸಂಗೀತಗಳನ್ನು ಕಲಿತವರು. ಯೋಗ, ಧ್ಯಾನ, ಚಾರಣ, ಪ್ರವಾಸ, ಆರೋಗ್ಯಪಾಕಶಾಸ್ತ್ರಗಳಲ್ಲಿ ಇವರಿಗೆ ಅಪಾರ ಆಸಕ್ತಿ. ಈಗಾಗಲೆ ವಚನಾರ್ಪಣೆ, ಭಾವ-ಚಿತ್ತಾರ, ಮತ್ತು ಸ್ವಲ್ಪ ನಗೀ ಪ್ಲೀಸ್ ಎನ್ನುವ ಇವರ ಮೂರು ಪುಸ್ತಕಗಳು ಪ್ರಕಟವಾಗಿವೆ. ಇನ್ನೆರಡು ಪುಸ್ತಕಗಳು‌ ಬಿಡುಗಡೆಯ ಹಂತದಲ್ಲಿವೆ.

Kannada Kali Bittarike June 24, 2023

Jun 24, 202309:29
ಕನ್ನಡಕ್ಕೊಂದು ಸಾಕೇತ ಸಿದ್ಧಾಂತ Saketa Theory for Kannada

ಕನ್ನಡಕ್ಕೊಂದು ಸಾಕೇತ ಸಿದ್ಧಾಂತ Saketa Theory for Kannada

A Saketa Theory for Kannada

Like it? ...... Subscribe and Share!

Watch at https://www.youtube.com/channel/UCCON6n4lEgj6NsPqCLZdDSw

Read at http://kannadakali.com/publications/podcasts

Listen at https://anchor.fm/kannadakali


ಕನ್ನಡ ಕೇವಲ ಒಂದು ವ್ಯಾವಹಾರಿಕ ಮಾಧ್ಯಮವೋ?‌ ಆಥವ ಅದಕ್ಕಿಂತ ಮಿಗಿಲಾದ ಮೌಲ್ಯ ಏನಾದರೂ ಅದರಲ್ಲಿ ಇದೆಯೋ? ನಡೆ-ನುಡಿಗಳ ಸಾಪೇಕ್ಷ ವಾದವನ್ನು ಪುಷ್ಟೀಕರಿಸಿ ಕನ್ನಡ ಸಂಸ್ಕೃತಿಯ ನೆಲೆಯಲ್ಲಿ ಕನ್ನಡ ಕಲಿಯುವುದು ಮತ್ತು ಕನ್ನಡ ನುಡಿಯಲ್ಲಿ ಕನ್ನಡ ಸಂಸ್ಕೃತಿಯನ್ನು ಗಳಿಸುವುದು ಇವು ಅತ್ಯಂತ ಪರಿಣಾಮಕಾರಿ ವಿಧಾನಗಳು. ಎರಡು ಪ್ರಾತ್ಯಕ್ಷಿಕೆಗಳು. 00:00 ಕನ್ನಡದ ಗುಟ್ಟು 00:36 ಕನ್ನಡಕ್ಕೊಂದು ಸಾಕೇತ ಸಿದ್ಧಾಂತ 00:55 ನಡೆ ನುಡಿಗಳ ಸಂಕೀರ್ಣ 01:12 ಸಾಕೇತ ಸಿದ್ಧಾಂತ 03:10 ಹಿನ್ನೆಲೆ 03:53 ಸಂದರ್ಭ - ಕವಿಗೋಷ್ಠಿ 04:27 ಕವಿಗಳು 05:27 ಪ್ರಾತ್ಯಕ್ಷಿಕೆ 08:46 ಕನ್ನಡ ಕಲಿ ಕವಿತಾ ಚಾಲೆಂಜ್ 09:‌03 Credits

Jun 10, 202309:32
Kattada- Na Griham ಕಟ್ಟಡವು - ನ ಗೃಹಂ

Kattada- Na Griham ಕಟ್ಟಡವು - ನ ಗೃಹಂ

Kannada version of   na griham grihamityahuh

Like it? ......  Subscribe and Share!

Watch at https://www.youtube.com/channel/UCCON6n4lEgj6NsPqCLZdDSw

Read   at http://kannadakali.com/publications/podcasts

Listen at https://anchor.fm/kannadakali

ಚೆನ್ನುಡಿ ಕಟ್ಟಡವು ಮನೆಯನ್ನಲಹುದೆ?

    ಕೇಳು, ಮನೆ ಅವಳು ಮನೆಯವಳು.  

ಮನೆಯವಳು ಮನೆಯೊಳಿರದಿರಲು

    ಕಾಡು ಅದು; ಕಾಡುವುದು ಮನವ. 

             ಸಂಸ್ಕೃತ ಮೂಲ

ಮಹಾಭಾರತ,     ಶಾಂತಿಪರ್ವ ೧೨-೧೪೪.೬   

ನ ಗೃಹಂ ಗೃಹಮಿತ್ಯಾಹುಃ     

   ಗೃಹಿಣೀ ಗೃಹಮುಚ್ಯತೇ ; 

ಗೃಹಂ ತು ಗೃಹಿಣೀಹೀನಂ 

    ಅರಣ್ಯ ಸದೃಶಂ ಭವೇತ್.

Mar 09, 202301:09
Ādi Śaṅkara Viracita Kālabhairava : ಕಾಲಭೈರವ

Ādi Śaṅkara Viracita Kālabhairava : ಕಾಲಭೈರವ

Like it? ......  Subscribe and Share! 

Kannada Kali - Ādi Śaṅkara Viracita Kālabhairava  

Watch at https://www.youtube.com/channel/UCCON6n4lEgj6NsPqCLZdDSw

Read   at http://kannadakali.com/publications/podcasts

Listen at https://anchor.fm/kannadakali

Feb 19, 202306:18
ನಮ್ಮ ನಡುವಿದ್ದ ನಾಡೋಜ - Dr. Srinivas Havanur

ನಮ್ಮ ನಡುವಿದ್ದ ನಾಡೋಜ - Dr. Srinivas Havanur

Like it? ...  Subscribe and Share!  

Watch it ... https://www.youtube.com/mykannadakali

Read  it ...  http://kannadakali.com/publications/podcasts

Listen it ... https://anchor.fm/kannadakali 

ನಮ್ಮ ನಡುವಿದ್ದ ನಾಡೋಜ 

ಲೇಖನ: *** ಸಂಜಯ ಹಾವನೂರ 

ಓದು:        ವಿಶ್ವೇಶ್ವರ ದೀಕ್ಷಿತ  

[ ಇಂದು, ಡಿಸೆಂಬರ ೨೮. ಕನ್ನಡದ ಹೊಸ ಬೆಳಕು ಮೂಡಿದ ದಿನ.  ಶ್ರೀನಿವಾಸ ಎಂಬ ಒಬ್ಬ ಹಳ್ಳಿಯ ಬಡ ಹುಡುಗ ಹುಟ್ಟಿದ ದಿನ. ಎಲ್ಲ ಕಷ್ಟಗಳನ್ನೂ ಮೀರಿ, ತನ್ನ ಕಲಿಯುವ ಉತ್ಕಟತೆ, ಪುಸ್ತಕ ಪ್ರೇಮ, ಮತ್ತು ಹೊಸತನದ ಹಂಬಲಿಕೆಗಳಿಂದ ಒಬ್ಬ ಉತ್ಕೃಷ್ಟ ಸಂಶೋಧಕನಾಗಿ, ಸಂಶೊಧನೆಗೇ ಒಂದು ಹೊಸ ಅಯಾಮವನ್ನು ಜೋಡಿಸಿ, ನಾಡೋಜನಾಗಿ ಬೆಳೆದು ನಿಂತ ಕತೆ ಇದು.  ಕನ್ನಡ ಕಲಿಗಳಿಗಷ್ಟೆ ಅಲ್ಲ, ಎಲ್ಲರಿಗೂ ಸ್ಫೂರ್ತಿ ನೀಡುವ,  ಡಾ. ಶ್ರಿನಿವಾಸ ಹಾವನೂರರನ್ನು ಇದಕ್ಕಿಂತ ಹತ್ತಿರವಾಗಿ ಕಂಡು ಹೇಳಿದ ಕತೆ ನಿಮಗೆ ಬೇರೆ ಎಲ್ಲಿಯೂ ಸಿಗದು. – ಸಂ. ]  

