Skip to main content
UV Listen

UV Listen

By UVLISTEN

Recharge: Kick start your day by tuning in to "Recharge” Podcast by Mr. Badekkila Pradeep.

Relax: Stay relaxed with joy, music, comfort with the podcast "Relax" by Mr. Badekkila Pradeep.
Available on
Apple Podcasts Logo
Google Podcasts Logo
Spotify Logo
Currently playing episode

S1Ep17 Recharge - Sadhaneya Padma - Shyam Sundar Paliwal ಸಾಧನೆಯ ಪದ್ಮ - ಶ್ಯಾಮ್‌ ಸುಂದರ್‌ ಪಾಲಿವಾಲ್‌

UV ListenDec 05, 2021

00:00
20:18
S1 EP 104 ದಿಕ್ಕುಗಳು | Direction

S1 EP 104 ದಿಕ್ಕುಗಳು | Direction

ಹಿಂದೆ ಕಣ್ಣಿಗೆ ಕಾಣುವ ಸೂರ್ಯನ ಚಲನೆಯ ಆಧಾರದ ಮೇಲೆ ದಿಕ್ಕುಗಳನ್ನು ಮನುಷ್ಯ ಗುರುತಿಸುತ್ತಿದ್ದ. ಪ್ರತಿದಿನ ಬೆಳಿಗ್ಗೆ ಸೂರ್ಯ ಮೂಡುವ ದಿಕ್ಕಿಗೆ ಒಂದು ಹೆಸರಿಟ್ಟ, ಮುಳುಗುವ ದಿಕ್ಕಿಗೆ ಇನ್ನೊಂದು ಹೀಗೆ ದಿಕ್ಕುಗಳನ್ನು ಹೆಸರಿಸುತ್ತಾ ಬಂದ ಮನುಷ್ಯನು ದಿಕ್ಕುಗಳನ್ನು ಗುರುತಿಸಿದ್ದಾನೆ, ಇದೇ ದಿಕ್ಕುಗಳ ಬಗ್ಗೆ ನಾವು ಇಂದಿನ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ. ಸಂಖ್ಯೆಗಳಿಗೂ ನಮ್ಮ ಜೀವನಶೈಲಿಗೂ ಇರುವ ಅವಿನಾಭಾವ ಸಂಬಂಧಗಳನ್ನು ಅವಲೋಕಿಸುತ್ತಾ ಸಾಗೋಣ.

ಒಂದೋ ನವರಾತ್ರಿಯ ಮಾತಾದರೆ, ದಶಕಂಠನೂ ನಮ್ಮ ಸಂಸ್ಕೃತಿಯ ಭಾಗವೇ. ಚತುರ್ಭುಜದ ಮಹತ್ವವನ್ನೂ ಕೇಳಿದವರೇ, ನಾವು ಸಪ್ತಸಾಗರವನ್ನೂ ನೋಡಿದವರೇ.

ಇವುಗಳಲ್ಲಿ ಕೆಲವೊಂದು, ತಿಳಿದ, ತಿಳಿಯದ ಸಂಖ್ಯೆಗಳ ಜೊತೆಗೆ ಅವಿನಾಭಾವ ಸಂಬಂಧ ಇರುವ ಭಾರತೀಯ ಪರಂಪರೆಯನ್ನುಅವಲೋಕಿಸೋಣ. ಇಂದಿನ ಸಂಚಿಕೆ ಶುರು ಮಾಡೋಣ.

ಅನಾದಿ ಕಾಲದಿಂದಲೂ ಮನುಷ್ಯನ ತಿರುಗಾಟ, ಸಂಸ್ಕೃತಿ ಹಾಗೂ ಭಕ್ತಿಯ ನಂಬಿಕೆಗಳಿಗೆ ದಿಕ್ಕುಗಳು ಅವಿಭಾಜ್ಯ ಅಂಗವಾಗಿವೆ ಅನ್ನೋದನ್ನ ನಾವು ನಂಬಿಕೊಂಡು ಬಂದಿದ್ದೇವೆ. ಅಲ್ಲದೇ ಅದು ನಿಜವೂ ಕೂಡ. ನಾವು ಬದುಕ್ತಾ ಇರೋ ಯುಗದಲ್ಲಿ ಇತ್ತೀಚೆಗೆ ನಾವು ರಾಕೆಟ್, ಉಪಗ್ರಹ ಎಲ್ಲ ಬಳಸಿ ಉತ್ತರ ದಿಕ್ಕಿಗೆ ಭೂಮಿಯ ಉತ್ತರ ಧ್ರುವ, ದಕ್ಷಿಣ ದಿಕ್ಕಿಗೆ ದಕ್ಷಿಣ ಧ್ರುವ ಎಂಬುದನೆಲ್ಲಾ ತಿಳಿದಿದ್ದೇವೆ.