0:0.0 ಪೀಠಿಕೆ 

1:09 ಬಾಲ್ಯ, ಮತ್ತು ವಿದ್ಯಾರ್ಥಿ ಜೀವನ 

2:41.5 ದಿಗ್ಗಜರ ಸಂಗಡ 

3:56.5 ಸೃಜನಶೀಲ ಲೇಖಕನಾಗಿ 

5:17.5 ಜನ್ಮಜಾತ ಸಂಶೋಧಕ 

7:01 ಸಂಶೋಧನೆಗೆ ಮೂರನೆಯ ಆಯಾಮ 

9:58 ಕನ್ನಡಕ್ಕೆ ಹೊಸತನ ತಂದರು 

1:31 ಕನ್ನಡವೆ ಜೀವನ 12:55 ನಮ್ಮನ್ನು ಅಗಲಿಸಿ ಅಗಲಿದ ನಾಡೋಜ  

13:44.5 ಸಂಪರ್ಕ

Dec 28, 202214:12
ಶಂಖಣ್ಣನ ಹಣೆಬರಹ - Śaṅkhaṇṇana haṇebaraha

ಶಂಖಣ್ಣನ ಹಣೆಬರಹ - Śaṅkhaṇṇana haṇebaraha

Like it? ...  Subscribe and Share!

Watch it ... at https://www.youtube.com/mykannadakali

Read  it ...  http://kannadakali.com/publications/podcasts

Listen it ... https://anchor.fm/kannadakali

ಶಂಖಣ್ಣನ ಹಣೆಬರಹ  ಯಾವ ಮನೆತನದಲ್ಲಿ ಹುಟ್ಟಿದರೇನು? ಏನು ಕಲಿತರೇನು? ಏನು ಮಾಡಿದರೇನು? ಮುಂದೆ ಏನಾಗುವುದು? ಎಲ್ಲವೂ ಹಣೆಬರಹ ಎಂದುಕೊಳ್ಳುವುದು ಸಾಮಾನ್ಯ. ವಿಶೇಷವಾಗಿ, ನಿರೀಕ್ಷಿಸಿದ್ದು ಆಗದಿದ್ದಾಗ, ಅಥವ,  ಕೆಲವರಿಗೆ ಸಿರಿ, ಸಂಪತ್ತು, ಸೌಲಭ್ಯ, ಖ್ಯಾತಿ, ಹೀಗೆಲ್ಲ, ಪಾತ್ರರಿದ್ದರೂ ಸಿಗದಿದ್ದಾಗ, ಅಪಾತ್ರರಿದ್ದರೂ ಅನಾಯಾಸವಾಗಿ ಸಿಕ್ಕಾಗ ಅಂದುಕೊಳ್ಳುವುದು ಹಣೆಬರಹ, ದೈವ, ಭಾಗ್ಯ, ಲಕ್ಕು,  ಅಂತ! 

ಇದು ನಿಜವೋ, ಕೆವಲ ಸಮಾಧಾನಕ್ಕೋಸ್ಕರ ಹೇಳಿಕೊಳ್ಳುವ ಮಾತೋ? ಅಂತೂ ಒಂದಾನೊಂದು ಸಂದರ್ಭದಲ್ಲಿ ನಿಮಗೂ ಹೀಗೆ ಅನಿಸಿರಬಹುದು. ಎಲ್ಲವನ್ನೂ ಆದಂತೆ ಒಪ್ಪಿಕೊಂಡು ಕೂಡುವ ಜಾಯಮಾನ ಚಾಣಕ್ಯನದು ಅಲ್ಲ ಅದರೂ ಅವನು ಹೇಳಿದ್ದು ಹೀಗೆ:  

ದೇವ ದಾನವರು ಕೂಡಿ ಸಮುದ್ರಮಂಥನ ಮಾಡಿದಾಗ, ಅಮೃತಕ್ಕಿಂತ ಮೊದಲು ನವರತ್ನಗಳು, ಕಲ್ಪವೃಕ್ಷ, ಕಾಮಧೇನು. ಹೊರಬಂದವು; ವಾರುಣಿ ಅಪ್ಸರೆಯರು ಬಂದರು; ಲಕ್ಷ್ಮಿಯೂ ಉದಿಸಿದಳು; ಶಂಖ ಕೂಡ ಹುಟ್ಟಿದ್ದು ಸಮುದ್ರದಲ್ಲೆ.  ಅಂದರೆ ಅಕ್ಕ ಲಕ್ಷ್ಮಿಗೂ ಅಣ್ಣ ಶಂಖನಿಗೂ ಸಮುದ್ರರಾಜನೇ ಅಪ್ಪ!  

ಚಾಣಕ್ಯ ನೀತಿಯ, ೧೭ನೆ ಅಧ್ಯಾಯದ ಚೆನ್ನುಡಿ ೫: Chanakya Niti (Chap. 17 – Shloka 5 )  

ಪಿತಾ ರತ್ನಾಕರೋ ಯಸ್ಯ,

    ಲಕ್ಷ್ಮೀರ್ಯಸ್ಯ ಸಹೋದರೀ,  

ಶಂಖೋ ಭಿಕ್ಷಾಟನಂ ಕುರ್ಯಾತ್‌ -

     ಫಲಂ ಭಾಗ್ಯಾನುಸಾರತಃ!  

ರತ್ನಗಳ ಆಕರವೆ ಆದ ಸಮುದ್ರರಾಜನೆ ಅಪ್ಪ;  ಸಿರಿಯೆ ತಾನಾದ ಲಕ್ಷ್ಮಿಯೆ ತನ್ನ ಅಕ್ಕ. ಆದರೂ, ಈ ಶಂಖಣ್ಣ, "ಭವತಿ, ಬಿಕ್ಷಾಂದೇಹಿ!" ಅಂತ ಮನೆ ಮನೆ ತಿರುಗುತ್ತಾನಲ್ಲ! ಅವನ ಹಣೆಬರಹ!  ಕಡಲರಸನೇ ತನ್ನ ಅಪ್ಪ ,    ಸಿರಿಯಕ್ಕ ತನ್ನ ಒಡಹುಟ್ಟು ; ಆದರೂ ತಿರಿವ ಶಂಖಣ್ಣ !    ಅವರವರ ಹಣೆಬರಹ ಎಲ್ಲ!   

ಆದರೆ ಇದೇ ಚೆನ್ನುಡಿಯ ಇನ್ನೊಂದು ಪಾಠಾಂತರ ಹೀಗಿದೆ:  

ಪಿತಾ ರತ್ನಾಕರೋ ಯಸ್ಯ,

     ಲಕ್ಷ್ಮೀರ್ಯಸ್ಯ ಸಹೋದರೀ,  

ಶಂಖೋ ಭಿಕ್ಷಾಟನಂ ಕುರ್ಯಾತ್‌ - 

   ನ ದತ್ತಮುಪತಿಷ್ಠತೇ!  

ಕಡಲರಸನೇ ತನ್ನ ಅಪ್ಪ ,

    ಸಿರಿಯಕ್ಕ ತನ್ನ ಒಡಹುಟ್ಟು ; 

ಆದರೂ ತಿರಿವ ಶಂಖಣ್ಣ !

    ಕೊಡದೆಯೇ ಪಡೆಯುವುದು ಎಂತು?   