ಅದಕ್ಕೂ ಮುಂಚೆ ಇದರ ಬಗ್ಗೆ ಮನುಷ್ಯನಿಗೆ ಅಷ್ಟೊಂದು ಜ್ಞಾನ ಇರಲಿಲ್ಲ. ಭೂಮಿಯ ಮೇಲಿಂದ ಕಣ್ಣಿಗೆ ಕಾಣುತ್ತಿದ್ದುದು ಸೂರ್ಯ, ಚಂದ್ರ, ನಕ್ಷತ್ರಗಳು ಮಾತ್ರ. ಕೆಲವರು ಭೂಮಿ ಚಪ್ಪಟೆ ಇದೆಯೆಂದು ಅದರ ತೀರಾ ಅಂಚಿನ ಹೊರಗೆ ಹೋದರೆ ಅಂತರಿಕ್ಷಕ್ಕೆ ಎಂದು ಬಿದ್ದು ಹೋಗುತ್ತೇವೆ ಅಂತೆಲ್ಲಾ ನಂಬಿದ್ದರು.

ಹಿಂದೆ ಕಣ್ಣಿಗೆ ಕಾಣುವ ಸೂರ್ಯನ ಚಲನೆಯ ಆಧಾರದ ಮೇಲೆ ದಿಕ್ಕುಗಳನ್ನು ಮನುಷ್ಯ ಗುರುತಿಸುತ್ತಿದ್ದ. ಪ್ರತಿದಿನ ಬೆಳಿಗ್ಗೆ ಸೂರ್ಯ ಮೂಡುವ ದಿಕ್ಕಿಗೆ ಒಂದು ಹೆಸರಿಟ್ಟ, ಮುಳುಗುವ ದಿಕ್ಕಿಗೆ ಇನ್ನೊಂದು. ಅವೆರಡರ ನಡುವಿನ ದಿಕ್ಕುಗಳಿಗೆ ಇನ್ನೆರಡು ಹೆಸರನ್ನ ಇಡ್ತಾನೆ. Mostly ಇದೇ ರೀತಿ ಅನ್ಸತ್ತೆ, ಒಂದೊಂದು ದಿಕ್ಕುಗಳಿಗೆ ಒಂದೊಂದು ಹೆಸರು ಬಂದಿರೋದು.

ಗುಡ್ಡ ಕಾಡುಗಳಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವಾಗ ಜಾಗದ ಗುರುತು, ಸೂರ್ಯನ ಸ್ಥಾನ ಹೀಗೆ ಬೇರೆ ಬೇರೆ ವಿಚಾರಗಳ ಆಧಾರದ ಮೇಲೆ ಹೋಗುತ್ತಾ ಇದ್ದನೆನೋ. ಹಾಗಾದ್ರೆ ನಾವು ಈಗ ಹೆಸರಿಸೋ ದಿಕ್ಕುಗಳು ಯಾವುದು ಅದರ ಸುತ್ತಲ ವಿಚಾರಗಳನ್ನ ತಿಳಿದುಕೊಳ್ಳೋಣ.

ಸೂರ್ಯ ಮೂಡೋ ದಿಕ್ಕು, ಅಂದರೆ ಉದಯ ಆಗುವ ದಿಕ್ಕು ಮೂಡಣ ಅಥವಾ ಮೂಡಲ ಅಂತ ಕರ್ದ ಅರ್ಥಾತ್ ನಾರ್ಮಲ್‌ ಆಗಿ ಚಾಲ್ತಿಯಲ್ಲಿರೋ ಹೆಸರು ಪೂರ್ವ. ಸೂರ್ಯ ಮುಳುಗುವ ದಿಕ್ಕನ್ನು ಪಡುವಣ ಅಥವಾ ಪಡುವಲ ಅಂದ್ರೆ ಪಶ್ಚಿಮ ಅಂತ ಗುರುತಿಸ್ತಾನೆ. ಉಳಿದ ಎರಡು ಲಂಬವಾಗಿರುವ ದಿಕ್ಕುಗಳು ಉತ್ತರ ಅಥವಾ ಬಡಗಣ ಹಾಗೇನೆ ದಕ್ಷಿಣ ತೆಂಕಣ ಅಂತ ಕರೆಯೋದಕ್ಕೆ ಶುರು ಮಾಡ್ತಾನೆ. ಮುಖ್ಯವಾಗಿ ನಾಲ್ಕು ದಿಕ್ಕುಗಳು.

ವಾಸ್ತವಿಕವಾಗಿ ದಿಕ್ಕುಗಳನ್ನ ಭೂಮಿ ಹಾಗೂ ಅದರ ಚಲನೆಯ ಆಧಾರದ ಮೇಲೆ ಗುರುತಿಸಲಾಗತ್ತೆ ಅನ್ನೋದನ್ನ ನಾವು ಕೇಳಿದ್ದೇವೆ. ನಾವು ಭೂಮಿಯ ಮೇಲೆ ಎಲ್ಲೇ ನಿಂತರೂ ಉತ್ತರ ದಿಕ್ಕು ಅಂದ್ರೆ ಭೂಮಿಯ ಉತ್ತರ ಧ್ರುವದ ಕಡೆಗೆ ಹಾಗೇ ದಕ್ಷಿಣ ದಿಕ್ಕು ಭೂಮಿಯ ದಕ್ಷಿಣ ಧ್ರುವದ ಕಡೆಗೆ ಅಂತರ್ಥ. ಉತ್ತರ ಹಾಗೂ ದಕ್ಷಿಣ ದಿಕ್ಕು ಭೂಮಿಯ ಉತ್ತರ ಧ್ರುವ ಹಾಗೂ ದಕ್ಷಿಣ ಧ್ರುವ ವನ್ನು ತೋರಿಸತ್ತೆ.

ಭೂಮಿಯು ಪಶ್ಚಿಮದಿಂದ ಪೂರ್ವದ ಕಡೆಗೆ ತಿರುಗತ್ತೆ. ಪೂರ್ವ ಹಾಗು ಪಶ್ಚಿಮವನ್ನು ಗುರುತಿಸುವ ಇನ್ನೊಂದು ಸುಲಭ ವಿಧಾನವೆಂದರೆ ಸೂರ್ಯ ಉದಯಿಸುವ ದಿಕ್ಕು ಪೂರ್ವವಾದರೆ ಸೂರ್ಯ ಮುಳುಗುವ ಅಂದ್ರೆ ಸೂರ್ಯಾಸ್ತ ಆಗೋ ದಿಕ್ಕು ಪಶ್ಚಿಮ ಆಗಿರುತ್ತದೆ. ಈ 4 ದಿಕ್ಕುಗಳ ನಡುವಿನ ದಿಕ್ಕುಗಳನ್ನು ಅಂತರ್ ದಿಕ್ಕುಗಳು ಅಂತ ಕರೆಯಲಾಗತ್ತೆ. ಅದನ್ನ ವಾಯುವ್ಯ, ಈಶಾನ್ಯ, ಆಗ್ನೇಯ ಮತ್ತು ನೈಋತ್ಯ ಅಂತ ಕರಿತಿವಿ.

ಹಾಗಾದ್ರೆ ಈ ದಿಕ್ಕುಗಳನ್ನ ನಾವು ಯಾವುದ್ರಲ್ಲಿ ಕಂಡು ಹಿಡಿಬಹುದು, ಅದಕ್ಕೊಂದು ಸಾಧನ ಬೇಕೆ ಬೇಕು ಅದನ್ನ ನಾವು ಕಂಪಾಸ್ ಅಂತ ಹೇಳ್ತೀವಿ.

ಭೂಮಿಯು ದೊಡ್ಡ ಒಂದು ಮ್ಯಾಗ್‌ನೆಟ್ ತರಹ ಕೆಲ್ಸ ಮಾಡತ್ತೆ. ಇದನ್ನೇ ಉಪಯೋಗಿಸಿಕೊಂಡು ಕಂಪಾಸ್ ದಿಕ್ಕುಗಳನ್ನು ಸೂಚಿಸುತ್ತದೆ. ಕಂಪಾಸ್ ಸಾಧನ ಕಂಡು ಹಿಡಿಯುವ ಮುಂಚೆ ಸೂರ್ಯನ ಸ್ಥಾನ, ನಕ್ಷತ್ರಗಳು, ಹಕ್ಕಿಗಳ ವಲಸೆಯ ರೀತಿ ಅಥವಾ ಜಾಗದ ಗುರುತು ಬಳಸಿ ಪ್ರವಾಸ ಮಾಡುತ್ತಿದ್ದರು. ಆದರೆ ಮೋಡಗಳು ತುಂಬಾ ಇದ್ದಾಗ ಸೂರ್ಯ, ನಕ್ಷತ್ರ ಕಾಣಿಸದೇ ಭೂಮಿಯ ಮೇಲಿನ ದ್ವೀಪಗಳು ಇತ್ಯಾದಿ ಗುರುತು ಆಧರಿಸಿ ಸಮುದ್ರದ ಪಯಣ ನಡೆಸಬೇಕಾಗಿತ್ತು.

ಈ ಕಂಪಾಸ್ ಕಂಡು ಹಿಡಿದಿದ್ದು ೨೦೦೦ ವರ್ಷಗಳ ಹಿಂದೆ ಚೀನಾದಲ್ಲಿ. ಆಗ ಹಾನ್ ವಂಶ ಆಳುತ್ತಿದ್ದ ಕಾಲ. ನೈಸರ್ಗಿಕವಾಗಿ ಚುಂಬಕ ಶಕ್ತಿ ಇರುವ ಸೂಜಿಗಲ್ಲು ಬಳಸಿ ದಿಕ್ಕುಗಳ ಪತ್ತೆ ಮಾಡುತ್ತಿದ್ದರು. ಇದನ್ನು ಮನೆ ಕಟ್ಟುವಾಗ ಇತರ ಉದ್ದೇಶಗಳಿಗೆ ಬಳಸಲಾಗುತ್ತಿತ್ತು. ತಿರುಗಾಟದ ಸಹಾಯಕ್ಕೆ ಬಳಸಲಾರಂಭಿಸಿದ್ದು ೧೧ನೇ ಶತಮಾನದಲ್ಲಿ. ಅಂದಾಜು ೯೫೦ ವರ್ಷಗಳ ಹಿಂದೆ ಸಾಂಗ್ ವಂಶ ಆಳ್ವಿಕೆಯಲ್ಲಿ.