ಇದರಲ್ಲಿ ಕೊನೆಯ ಒಂದು ಸಾಲು ಮಾತ್ರ ಬೇರೆ ಆಗಿದೆ. ಬಹಳ ಅರ್ಥಗರ್ಭಿತವಾಗಿದೆ.  ಮೊದಲನೆ ಚೆನ್ನುಡಿಯಲ್ಲಿ‌, ಎಲ್ಲವೂ ಹಣೆಬರಹ ಎಂದು ಕೈಚಾಚಿ ಕುಳಿತದ್ದಾದರೆ, ಎರಡನೆಯದರಲ್ಲಿ, "ಕೊಡದೆಯೆ ಪಡೆಯುವುದು ಹೇಗೆ?" ಎಂದು ಕೇಳುತ್ತಾನೆ ಚಾಣಕ್ಯ.  ಇಲ್ಲಿ "ಕೊಡದೆಯೇ " ಅಂದರೆ,  ಬರಿ ದಾನ ಕೊಡದೆ ಅಂತ ಅಲ್ಲ, ಪಾಪ-ಪುಣ್ಯ ಅಂತ ಪರಲೋಕದ ಚಿಂತೆಯೂ ಅಲ್ಲ. ಇಲ್ಲಿ, ಇಹಲೋಕದಲ್ಲಿ, ನಿಮ್ಮನ್ನು ನೀವು ಅರ್ಪಿಸಿಕೊಳ್ಳದೆ, ಪೂರ್ತಿ ತೊಡಗಿಸಿಕೊಳ್ಳದೆ, invest ಮಾಡದೆ, ಶಕ್ತಿಯನ್ನು ವ್ಯಯಿಸದೆ ಜೀವನದಲ್ಲಿ ಏನೂ ದೊರೆಯುವುದಿಲ್ಲ, ಏನನ್ನೂ ಸಾಧಿಸಲು ಆಗುವುದಿಲ್ಲ. ಬಿತ್ತದೇ ಬೆಳೆ ಬರುವುದು ಉಂಟೆ? No action, No reaction!   

ಅದಕ್ಕೆ, ಹಣೆಬರಹ ಹಣೆಯಲ್ಲೆ ಇರಲಿ. ಬದುಕು ಕೈಯಲ್ಲಿದೆ.  ಕೈ ಕೆಸರಾದರೆ ಬಾಯ್‌ ಮೊಸರು! ಇಲ್ಲವಾದರೆ, ಇಂದೋ ನಾಳೆಯೋ, ಶಂಖಣ್ಣನ ಜೊತೆಗೆ ತಿರುಪೆ ಎತ್ತುತ್ತ ತಿರುಗುವುದೆ ಗತಿ.  

ನಿಮ್ಮವನೆ ಆದ

 ವಿಶ್ವೇಶ್ವರ ದೀಕ್ಷಿತ  

ಕನ್ನಡ ಕಲಿ, ಬಿತ್ತರಿಕೆ,  ಶಂಖಣ್ಣನ ಹಣೆಬರಹ 

ಸಂಗೀತ : ಶ್ರೀಮತಿ ವಾಣಿ ಯದುನಂದನ 

December 5,2022  

0:00  ಪೀಠಿಕೆ 

1:38 ಚೆನ್ನುಡಿ ೧ - ಅವರವರ ಹಣೆಬರಹ ಎಲ್ಲ 

3:07  ಚೆನ್ನುಡಿ ೨ - ಕೊಡದೆಯೇ ಪಡೆಯುವುದು ಎಂತು? 

5:12  Credits

Dec 05, 202205:40
ಚಾತಕ - ಕವಿಸಮಯ Chataka KaviSamaya

ಚಾತಕ - ಕವಿಸಮಯ Chataka KaviSamaya

A Kannada Lesson - ಕನ್ನಡ ಪದ್ಯ ಪಾಠ

Like it? ...  Subscribe and Share!

Watch it ... at https://www.youtube.com/mykannadakali

Read  it ...  http://kannadakali.com/publications/podcasts

Listen it ... https://anchor.fm/kannadakali

ಚಾತಕ, Clamator jacobinus, Jacobin cuckoo , pied cuckoo or pied crested cuckoo ಎಂದು ಸಾಮಾನ್ಯವಾಗಿ ಗುರುತಿಸಲ್ಪಟ್ಟ, ಒಂದು ಕೋಗಿಲ ಜಾತಿಯ ಪಕ್ಷಿ. ಇದಕ್ಕೆ ಶಾರಂಗ,  ಮಾತಂಗ,  ಸ್ತೋಕಕ ಎಂದು ಕೂಡ ಹೆಸರುಗಳು ಇವೆ.      ಸ್ತೋಕ  ಅಂದರೆ ಕಣ , ಹನಿ.  ಮಳೆಯ ಹನಿಗಳನ್ನು ಮಾತ್ರ, ನೇರವಾಗಿ,  ಕುಡಿದು ಬದುಕುವ ಪಕ್ಷಿ ಸ್ತೋಕಕ, ಚಾತಕ . ಅದರಲ್ಲೂ, ಸ್ವಾತಿ ನಕ್ಷತ್ರದ ಮಳೆಗಾಗಿ ಹಾತೊರೆಯುತ್ತ, ಒಂಟಿ ಕಾಲಿನ ಮೇಲೆ, ಬಾಯ್ತೆರೆದು, ವರ್ಷವಿಡೀ ನಿಂತುಕೊಳ್ಳುವ ಪಕ್ಷಿ.  ಇದೊಂದು ಕವಿಸಮಯ.  ಕವಿ ಕಾಳಿದಾಸ ತನ್ನ ಮೇಘದೂತದಲ್ಲಿ ಯಕ್ಷ-ಯಕ್ಷಿಯರ ಪ್ರೇಮದ ಹಂಬಲಿಕೆಯ ರೂಪಕವಾಗಿ ಇದನ್ನು ಬಳಸಿದ್ದಾನೆ. ಇದು ಇತರ ಕಾವ್ಯಗಳಲ್ಲಿ  ಮುಂದುವೆರೆದು ಜನಜನಿತವಾಗಿದೆ. ಈ ಕವಿಸಮಯದ ಆಧಾರದ ಮೇಲೆ ರಚಿತವಾದ ಮೂರು ಚೆನ್ನುಡಿಗಳು ಹೀಗಿವೆ:  

ಮೊದಲನೆಯ ಚೆನ್ನುಡಿ:    ಗೆಳತಿ ಚಾತಕಿ - ರೇ ರೇ ಚಾತಕ  

ಎಲೆ ಎಲೇ ಗೆಳತಿ ಚಾತಕಿಯೆ, ಚಣವೊಮ್ಮೆ,

        ಕಿವಿಗೊಟ್ಟು ನೀ ನನ್ನ ಮಾತೊಂದ ಕೇಳು:

 ಗಗನದಲಿ ಹಾರುವವು ಮೋಡಗಳು ಬಹಳ,

        ಕರಿ ನೀಲಿ ಬಿಳಿ ಬೂದಿ ಹಿರಿ ಕಿರಿದು ತೆರನ;

  ಮಳೆಗರೆದು ಇಳೆಯನ್ನು ತೋಯಿಸಲು ಕೆಲವು,

     ನಗೆ ಮಿಂಚು ಸೂಸಿ ಬರಿ ಗುಡುಗುವವು  ಹಲವು :

  ಕಂಡಕಂಡವರಿಗೆರಗುತ್ತ, ನೀ ಗೆಳತಿ,

ಮೊರೆ ಇಡುತ ಬೇಡದಿರು, ನಾ ಬಡವಿ, ಎಂದು 

ಸಂಸ್ಕೃತ ಮೂಲ:  ಭರ್ತೃಹರಿ, ನೀತಿಶತಕ-೪೯   

ರೇ ರೇ ಚಾತಕ, ಸಾವಧಾನಮನಸಾ, ಮಿತ್ರ ಕ್ಷಣಂ ಶ್ರೂಯತಾಂ. 

 ಅಂಭೋದಾ ಬಹವೋ ಹಿ ಸಂತಿ ಗಗನೇ ಸರ್ವೇಽಪಿ ನೈತಾದೃಶಾಃ ;

ಕೇಚಿದ್ ವೃಷ್ಟಿಭಿರಾರ್ದ್ರಯಂತಿ ವಸುಧಾಂ ಗರ್ಜಂತಿ ಕೇಚಿದ್ ವೃಥಾ ;

ಯಂ ಯಂ ಪಶ್ಯಸಿ ತಸ್ಯ ತಸ್ಯ ಪುರತೋ  ಮಾ ಬ್ರೂಹಿ ದೀನಂ ವಚಃ.