ಹಿಂದೂ ಸಂಸ್ಕೃತಿಯ ಪ್ರಕಾರ 10 ದಿಕ್ಕುಗಳು. ಈ ಪ್ರತಿಯೊಂದು ದಿಕ್ಕುಗಳಿಗೂ ಒಬ್ಬ ದಿಕ್ ಪಾಲಕರಿದ್ದಾರೆ. ಉತ್ತರಕ್ಕೆ ಕುಬೇರ, ದಕ್ಷಿಣಕ್ಕೆ ಯಮ, ಪೂರ್ವಕ್ಕೆ ಇಂದ್ರ, ಪಶ್ಚಿಮಕ್ಕೆ ವರುಣ, ಉತ್ತರ ಪೂರ್ವಕ್ಕೆ ಈಶನ, ದಕ್ಷಿಣ-ಪೂರ್ವಕ್ಕೆ ಅಗ್ನಿ, ಉತ್ತರ ಪಶ್ಚಿಮಕ್ಕೆ ವಾಯು, ದಕ್ಷಿಣ-ಪಶ್ಚಿಮಕ್ಕೆ ನಿರ್ರ್ತಿ, ಮೇಲೆ ಬ್ರಹ್ಮ, ಕೆಳಗೆ ಪಾತಾಳ ಲೋಕಕ್ಕೆ ವಿಷ್ಣು.


ಅಂತರ್ ದಿಕ್ಕುಗಳ ಹೆಸರು ಆಯಾ ದಿಕ್ಪಾಲಕರ ಹೆಸರಿನಿಂದ ಕರೆಯಲಾಗತ್ತೆ. ಸಾಮಾನ್ಯವಾಗಿ ಮನೆ ಕಟ್ಟುವಾಗ, ಪೂಜೆ ಸಲ್ಲಿಸುವುದಕ್ಕೆ ಹೀಗೆ ಹಲವು ಕಡೆ ದಿಕ್ಕುಗಳು ತನ್ನದೇ ಆದ ಪ್ರಾಮುಖ್ಯತೆಯನ್ನು ಪಡ್ಕೊಂಡಿವೆ.


ಇನ್ನು ಅಚ್ಚ ಕನ್ನಡದಲ್ಲೂ ಕೂಡಾ ದಿಕ್ಕುಗಳಿಗೆ ಪದಗಳಿವೆ ಆದ್ರೆ ಬಳಕೆಯಾಗ್ತಿರೋದು ಮಾತ್ರ ತುಂಬಾ ಕಮ್ಮಿ. ಗದ್ಯ, ಪದ್ಯ, ಗ್ರಾಂಥಿಕವಾಗಿ ಈ ಪದಗಳು ಬಳಕೆಯಾಗ್ತಿವೆ. ಕನ್ನಡದಲ್ಲಿ ಪಡುವ, ಮೂಡ, ಬಡಗ ಮತ್ತು ತೆಂಕ ಇವು ದಿಕ್ಕು ಸೂಚಕ. ಇವುಗಳಿಗೆ ಅಣ್ ಪ್ರತ್ಯಯವನ್ನು ಸೇರಿಸಿ ಪಡುವಣ, ಮೂಡಣ, ಬಡಗಣ, ತೆಂಕಣ ಅನ್ನೋದು ರೂಢಿ. ಬಡಗು ತೆಂಕು ಅನ್ನೋದನ್ನ ನಾವು ಯಕ್ಷಗಾನದಲ್ಲಿ ಕೇಳಿರ್ತಿವಿ.

ನಂಬರ್‌ಗಳನ್ನು ನಂಬೋರು ಹಲವು ಜನ. ಆದರೆ ಅದರ ಹಿಂದಿನ ಕನೆಕ್ಷನ್‌ಗಳನ್ನೂ ಅರಿಯುವ ಪ್ರಯತ್ನ ಇಲ್ಲಿ ಮಾಡ್ತಾ ಇದೀನಿ.

ಇಂದಿನ ಸಂಚಿಕೆಯನ್ನ ಮುಗಿಸಿದರೂ ಏಳು ದಿನದ ನಂತರ ಇನ್ನೊಂದು ಸಂಖ್ಯೆಯೊಂದಿಗೆ ಬಂದೆ.

ಅಲ್ಲಿಯವರೆಗೆ ಕಾಯ್ತಾ ಇರಿ.

ಸಂಚಿಕೆ ಇಷ್ಟವಾದರೆ ನಿಮ್ಮಿಷ್ಟದವರಿಗೂ ಈ ಎಪಿಸೋಡನ್ನು ಶೇರ್‌ ಮಾಡಿ.

ಮುಂದಿನ ಸಂಚಿಕೆಯಲ್ಲಿ ಸಿಗ್ತೀನಿ.

ಇದು ಭಾರತ ಸಂಖ್ಯಾಲೋಕ

ರಿಲ್ಯಾಕ್ಸ್‌ ವಿದ್‌ ಬಡೆಕ್ಕಿಲ ಪ್ರದೀಪ್‌ ಮುಂದುವರಿಯುತ್ತದೆ, ಮುಂದಿನ ಸಂಚಿಕೆಯಲ್ಲಿ…

May 06, 202409:21
S1 EP128 ಆತ್ಮವಿಶ್ವಾಸವೆಂಬ ಮಂತ್ರ | Confidence Mantra

S1 EP128 ಆತ್ಮವಿಶ್ವಾಸವೆಂಬ ಮಂತ್ರ | Confidence Mantra

ಗೆಲುವಿನ ಗುಟ್ಟನ್ನು ಬೆನ್ನಟ್ಟುವುದು ಹೇಗೆ ? ಜೀವನದಲ್ಲಿ ಎಲ್ಲ ವಿಧದಲ್ಲೂ ಗೆಲುವಿನ ನಿರೀಕ್ಷೆ ಇಟ್ಟೇ ನಾವು ಮುನ್ನುಗ್ಗುತ್ತಿರುತ್ತೇವೆ ನಿರೀಕ್ಷಿತ ಗೆಲುವನ್ನು ಸಾಧಿಸಲು ಬೇಕಿರುವ ಸಿಕ್ಕ್ರೆಟ್ಗಳು ಕೆಲವು ....ಗುರಿ ತಲುಪಲು ಏನುಮಾಡಬೇಕು ? ಕೇಳಿ ಇಂದಿನಸಂಚಿಕೆಯಲ್ಲಿ

Apr 28, 202408:44
S1 ep 103 ಗುಣಗಳೆಂದರೆ ಏನು ಮತ್ತು ಅವು ಏಕೆ ಮುಖ್ಯ

S1 ep 103 ಗುಣಗಳೆಂದರೆ ಏನು ಮತ್ತು ಅವು ಏಕೆ ಮುಖ್ಯ

ಪುರಾತನವಾದ ಹಿಂದೂ ಧರ್ಮ ತನ್ನನ್ನು ತಾನು ಬದಲಾವಣೆಗಳಿಗೆ ಒಡ್ಡಿಕೊಂಡಿದೆ. ಇಲ್ಲಿ ಮನುಷ್ಯ ಹೇಗೆ ಬದುಕಬೇಕು ಎಂಬುದನ್ನು ಪ್ರತೀ ಹಂತದಲ್ಲೂ ಹೇಳಿಕೊಡಲಾಗುತ್ತದೆ. ಅವುಗಳಲ್ಲಿ ಗುಣಗಳೂ ಒಂದು. ಈ ಗುಣಗಳಲ್ಲಿ ಎಷ್ಟು ವಿಧ ಹಾಗೂ ಯಾವುವು. ಇವುಗಳು ಮನುಷ್ಯನ ವ್ಯಕ್ತಿತ್ವವನ್ನು ಹೇಗೆ ನಿರ್ಧರಿಸುತ್ತದೆ ಎಂಬುವುದನ್ನು ಕೇಳೋಣ

Apr 01, 202406:54
S1 EP 127 ಇಚ್ಛಾಶಕ್ತಿಯಿಂದ ಗೆಲುವು ನಿಶ್ಚಿತ

S1 EP 127 ಇಚ್ಛಾಶಕ್ತಿಯಿಂದ ಗೆಲುವು ನಿಶ್ಚಿತ

ಇಚ್ಚಾಶಕ್ತಿ ನಮ್ಮ ಸಕ್ಸೆಸ್‌ಗೆ ಕಾರಣವಾಗಬಹುದಾ? ಇಚ್ಛಾಶಕ್ತಿಯಿಂದ ನಾವು ಏನನ್ನ ಬೇಕಾದರೂ ಸಾಧಿಸಬಹುದು ಅನ್ನೋದಕ್ಕೆ ಸಾಕ್ಷಿಯಾಗಿ ಅನೇಕ ಸಾಧಕರಿದ್ದಾರೆ. ಅವರೆಲ್ಲರೂ ನಮಗೆ Inspiration. ಬನ್ನಿ ಇಚ್ಛಾಶಕ್ತಿಯಿಂದ ಹೇಗೆ ಗೆಲುವು ಸಾಧ್ಯ ಅನ್ನೋದನ್ನ ನಾವಿವತ್ತಿನ ಸಂಚಿಕೆಯಲ್ಲಿ ತಿಳೀದುಕೊಳ್ಳೋಣ.