         -----------------


ಎರಡನೆಯ ಚೆನ್ನುಡಿ:      ಹಕ್ಕಿ ಚಾತಕಕೆ - ಏಕ ಏವ ಖಗ

ಹಕ್ಕಿ ಚಾತಕಕೆ ಬಲು ಹೆಮ್ಮೆ,

   ಮಳೆಯ ನೀರೇ ಬೇಕು ಸೊಗಕೆ;

ಬೇಡುವುದು ಘನರಾಜನನ್ನೆ:

   ಕೀಳ್ಜನಕೆ ಬಾಯ್ತೆರೆಯಲೇಕೆ?

ಸಂಸ್ಕೃತ ಮೂಲ:    ಶ್ರೀಧರದಾಸನ ಸದುಕ್ತಿ ಕರ್ಣಾಮೃತ

ಏಕ ಏವ ಖಗೋ ಮಾನೀ

     ಸುಖಂ ಜೀವತಿ ಚಾತಕಃ; 

ಅರ್ಥಿತ್ವಂ  ಯಾತಿ ಶಕ್ತಸ್ಯ

     ನ ನೀಚಮುಪಸರ್ಪತಿ. 

      ------------------


ಮೂರನೆಯ ಚೆನ್ನುಡಿ:      ಮೂರು ಯಾ ನಾಲ್ಕು - ಚಾತಕಸ್ತ್ರಿಚತುರಾನ್

ಮೂರು ಯಾ ನಾಲ್ಕು ಹನಿ ನೀರು ನೀಡೆಂದು

    ಚಾತಕವು ಬಾಯ್ದೆರೆದು ಬೇಡಲಾ ಮುಗಿಲು

ಮಳೆಗರೆದು ತುಂಬಿಸಿತು ಇಡಿಯ ಇಳೆಯನ್ನು

    ದೊಡ್ಡವರ ಔದಾರ್ಯಕಿದೆಯೆ ಇತಿಮಿತಿಯು!

ಸಂಸ್ಕೃತ ಮೂಲ:  ಪೂರ್ವಜಾತಕಾಷ್ಟಕಂ 

ಚಾತಕಸ್ತ್ರಿಚತುರಾನ್ ಪಯಃ ಕಣಾನ್

     ಯಾಚತೇ ಜಲಧರಂ ಪಿಪಾಸಯಾ; 

ಸೋಽಪಿ  ಪೂರಯತಿ ವಿಶ್ವಮಂಭಸಾ :

    ಹಂತ ಹಂತ ಮಹತಾಮುದಾರತಾ! 

     ---------------


0:00 ಪರಿಚಯ 

1:18 ಗೆಳತಿ ಚಾತಕಿ - ರೇ ರೇ ಚಾತಕ 

3:25 ಹಕ್ಕಿ ಚಾತಕಕೆ - ಏಕ ಏವ ಖಗ 

4:21 ಮೂರು ಯಾ ನಾಲ್ಕು - ಚಾತಕಸ್ತ್ರಿಚತುರಾನ್

Nov 02, 202205:60
ಕ್ಲಿಕ್ ಕ್ಲಿಕ್ ಗಣಕಪ್ಪ klik klik Ganakappa

ಕ್ಲಿಕ್ ಕ್ಲಿಕ್ ಗಣಕಪ್ಪ klik klik Ganakappa

A Kannada Lesson - ಕನ್ನಡ ಪದ್ಯ ಪಾಠ  

Like it? ...  Subscribe and Share! 

Watch it ... at https://www.youtube.com/mykannadakali

Read  it ...  http://kannadakali.com/publications/podcasts

Listen it ... https://anchor.fm/kannadakali

ಈ ಪದ್ಯವನ್ನು ನಿಮ್ಮ ವಿದ್ಯಾರ್ಥಿಗಳಿಗೆ ಮತ್ತು ಮಕ್ಕಳಿಗೆ ಕಲಿಸುವುದಾದರೆ, ಅಭ್ಯಾಸ, exercise,ಗಳ ಸಹಿತ ಇದರ ಪೂರ್ಣ ಪಠ್ಯ kannadakali.com ನಲ್ಲಿ ಸಿಗುತ್ತದೆ.

Sep 28, 202204:35
Ādi śaṅkara viracita Gaṇēśa Pan̄caratna, Benaka Namana : ಬೆನಕ ನಮನ
Aug 31, 202205:25
ಕಾಲ: ಪ್ರಕಿರಿತ ಪ್ರಜ್ಞಾನ - kāla: prakirita prajñāna

ಕಾಲ: ಪ್ರಕಿರಿತ ಪ್ರಜ್ಞಾನ - kāla: prakirita prajñāna

Like it? ......  Subscribe and Share! 

See it  at https://www.youtube.com/channel/UCCON6n4lEgj6NsPqCLZdDSw

Read   at http://kannadakali.com/publications/podcasts

Listen at https://anchor.fm/kannadakali 

ಕಾಲ ಎಂದರೆ ಸದಾ ಉರುಳುತ್ತಿರುವ, ಮುನ್ನಡೆಯುತ್ತಿರುವ, ಮತ್ತು ಕಳೆಯುತ್ತಿರುವ ಸಮಯ; ಎಲ್ಲವನ್ನೂ ಆವರಿಸಿರುವ ವಿಷ್ಣು, ಎಲ್ಲವನ್ನೂ ಮೀರಿರುವ ಎಲ್ಲಕ್ಕೂ ಮೂಲ ಪರಮಾತ್ಮ ಶಿವ, ಅವ್ಯಕ್ತದಿಂದ ಹೊಡಕರಿಸಿದ ಕೃಷ್ಣ, ಮತ್ತು ಕಪ್ಪು ಎನ್ನುವ ಸಾಮಾನ್ಯ ಅರ್ಥಗಳು.  ಶಿವ ಎಂದರೆ ಶುಭ್ರ, ಬಿಳಿ ಕೂಡ.   "ನೀ ಯಾರು ಹೇಳು" ಎಂದು ಅರ್ಜುನ ಕೇಳಿದಾಗ ಕೃಷ್ಣ ಹೇಳಿದ್ದು, " ಕಾಲೋಽಸ್ಮಿ, ಲೋಕಕ್ಷಯಕೃತ್ಪ್ರವೃದ್ಧಃ, ಲೋಕಗಳನಳಿಸುವ ಮಹಾನ್ ಕಾಲ ನಾನು."  ...  

Kaala means Time that is continuously turning, going forth, and getting sent; Vishnu who envelopes and fills everything, Paramatma  Shiva beyond everything, Krishna who manifested from the unmanifest, and black. Shiva means unblemished and white as well.  When Arjuna asks, "Who are you?" , Krishna says, "Kālō̕smi, lōkakṣayakr̥tpravr̥d'dhaḥ, lōkagaḷanaḷisuva mahān kāla nānu" - I am the Kaala, engaged in annihilation of the worlds ...  

0:00 ಮುನ್ನುಡಿ 

1:07 ಕವನ : ಕಾಲ 

3:58 Credits

Aug 17, 202204:14
ಮನ್ವಂತರದ ಮನುಜೆ: ಮೇರಿ ಕ್ಯೂರಿ MarieCurie

ಮನ್ವಂತರದ ಮನುಜೆ: ಮೇರಿ ಕ್ಯೂರಿ MarieCurie

ನೊಬೆಲ್ ಬಿರುದಿಗೇ ಒಂದು ವಿಶಿಷ್ಟ, ವಿಶ್ವವ್ಯಾಪಿ ಪ್ರತಿಷ್ಠೆಯನ್ನು ತಂದು ಕೊಟ್ಟು, ಇತಿಹಾಸದಲ್ಲಿ ಅಮರಳಾಗಿ ನಿಂತ ಮೇರಿ ಕ್ಯೂರಿಯ ಜೀವನ್ಮಹಿಮೆಯು, ವಿಜ್ಞಾನಿಗಳಷ್ಟೇ ಅಲ್ಲ, ಸರ್ವರೂ, ಸರ್ವದಾ ಮೆಲುಕು ಹಾಕಬೇಕಾದಂಥ ಮಹಾರ್ಥಕ ಚರಿತೆ; “ಮಾನವನಾಗಿ ಹುಟ್ಟಿದ್ಮೇಲೆ ಏನೇನ್ ಓದ್ದೀ?” ಎಂದರೆ “ಮೇರಿ ಕ್ಯೂರಿ ಕತೆ ಓದಿದೆ!” ಎಂಬ ಹರ್ಷೋದ್ಗಾರವನ್ನು ಹೊರಪಡಿಸುವ, ಹುರಿಯುಕ್ಕಿಸುವಂಥ ವಿಷಯ.   "ಚಾಲೆಂಜರ್ ಆಳದಿಂದ ಗೌರೀಶಂಕರ ಶಿಖರದ ತುದಿಗೆ" ಅವಳ ಏರಿಕೆಯು ಮಾನವ ಇತಿಹಾಸದಲ್ಲಿ, ಮೀರಿಸಲು ಅಸಾಧ್ಯವಾದ, ಅಸಮಾನ, ಅಪ್ರತಿಮ,  ಸಾಧನೆಯ ಸಂಕೇತ.  