Mar 25, 202408:03
S1 EP 126 ಪ್ರಯತ್ನಿಸಿದವನಿಗೆಂದಿಗೂ ಸೋಲಿಲ್ಲ

S1 EP 126 ಪ್ರಯತ್ನಿಸಿದವನಿಗೆಂದಿಗೂ ಸೋಲಿಲ್ಲ

ಗೆಲುವಿನ ಶಿಖರವನ್ನೇರಲು ಪ್ರಯತ್ನ ಅನಿವಾರ್ಯವೇ? ಪ್ರಯತ್ನಿಸದೇ ಗೆಲುವು ಅನ್ನೋದು ಸಾಧ್ಯವೇ? ಇಂತಹ ಅನೇಕ ಪ್ರಶ್ನೆಗಳು ನಮ್ಮ ತಲೆಯಲ್ಲಿ ಓಡುತ್ತಲೇ ಇರುತ್ತದೆ. ಈ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುತ್ತಾ, ಸಕ್ಸೆಸ್‌ನ ಸಿಕ್ರೆಟ್‌ ಒಂದರ ಬಗ್ಗೆ ತಿಳಿಯುವ ಸಂಚಿಕೆ ಇವತ್ತಿನದು..

Feb 24, 202408:15
S1 EP 102 ಭಕ್ತಿಯ ಒಂಬತ್ತು ರೂಪಗಳು ಯಾವುವು? | What are the nine forms of devotion?

S1 EP 102 ಭಕ್ತಿಯ ಒಂಬತ್ತು ರೂಪಗಳು ಯಾವುವು? | What are the nine forms of devotion?





ಭಕ್ತಿ ಮರದಂತೆ.. ನಾವು ಮರಕ್ಕೆ ನೀರು ಹಾಕಿದಾಗ ಅದು ಹೇಗೆ ಫಲ ನೀಡುತ್ತದೆಯೋ ಅದೇ ರೀತಿ ಭಕ್ತಿಗೆ ನಾವು ಪ್ರಾಮುಖ್ಯತೆಯನ್ನು ನೀಡಿದಷ್ಟು ಆಳವಾದ ಚಿಂತನೆಗಳು ಬೆಳೆಯುತ್ತಾ ಹೋಗುತ್ತವೆ. ಹಾಗಾದರೆ ನಿಜವಾಗಿಯೂ ಭಕ್ತಿಯೆಂದರೇನು..? ಭಕ್ತಿಯ 9 ರೂಪಗಳಾವುವು..?

ಪುರಾಣದಲ್ಲಿ, ಪ್ರಹ್ಲಾದನು ತನ್ನ ಗುರುಗಳು ತನಗೆ ಕಲಿಸಿದ ಭಕ್ತಿಯ ಒಂಬತ್ತು ರೂಪಗಳನ್ನು ಅಂದರೆ ನವವಿಧ ಭಕ್ತಿಗಳನ್ನು ತನ್ನ ತಂದೆ ಹಿರಣ್ಯ ಕಶ್ಯಪುವಿಗೆ ವಿವರಿಸುತ್ತಾನೆ. ಅವುಗಳೆಂದರೆ ಶ್ರವಣ, ಕೀರ್ತನ, ಸ್ಮರಣೆ, ಪಾದ-ಸೇವೆ, ಅರ್ಚನೆ, ವಂದನೆ, ದಾಸ್ಯ, ಸಖ್ಯ ಮತ್ತು ಆತ್ಮ-ನಿವೇದನೆ. ಇವುಗಳ ಬಗ್ಗೆ ತಿಳಿದುಕೊಳ್ಳುವ ಸಂಚಿಕೆ ಇಂದಿನದು.

ಭಕ್ತಿಯ ಮೊದಲ ಪ್ರಕಾರ ​ಶ್ರವಣ, ಅಂದ್ರೆ ದೇವರ ಹೆಸರುಗಳು, ಕಥೆಗಳು ಮತ್ತು ಲೀಲೆಗಳನ್ನು ಕೇಳುವುದು. ಇದರಿಂದ ಆ ವ್ಯಕ್ತಿಯು ದೇವರಿಗೆ ಹತ್ತಿರವಾಗುತ್ತಾನೆ ಅನ್ನೋದು ನಮ್ಮ ನಂಬಿಕೆ. ಅದರ ಅತೀಂದ್ರಿಯ ಅರ್ಥವೆಂದರೆ ಅನಾಹದ ಶಬ್ದವನ್ನು ಕೇಳುವುದು, ಇದು ನಮ್ಮೊಳಗೆ ನಿರಂತರವಾಗಿ ಪ್ರತಿಧ್ವನಿಸುವ ಶಬ್ದವಾಗಿರುತ್ತದೆ.

ಸಂಗೀತ ವಾದ್ಯಗಳನ್ನು ಬಳಸುವುದು ಮತ್ತು ಹೆಚ್ಚಾಗಿ ಗುಂಪಿನಲ್ಲಿ ಶ್ಲೋಕಗಳನ್ನು ಅಥವಾ ಕೀರ್ತನೆಗಳನ್ನು ಪಠಿಸುವ ಅಥವಾ ಹಾಡುವ ಮೂಲಕ ದೇವರನ್ನು ಮೆಚ್ಚಿಸುವುದನ್ನ ಕೀರ್ತನ ಅಂತ ಹೇಳಲಾಗತ್ತೆ. ಇದು ಭಕ್ತಿಯ ಎರಡನೇ ಪ್ರಕಾರ. ಕೀರ್ತನವು ಉತ್ತಮವಾದ ಭಾವನೆಗಳನ್ನು ಮತ್ತು ದೈವಿಕ ನಂಬಿಕೆಯನ್ನು ಉತ್ತೇಜಿಸುವ ಶಕ್ತಿಯನ್ನು ಹೊಂದಿದೆ. ದೇವರಿಗೆ ತಮ್ಮ ಭಕ್ತಿಯನ್ನ ವ್ಯಕ್ತಪಡಿಸುವ ಒಂದು ವಿಧಾನ ಅಂತಲೇ ಹೇಳಬಹುದು.

ಇನ್ನು ಮೂರನೇ ಭಕ್ತಿಯ ಪ್ರಕಾರವಾದ ಸ್ಮರಣೆಯಲ್ಲಿ, ಭಕ್ತನು ಭಗವಂತನ ನಾಮ ಮತ್ತು ರೂಪಗಳನ್ನು ಸ್ಮರಿಸುತ್ತಾನೆ. ಇದು ಕಥೆಗಳನ್ನು ನೆನಪಿಸಿಕೊಳ್ಳುವುದು, ದೇವರ ಮಹಿಮೆಯ ಬಗ್ಗೆ ಇತರರಿಗೆ ಕಲಿಸುವುದು, ದೇವರ ಅಂಶಗಳನ್ನು ಧ್ಯಾನಿಸುವುದು ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ದೇವರನ್ನು ಸ್ಮರಿಸುವ ಇನ್ನೊಂದು ವಿಧಾನವೆಂದರೆ ಜಪ. ದೇವರನ್ನು ಸ್ಮರಿಸುವುದು ನಮ್ಮನ್ನು ಯಾವಾಗಲೂ ದೇವರಿಗೆ ಹತ್ತಿರವಾಗಿಸುತ್ತದೆ. ಸ್ಮರಣೆ ಒಂದು ಕಠಿಣ ರೂಪವಾಗಿದ್ದು, ಅದಕ್ಕೆ ಮನಃಪೂರ್ವಕತೆಯ ಅಗತ್ಯವಿರುತ್ತದೆ.

​ಪಾದ-ಸೇವೆ ಭಕ್ತಿಯ ನಾಲ್ಕನೇ ಪ್ರಕಾರ. ನಮ್ಮ ಸೇವೆಯನ್ನು ಭಗವಂತನ ಅಥವಾ ಗುರುಗಳ ಪಾದದಲ್ಲಿ ಅರ್ಪಿಸುವಂತದ್ದಾಗಿದೆ. ಒಂದು ವೇಳೆ ಗುರುಗಳು ಅಥವಾ ದೇವರ ವಿಗ್ರಹ ಇಲ್ಲದಿದ್ದರೆ, ಅವನ ದೈವಿಕ ಅನುಗ್ರಹವನ್ನು ಪ್ರತಿನಿಧಿಸುವ ಅವನ ಪಾದುಕೆಗಳಿಗೆ ನಮಸ್ಕಾರವನ್ನು ಮಾಡಬಹುದು. ಪಾದ ಸೇವೆಯು ವ್ಯಕ್ತಿಗೆ ತಾಳ್ಮೆಯನ್ನು ಕಲಿಸುತ್ತದೆ.

ದೇವರ ಆಶೀರ್ವಾದ ಪಡೆಯಲು ಅರ್ಚನೆ – ಪೂಜೆ ಮಾಡುತ್ತಾರೆ. ಇದು ಭಕ್ತಿಯ ಐದನೇ ವಿಧವಾಗಿದೆ. ಸಾಂಪ್ರದಾಯಿಕವಾಗಿ ಇದನ್ನು ಷೋಡಶೋಪಚಾರ ಅಥವಾ ಹದಿನಾರು ವಿಧಾನಗಳಿಂದ ಮಾಡುವ ಪೂಜೆಯಾಗಿದೆ. ಒಬ್ಬರು ದೇವರ ಆವಾಹನೆ, ಆಸನ, ಸ್ನಾನ, ಅಲಂಕಾರ, ಗಂಧ ಲೇಪನ, ಅರ್ಪಣೆ ಮೊದಲಾದ 16 ರೀತಿಯ ಉಪಚಾರಗಳನ್ನು ಮಾಡಲಾಗುತ್ತದೆ. ಇದೂ ಒಂದು ಭಕ್ತಿಯ ಪ್ರಾಕಾರವಷ್ಟೆ. ಆದರೆ ಇದನ್ನ ಶ್ರದ್ಧೆಯಿಂದ ಮಾಡಿದವನು ದೇವರಿಗೆ ಹತ್ತಿರವಾಗುತ್ತಾನೆ.