Read   at https://kannadakali.com/publications/podcasts

Watch at https://www.youtube.com/channel/UCCON6n4lEgj6NsPqCLZdDSw

Listen at https://anchor.fm/kannadakali 

Like it ? Subscribe and Share  

ಕನ್ನಡ ಕಲಿ ಬಿತ್ತರಿಕೆ, ಜುಲೈ ೨೨, ೨೦೨೨

ಮನ್ವಂತರದ ಮನುಜೆ: ಮೇರಿ ಕ್ಯೂರಿ

ಬರೆಹ: ಎಸ್. ಜಿ. ಸೀತಾರಾಮ್

ಓದು  : ಶ್ರುತಿ ಅರವಿಂದ

ಚಿತ್ರಗಳು: ವಿಕಿ ಮೀಡಿಯ ಕೃಪೆ

Manvantarada manuje : mēri kyūri

Author: Es. Ji. Sītārām

Read by: Śruti aravinda

0:00 ನುಡಿ ನಮನ 1:06 ತಲೆಬರಹ 1:16 ಮೇರಿಯ ಮಹಿಮೆ 3:18 ಹಿರಿಮೆಯ ಗಣಿ 4:24 ಸಾಧನೆಗಳಿಂದ ಅಮರತ್ವ 5:33 ಜೀವನದಲ್ಲಿ ಬೆಂದಳು - ವಿಜ್ಞಾನಕ್ಕೆ ಅತ್ಮಾಹುತಿ ಕೊಟ್ಟಳು 8:00 ಮನುಕುಲಕ್ಕೆ ಮೇರು ತಾರೆ ಆದಳು 9:34 ಕ್ರೆಡಿಟ್ಸ, ಸಂಪರ್ಕ

Jul 23, 202209:57
ಕಲಕಿದ ನೀರು - kalakida nīru

ಕಲಕಿದ ನೀರು - kalakida nīru

Like it? ......  Subscribe and Share! 

Read   at http://kannadakali.com/publications/podcasts

Watch at https://www.youtube.com/channel/UCCON6n4lEgj6NsPqCLZdDSw

Listen at https://anchor.fm/kannadakali 

ಕಲಕಿದ ನೀರು - kalakida nīru

೧೯೮೬ರಲ್ಲಿ ಬರೆದ ಈ ಕವನ ಅಮೆರಿಕನ್ನಡ ಸಂಚಿಕೆ ೧೫ರಲ್ಲಿ ಪ್ರಕಟವಾಗಿತ್ತು.   ಇಂದಿನ ಕೊರೋನ ಮಾರಿ, ಹಣದ ಉಬ್ಬರ ಅಬ್ಬರ, ಹಸಿವೆಯ ಕೊರೆತ,  ಮಾರುಕಟ್ಟೆಯ ಕುಸಿತ, ವಾಣಿಜ್ಯ ವಸಾಹತುಗಳು, ಕಲಹ ಯುದ್ಧಗಳು ಮತ್ತು  (ಬದುಕಿ ಉಳಿದರೆ) ಅವುಗಳ ಭೀತಿಯಲ್ಲಿ  ಬಾಳು, ಈ ಕವನವನ್ನು ನೆನಪಿಗೆ ತಂದವು, ಮತ್ತೆ. ಕಾಲ ಕಳೆದರೂ, ಮುಂದುವರೆದಂತೆಯೂ, ಪರಿಸ್ಥಿತಿ ಹೊಸತು ಆದರೂ ಭಯ ಭೀತಿಗಳೇ ಮನುಷ್ಯನ ಭವ ಭೂತಿ, ಇರವಿನ ಅರಿವು ಎನ್ನುವ ಸಂಶಯ ಬಾರದೆ ಇರದು ...

Jun 18, 202203:43
ನಾನಾರು - Nānāru : ātmaṣaṭka

ನಾನಾರು - Nānāru : ātmaṣaṭka

ನಾನಾರು - Nānāru

Like it? ......  Subscribe and Share! 

Read at  http://kannadakali.com/publications/podcasts

Listen at https://anchor.fm/kannadakali 

ಆದಿ ಶಂಕರ ವಿರಚಿತ ಆತ್ಮಷಟ್ಕ, ಕನ್ನಡದಲ್ಲಿ Ādi śaṅkara viracita ātmaṣaṭka, in kannaḍa 

आदि शंकर विरचित अत्मषट्क, कन्नड भाषासु  मनो बुद्ढ्यहङ्कर चित्तानि नाहम्

May 15, 202206:12
ಕೆ.ಟಿ. ಗಟ್ಟಿ Ke.Ṭi. Gaṭṭi

ಕೆ.ಟಿ. ಗಟ್ಟಿ Ke.Ṭi. Gaṭṭi

ಕೆ.ಟಿ. ಗಟ್ಟಿ - ಸಾಹಿತಿ, ಭಾಷಾ ತಜ್ಞ, ಪ್ರಾಧ್ಯಾಪಕ, ಕೃಷಿಕ.ಏಕೀಕರಣದ ಚಳುವಳಿ ಅವರನ್ನು ಸೆಳೆದಿತ್ತು. ಬರವಣಿಗೆ ಚಿಗುರಿತು, ಕರ್ನಾಟಕ ಹುಟ್ಟಿತು, ಆದರೆ ಕಾಸರಗೋಡು ಕೇರಳದಲ್ಲೇ ಉಳಿಯಿತು. ಕನಸು ನನಸಾಗಲಿಲ್ಲ.  ಗಟ್ಟಿ ಅವರ ಮೊತ್ತ ಮೊದಲ ಕಾದಂಬರಿ 'ಶಬ್ದಗಳು' ೧೯೭೬ರಲ್ಲಿ ಸುಧಾ ವಾರ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತು. ಇವರ ೧೪ ಕಾದಂಬರಿಗಳು ೨೮ ವರ್ಷಗಳ ಕಾಲ ಅವ್ಯಾಹತವಾಗಿ ಸುಧಾ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಹರಿದವು.  ಒಬ್ಬನೇ ಲೇಖಕನ ಇಷ್ಟೊಂದು ಕಾದಂಬರಿಗಳು ಇಷ್ಟೊಂದು ವರ್ಷಗಳ ಕಾಲ ಧಾರಾವಾಹಿಯಾಗಿ ಹರಿದುದು ... 

Read   at https://kannadakali.com/publications/podcasts

Watch at https://www.youtube.com/channel/UCCON6n4lEgj6NsPqCLZdDSw

Listen at https://anchor.fm/kannadakali 

0:17 ಹುಟ್ಟು 

1:09 ಶಿಕ್ಷಕ  

1:44 ಸಾಹಿತಿ  

3:12 ಭಾಷಾ ತಜ್ಞ  

3:40 ಕೃಷಿಕ 

4:04 ಪ್ರಶಸ್ತಿ-ಗೌರವ 

4:40 ಕೆಲವು ಗಟ್ಟಿ ಕೃತಿಗಳು  

4:26 ಮುಚ್ಚಳಿಕೆ

May 02, 202205:50
ಉಗಿಯುವುದು ಅತಿ ಸಹಜ - ಚೆನ್ನುಡಿ : Ugiyuvudu ati sahaja - cennuḍi

ಉಗಿಯುವುದು ಅತಿ ಸಹಜ - ಚೆನ್ನುಡಿ : Ugiyuvudu ati sahaja - cennuḍi

Like it? Subscribe!

                            ಚೆನ್ನುಡಿ 

ಉಗಿಯುವುದತಿ ಸಹಜ, ಉಗಿಸಿಕೊಳ್ಳುವುದಸಹ್ಯ;  

ಉಗಿದು ಮಾರುಗಿಸಿಕೊಳ್ಳುವುದು ಸಾಮಾನ್ಯ.  

ಉಗಿಯದೆಯುಗಿಸಿಕೊಳ್ಳದೆಯೆ ಬಾಳುವಾ ಕಲೆಯ  

ಜಗಿಜಗಿದು ನುಂಗಿ ಅರಗಿಸಿಕೊ ತಮ್ಮ.  

Read   at https://kannadakali.com/publications/podcasts

Watch at https://www.youtube.com/channel/UCCON6n4lEgj6NsPqCLZdDSw

Listen at https://anchor.fm/kannadakali

Apr 15, 202201:04
ಯುಗಾದಿಯ ಚೇತನ Bendre

ಯುಗಾದಿಯ ಚೇತನ Bendre

Like it? Subscribe! 

ರಸವೆ ಜನನ, ವಿರಸ ಮರಣ, ಸಮರಸವೆ ಜೀವನ’ ಇದು ಜೀವನದ ಕಷ್ಟ-ಸುಖಗಳನ್ನು ಎಲ್ಲ ಸ್ತರಗಳಲ್ಲೂ ಅನುಭವಿಸಿ, ಜೀವನದ ಕುದಿಯಲ್ಲಿ ಬೆಂದ ಬೇಂದ್ರೆ ತತ್ವ. ’ಬೆಂದರೆ ಬೇಂದ್ರೆ’ ಎನ್ನುವುದು ಈಗ ಕನ್ನಡ ಪಡೆನುಡಿ.  ಅದಕ್ಕೆ, ಅವರು ಕಾಲ ಕಳೆದಂತೆ ಇನ್ನೂ ರೆಲೆವಂಟ್ ಆಗುತ್ತ ಹೋಗುತ್ತಾರೆ; ಬೇಂದ್ರೆ ಅಜ್ಜ ಬಹಳ ಹತ್ತಿರವಾಗುತ್ತಾನೆ. ಬಂಡಾಯದ ಬಿಸಿ ಆರಿದರೂ, ನವ್ಯದ ಪ್ರತಿಮೆಗಳು ಮಾಸಿದರೂ ಬೇಂದ್ರೆ ಬಾಳಗೀತೆ ಮತ್ತೆ ಮತ್ತೆ ನವ ಉದಯವನ್ನು ತಳೆಯುತ್ತದೆ. ಒಮ್ಮೆ ಭಾವಗೀತೆಯಾಗಿ ಮನ ಸೂರೆಗೊಳ್ಳುತ್ತದೆ; ಇನ್ನೊಮ್ಮೆ ಭಕ್ತಿಗೀತೆಯಾಗಿ ಬೆಳಕು ತೋರುತ್ತದೆ. ಮತ್ತೊಮ್ಮೆ ಜಾನಪದವಾಗಿ ಮಣ್ಣಿನ ವಾಸನೆ ಬೀರುತ್ತದೆ. ಕೆಲವೊಮ್ಮೆ ’ಆನ ತಾನನ’ ಎಂದು ಸುಲಭವಾಗಿ ಕಂಡರೂ, ಮಾಂತ್ರಿಕನ ಮುಷ್ಟಿಯಲ್ಲಿನ ಬಟ್ಟೆಯಂತೆ ಎಳೆದಷ್ಟೂ ಉದ್ದವಾಗಿ ಹರಿಯುತ್ತದೆ. ಇದೆ ಈ ಗಾರುಡಿಗನ ಗಮ್ಮತ್ತು. more ....  

Read   at https://kannadakali.com/publications/podcasts

Watch at https://www.youtube.com/channel/UCCON6n4lEgj6NsPqCLZdDSw

Listen at https://anchor.fm/kannadakali

Mar 31, 202205:38
ಕಲಿಯುಗದ ಕಲಿಯುಗನು - ಚುಟುಕು KaliYugadaKaliyuga

ಕಲಿಯುಗದ ಕಲಿಯುಗನು - ಚುಟುಕು KaliYugadaKaliyuga

Like it? Subscribe!

Read   at https://kannadakali.com/publications/podcasts

Watch at https://www.youtube.com/channel/UCCON6n4lEgj6NsPqCLZdDSw

Listen at https://anchor.fm/kannadakali

Mar 14, 202201:32
ಗೀತಾ ಪ್ರವಿಧಾನ: ಭಾಗ ೬/೬ ಪ್ರಶ್ನೋತ್ತರ, ಚರ್ಚೆ, ಹರಟೆ Gītā pravidhāna:Part 6/6 Q&A, Chat

ಗೀತಾ ಪ್ರವಿಧಾನ: ಭಾಗ ೬/೬ ಪ್ರಶ್ನೋತ್ತರ, ಚರ್ಚೆ, ಹರಟೆ Gītā pravidhāna:Part 6/6 Q&A, Chat

Like it...? Subscribe!

Watch at  https://www.youtube.com/playlist?list=PL691xAmMBA-Ep6ct8hX0DYybuzXFU_j1c

Listen at  https://anchor.fm/kannadakali

ಭಗವದ್ಗೀತೆಯ ಸಾರ ಸಂದೇಶದ ಜೊತೆಗೆ, ಭಗವದ್ಗೀತೆಯನ್ನು ವೈಧಾನಿಕ ದೃಷ್ಟಿಕೋನದಿಂದ ಅವಲೋಕಿಸುವ  ಪ್ರಯತ್ನ.

(ಕರ್ನಾಟಕ ಸಾಂಸ್ಕೃತಿಕ ಸಂಘ,  ದಕ್ಷಿಣ ಕ್ಯಾಲಿಫೋರ್ನಿಯದ "ಕೂಡಿ ಕಲಿ ಕೂಡಿ ನಲಿ"   ಸರಣಿಯಲ್ಲಿ,  ಮಂಗಳವಾರ, ಜನೆವರಿ,  ೧೯, ೨೦೨೧ ರಂದು ನಡೆದ ಕಾರ್ಯಕ್ರಮ. A program in the series Kudi Kali Kudi Nali of Karnataka Cultural Association of Southern California)

ಆರು ಭಾಗಗಳಲ್ಲಿ In six parts:

ಭಾಗ ೧/೬ ಸಾರ, ಸಂದೇಶ  Part 1/6 Essence, Message  https://youtu.be/FczvmeHjAoA

ಭಾಗ ೨/೬  ವಿಧಾನ ಮತ್ತು ಗೀತೆಯ ಸಮಸ್ಯೆ Part 2/6 Method, Problem of Gita https://youtu.be/oPDQhANg-B0

ಭಾಗ ೩/೬  ಮನ ಒಲಿಸುವ ಕಲೆ Part 3/6 Art of Persuasion https://youtu.be/ys9-5Nm1Fng

ಭಾಗ ೪/೬  ಕಾಲ, ಅವಕಾಶ Part 4/6 Time, Space https://youtu.be/21OGv5xfikY

ಭಾಗ ೫/೬  ಪಾರ್ಥನ ಪ್ರಾರ್ಥನೆ, ಭಕ್ತಿ ಸಾಧನ  Part 5/6 Arjuna's Prayer, Devotion as Instrument https://youtu.be/aFiqgy9R9Ms

ಭಾಗ ೬/೬  ಪ್ರಶ್ನೋತ್ತರ, ಚರ್ಚೆ, ಹರಟೆ Part 6/6 Q&A, Chat https://youtu.be/7EPDV4onhPM

Feb 28, 202222:11
ಗೀತಾ ಪ್ರವಿಧಾನ: ಭಾಗ ೫/೬ ಪಾರ್ಥನ ಪ್ರಾರ್ಥನೆ, ಭಕ್ತಿ ಸಾಧನ Gītā Pravidhāna: Part 5/6 Prayer, Devotion

ಗೀತಾ ಪ್ರವಿಧಾನ: ಭಾಗ ೫/೬ ಪಾರ್ಥನ ಪ್ರಾರ್ಥನೆ, ಭಕ್ತಿ ಸಾಧನ Gītā Pravidhāna: Part 5/6 Prayer, Devotion

Like it...? Subscribe!

Watch at  https://www.youtube.com/playlist?list=PL691xAmMBA-Ep6ct8hX0DYybuzXFU_j1c

Listen at  https://anchor.fm/kannadakali

ಭಗವದ್ಗೀತೆಯ ಸಾರ ಸಂದೇಶದ ಜೊತೆಗೆ, ಭಗವದ್ಗೀತೆಯನ್ನು ವೈಧಾನಿಕ ದೃಷ್ಟಿಕೋನದಿಂದ ಅವಲೋಕಿಸುವ  ಪ್ರಯತ್ನ.

(ಕರ್ನಾಟಕ ಸಾಂಸ್ಕೃತಿಕ ಸಂಘ,  ದಕ್ಷಿಣ ಕ್ಯಾಲಿಫೋರ್ನಿಯದ "ಕೂಡಿ ಕಲಿ ಕೂಡಿ ನಲಿ"   ಸರಣಿಯಲ್ಲಿ,  ಮಂಗಳವಾರ, ಜನೆವರಿ,  ೧೯, ೨೦೨೧ ರಂದು ನಡೆದ ಕಾರ್ಯಕ್ರಮ. A program in the series Kudi Kali Kudi Nali of Karnataka Cultural Association of Southern California)

ಆರು ಭಾಗಗಳಲ್ಲಿ In six parts:

ಭಾಗ ೧/೬ ಸಾರ, ಸಂದೇಶ  Part 1/6 Essence, Message  https://youtu.be/FczvmeHjAoA

ಭಾಗ ೨/೬  ವಿಧಾನ ಮತ್ತು ಗೀತೆಯ ಸಮಸ್ಯೆ Part 2/6 Method, Problem of Gita https://youtu.be/oPDQhANg-B0

ಭಾಗ ೩/೬  ಮನ ಒಲಿಸುವ ಕಲೆ Part 3/6 Art of Persuasion https://youtu.be/ys9-5Nm1Fng

ಭಾಗ ೪/೬  ಕಾಲ, ಅವಕಾಶ Part 4/6 Time, Space https://youtu.be/21OGv5xfikY

ಭಾಗ ೫/೬  ಪಾರ್ಥನ ಪ್ರಾರ್ಥನೆ, ಭಕ್ತಿ ಸಾಧನ  Part 5/6 Arjuna's Prayer, Devotion as Instrument https://youtu.be/aFiqgy9R9Ms

ಭಾಗ ೬/೬  ಪ್ರಶ್ನೋತ್ತರ, ಚರ್ಚೆ, ಹರಟೆ Part 6/6 Q&A, Chat https://youtu.be/7EPDV4onhPM

Feb 28, 202209:30
ಗೀತಾ ಪ್ರವಿಧಾನ: ಭಾಗ ೪/೬ ಕಾಲ, ಅವಕಾಶ Gītā pravidhāna: Part 4/6 Time, Space

ಗೀತಾ ಪ್ರವಿಧಾನ: ಭಾಗ ೪/೬ ಕಾಲ, ಅವಕಾಶ Gītā pravidhāna: Part 4/6 Time, Space

Like it...? Subscribe!

Watch at  https://www.youtube.com/playlist?list=PL691xAmMBA-Ep6ct8hX0DYybuzXFU_j1c

Listen at  https://anchor.fm/kannadakali

ಭಗವದ್ಗೀತೆಯ ಸಾರ ಸಂದೇಶದ ಜೊತೆಗೆ, ಭಗವದ್ಗೀತೆಯನ್ನು ವೈಧಾನಿಕ ದೃಷ್ಟಿಕೋನದಿಂದ ಅವಲೋಕಿಸುವ  ಪ್ರಯತ್ನ.

(ಕರ್ನಾಟಕ ಸಾಂಸ್ಕೃತಿಕ ಸಂಘ,  ದಕ್ಷಿಣ ಕ್ಯಾಲಿಫೋರ್ನಿಯದ "ಕೂಡಿ ಕಲಿ ಕೂಡಿ ನಲಿ"   ಸರಣಿಯಲ್ಲಿ,  ಮಂಗಳವಾರ, ಜನೆವರಿ,  ೧೯, ೨೦೨೧ ರಂದು ನಡೆದ ಕಾರ್ಯಕ್ರಮ. A program in the series Kudi Kali Kudi Nali of Karnataka Cultural Association of Southern California)

ಆರು ಭಾಗಗಳಲ್ಲಿ In six parts:

ಭಾಗ ೧/೬ ಸಾರ, ಸಂದೇಶ  Part 1/6 Essence, Message  https://youtu.be/FczvmeHjAoA

ಭಾಗ ೨/೬  ವಿಧಾನ ಮತ್ತು ಗೀತೆಯ ಸಮಸ್ಯೆ Part 2/6 Method, Problem of Gita https://youtu.be/oPDQhANg-B0

ಭಾಗ ೩/೬  ಮನ ಒಲಿಸುವ ಕಲೆ Part 3/6 Art of Persuasion https://youtu.be/ys9-5Nm1Fng

ಭಾಗ ೪/೬  ಕಾಲ, ಅವಕಾಶ Part 4/6 Time, Space https://youtu.be/21OGv5xfikY

ಭಾಗ ೫/೬  ಪಾರ್ಥನ ಪ್ರಾರ್ಥನೆ, ಭಕ್ತಿ ಸಾಧನ  Part 5/6 Arjuna's Prayer, Devotion as Instrument https://youtu.be/aFiqgy9R9Ms

ಭಾಗ ೬/೬  ಪ್ರಶ್ನೋತ್ತರ, ಚರ್ಚೆ, ಹರಟೆ Part 6/6 Q&A, Chat https://youtu.be/7EPDV4onhPM

Feb 28, 202209:36
ಗೀತಾ ಪ್ರವಿಧಾನ: ಭಾಗ ೩/೬ ಮನ ಒಲಿಸುವ ಕಲೆ Gītā pravidhāna: Part 3/6 Art of Persuasion

ಗೀತಾ ಪ್ರವಿಧಾನ: ಭಾಗ ೩/೬ ಮನ ಒಲಿಸುವ ಕಲೆ Gītā pravidhāna: Part 3/6 Art of Persuasion

Like it...? Subscribe!

Watch at  https://www.youtube.com/playlist?list=PL691xAmMBA-Ep6ct8hX0DYybuzXFU_j1c

Listen at  https://anchor.fm/kannadakali

ಭಗವದ್ಗೀತೆಯ ಸಾರ ಸಂದೇಶದ ಜೊತೆಗೆ, ಭಗವದ್ಗೀತೆಯನ್ನು ವೈಧಾನಿಕ ದೃಷ್ಟಿಕೋನದಿಂದ ಅವಲೋಕಿಸುವ  ಪ್ರಯತ್ನ.

(ಕರ್ನಾಟಕ ಸಾಂಸ್ಕೃತಿಕ ಸಂಘ,  ದಕ್ಷಿಣ ಕ್ಯಾಲಿಫೋರ್ನಿಯದ "ಕೂಡಿ ಕಲಿ ಕೂಡಿ ನಲಿ"   ಸರಣಿಯಲ್ಲಿ,  ಮಂಗಳವಾರ, ಜನೆವರಿ,  ೧೯, ೨೦೨೧ ರಂದು ನಡೆದ ಕಾರ್ಯಕ್ರಮ. A program in the series Kudi Kali Kudi Nali of Karnataka Cultural Association of Southern California)

ಆರು ಭಾಗಗಳಲ್ಲಿ In six parts:

ಭಾಗ ೧/೬ ಸಾರ, ಸಂದೇಶ  Part 1/6 Essence, Message  https://youtu.be/FczvmeHjAoA

ಭಾಗ ೨/೬  ವಿಧಾನ ಮತ್ತು ಗೀತೆಯ ಸಮಸ್ಯೆ Part 2/6 Method, Problem of Gita https://youtu.be/oPDQhANg-B0

ಭಾಗ ೩/೬  ಮನ ಒಲಿಸುವ ಕಲೆ Part 3/6 Art of Persuasion https://youtu.be/ys9-5Nm1Fng

ಭಾಗ ೪/೬  ಕಾಲ, ಅವಕಾಶ Part 4/6 Time, Space https://youtu.be/21OGv5xfikY

ಭಾಗ ೫/೬  ಪಾರ್ಥನ ಪ್ರಾರ್ಥನೆ, ಭಕ್ತಿ ಸಾಧನ  Part 5/6 Arjuna's Prayer, Devotion as Instrument https://youtu.be/aFiqgy9R9Ms

ಭಾಗ ೬/೬  ಪ್ರಶ್ನೋತ್ತರ, ಚರ್ಚೆ, ಹರಟೆ Part 6/6 Q&A, Chat https://youtu.be/7EPDV4onhPM

Feb 28, 202220:00
ಗೀತಾ ಪ್ರವಿಧಾನ: ಭಾಗ ೨/೬ ವಿಧಾನ ಮತ್ತು ಗೀತೆಯ ಸಮಸ್ಯೆ Gītā pravidhāna: Part 2/6 Method & Problem of Gita

ಗೀತಾ ಪ್ರವಿಧಾನ: ಭಾಗ ೨/೬ ವಿಧಾನ ಮತ್ತು ಗೀತೆಯ ಸಮಸ್ಯೆ Gītā pravidhāna: Part 2/6 Method & Problem of Gita

Like it...?  Subscribe!

Watch at  https://www.youtube.com/playlist?list=PL691xAmMBA-Ep6ct8hX0DYybuzXFU_j1c

Listen at  https://anchor.fm/kannadakali

ಭಗವದ್ಗೀತೆಯ ಸಾರ ಸಂದೇಶದ ಜೊತೆಗೆ, ಭಗವದ್ಗೀತೆಯನ್ನು ವೈಧಾನಿಕ ದೃಷ್ಟಿಕೋನದಿಂದ ಅವಲೋಕಿಸುವ  ಪ್ರಯತ್ನ.

(ಕರ್ನಾಟಕ ಸಾಂಸ್ಕೃತಿಕ ಸಂಘ,  ದಕ್ಷಿಣ ಕ್ಯಾಲಿಫೋರ್ನಿಯದ "ಕೂಡಿ ಕಲಿ ಕೂಡಿ ನಲಿ"   ಸರಣಿಯಲ್ಲಿ,  ಮಂಗಳವಾರ, ಜನೆವರಿ,  ೧೯, ೨೦೨೧ ರಂದು ನಡೆದ ಕಾರ್ಯಕ್ರಮ. A program in the series Kudi Kali Kudi Nali of Karnataka Cultural Association of Southern California)

ಆರು ಭಾಗಗಳಲ್ಲಿ In six parts:

ಭಾಗ ೧/೬ ಸಾರ, ಸಂದೇಶ  Part 1/6 Essence, Message  https://youtu.be/FczvmeHjAoA

ಭಾಗ ೨/೬  ವಿಧಾನ ಮತ್ತು ಗೀತೆಯ ಸಮಸ್ಯೆ Part 2/6 Method, Problem of Gita https://youtu.be/oPDQhANg-B0

ಭಾಗ ೩/೬  ಮನ ಒಲಿಸುವ ಕಲೆ Part 3/6 Art of Persuasion https://youtu.be/ys9-5Nm1Fng

ಭಾಗ ೪/೬  ಕಾಲ, ಅವಕಾಶ Part 4/6 Time, Space https://youtu.be/21OGv5xfikY

ಭಾಗ ೫/೬  ಪಾರ್ಥನ ಪ್ರಾರ್ಥನೆ, ಭಕ್ತಿ ಸಾಧನ  Part 5/6 Arjuna's Prayer, Devotion as Instrument https://youtu.be/aFiqgy9R9Ms

ಭಾಗ ೬/೬  ಪ್ರಶ್ನೋತ್ತರ, ಚರ್ಚೆ, ಹರಟೆ Part 6/6 Q&A, Chat https://youtu.be/7EPDV4onhPM

Feb 28, 202208:30
ಗೀತಾ ಪ್ರವಿಧಾನ ಭಾಗ ೧/೬ ಸಾರ, ಸಂದೇಶ Gītā pravidhāna: Part 1/6 sāra, sandēśa

ಗೀತಾ ಪ್ರವಿಧಾನ ಭಾಗ ೧/೬ ಸಾರ, ಸಂದೇಶ Gītā pravidhāna: Part 1/6 sāra, sandēśa

Like it...? Subscribe!

Watch at  https://www.youtube.com/playlist?list=PL691xAmMBA-Ep6ct8hX0DYybuzXFU_j1c

Listen at  https://anchor.fm/kannadakali

ಭಗವದ್ಗೀತೆಯ ಸಾರ ಸಂದೇಶದ ಜೊತೆಗೆ, ಭಗವದ್ಗೀತೆಯನ್ನು ವೈಧಾನಿಕ ದೃಷ್ಟಿಕೋನದಿಂದ ಅವಲೋಕಿಸುವ  ಪ್ರಯತ್ನ.

(ಕರ್ನಾಟಕ ಸಾಂಸ್ಕೃತಿಕ ಸಂಘ,  ದಕ್ಷಿಣ ಕ್ಯಾಲಿಫೋರ್ನಿಯದ "ಕೂಡಿ ಕಲಿ ಕೂಡಿ ನಲಿ"   ಸರಣಿಯಲ್ಲಿ,  ಮಂಗಳವಾರ, ಜನೆವರಿ,  ೧೯, ೨೦೨೧ ರಂದು ನಡೆದ ಕಾರ್ಯಕ್ರಮ. A program in the series Kudi Kali Kudi Nali of Karnataka Cultural Association of Southern California)

ಆರು ಭಾಗಗಳಲ್ಲಿ In six parts:

ಭಾಗ ೧/೬ ಸಾರ, ಸಂದೇಶ  Part 1/6 Essence, Message  https://youtu.be/FczvmeHjAoA

ಭಾಗ ೨/೬  ವಿಧಾನ ಮತ್ತು ಗೀತೆಯ ಸಮಸ್ಯೆ Part 2/6 Method, Problem of Gita https://youtu.be/oPDQhANg-B0

ಭಾಗ ೩/೬  ಮನ ಒಲಿಸುವ ಕಲೆ Part 3/6 Art of Persuasion https://youtu.be/ys9-5Nm1Fng

ಭಾಗ ೪/೬  ಕಾಲ, ಅವಕಾಶ Part 4/6 Time, Space https://youtu.be/21OGv5xfikY

ಭಾಗ ೫/೬  ಪಾರ್ಥನ ಪ್ರಾರ್ಥನೆ, ಭಕ್ತಿ ಸಾಧನ  Part 5/6 Arjuna's Prayer, Devotion as Instrument https://youtu.be/aFiqgy9R9Ms

ಭಾಗ ೬/೬  ಪ್ರಶ್ನೋತ್ತರ, ಚರ್ಚೆ, ಹರಟೆ Part 6/6 Q&A, Chat https://youtu.be/7EPDV4onhPM

Feb 28, 202214:27
ಮತ್ತೆ ಅದೆ - ಪಾಬ್ಲೊ ನೆರುದಾರ ಒಂದು ಕವನ A Poem Pablo Neruda

ಮತ್ತೆ ಅದೆ - ಪಾಬ್ಲೊ ನೆರುದಾರ ಒಂದು ಕವನ A Poem Pablo Neruda

Like it? Subscribe!  

Read    at  https://kannadakali.com/publications/podcasts

Watch at  https://www.youtube.com/channel/UCCON6n4lEgj6NsPqCLZdDSw

Listen at https://anchor.fm/kannadakali

Feb 14, 202202:33