ಕೃತಜ್ಞತೆಯನ್ನು ವ್ಯಕ್ತಪಡಿಸುವ ಭಕ್ತಿಯ ಪ್ರಾಕಾರವೇ ವಂದನೆ. ಅಂದರೆ, ಕೃತಜ್ಞತೆಯನ್ನು ವ್ಯಕ್ತಪಡಿಸುವ ಸಲುವಾಗಿ ದೇವತೆ, ಗುರುವಿನ ಮುಂದೆ ಸಾಷ್ಟಾಂಗ ನಮಸ್ಕಾರವನ್ನು ಮಾಡುವುದಾಗಿದೆ. ನಮ್ರತೆಯಿಂದ ನಮಸ್ಕರಿಸುವುದು ಮತ್ತು ಸಾಷ್ಟಾಂಗ-ನಮಸ್ಕಾರ ಅಂದರೆ ಎಂಟು ಅಂಗಗಳಿಂದ ಭೂಮಿಯನ್ನು ಸ್ಪರ್ಶಿಸಿ, ನಂಬಿಕೆ ಮತ್ತು ಗೌರವದಿಂದ, ದೇವರ ಪ್ರತಿಮೆಯ ಮುಂದೆ ನಮಸ್ಕರಿಸುವುದಾಗಿದೆ.

ದಾಸ್ಯ ಇದು ಭಕ್ತಿಯ ಏಳನೇ ವಿಧಾನವಾಗಿದೆ. ದಾಸ್ಯ ಅನ್ನೋ ಸಂಸ್ಕೃತ ಪದದ ಅರ್ಥ ಸೇವೆ ಅಥವಾ ಗುಲಾಮಗಿರಿ ಅಂತ. ದಾಸ್ಯವು ದಾಸ್ಯದ ಮೂಲಕ ವ್ಯಕ್ತಪಡಿಸುವ ದೇವರ ಮೇಲಿನ ಪ್ರೀತಿ ಮತ್ತು ಭಕ್ತಿ. ಅಂದರೆ ದೇವರನ್ನು ಅಥವಾ ಗುರುವನ್ನು ಸಮರ್ಪಣಾ ಭಾವದಿಂದ ಸೇವೆ ಮಾಡುವುದು. ದೇವಸ್ಥಾನವನ್ನು ಶುಚಿಗೊಳಿಸುವುದು, ಬಡವರ ಸೇವೆ ಮಾಡುವುದು, ಧರ್ಮಗ್ರಂಥಗಳನ್ನು ಧ್ಯಾನಿಸುವುದು ಅಥವಾ ದೇವರ ಸೇವಕನಾಗಿ ಯಾವುದೇ ಕೆಲಸವನ್ನು ಮಾಡುವುದು, ಇದನ್ನ ದಾಸ್ಯದ ಭಕ್ತಿ ಅಂತ ಹೇಳಲಾಗತ್ತೆ.

ಭಕ್ತಿಯ ಎಂಟನೇ ವಿಧಾನ ಸಖ್ಯ ಭಕ್ತಿ, ಅಂದರೆ ದೇವರೊಂದಿಗೆ ಸ್ನೇಹಿತರಾಗುವುದು ಅಂತರ್ಥ. ಆತ್ಮೀಯ ಸ್ನೇಹಿತರಂತೆ, ಭಕ್ತನು ಯಾವಾಗಲೂ ದೇವರೊಂದಿಗೆ ಒಟ್ಟಿಗೆ ಇರುತ್ತಾನೆ ಮತ್ತು ತನ್ನಂತೆಯೇ ಅವನನ್ನು ಪ್ರೀತಿಸುತ್ತಾನೆ ಅಂತ ನಂಬುವ ಒಂದು ವಿಧಾನ. ಭಕ್ತನು ದೇವರಿಗಾಗಿ ಏನ್‌ ಬೇಕಾದ್ರು ಮಾಡೋದಕ್ಕೆ ರೆಡಿ ಇರ್ತಾನೆ ಅಂತಹ ದೃಢವಾದ ಭಕ್ತಿ ಈ ಸಖ್ಯ ಭಕ್ತಿ. ವಿಭೀಷಣ, ಉದ್ಧವ, ಸುಗ್ರೀವ, ಸುದಾಮ, ಅರ್ಜುನ, ಇತ್ಯಾದಿ, ಈ ರೀತಿಯ ಭಕ್ತಿ ಅಥವಾ ಸಖ್ಯ ಭಾವವನ್ನು ವ್ಯಕ್ತಪಡಿಸಿದ ಭಕ್ತರ ಉದಾಹರಣೆಗಳಾಗಿವೆ.

​ಇನ್ನು ಕೊನೆಯ ಭಕ್ತಿಯ ವಿಧಾನ ಆತ್ಮ-ನಿವೇದನೆ, ಇದರಲ್ಲಿ ಭಕ್ತನು ತನ್ನ ದೇಹ, ಮನಸ್ಸು ಮತ್ತು ಆತ್ಮವನ್ನು ದೇವರಿಗೆ ಅರ್ಪಿಸುತ್ತಾನೆ ಮತ್ತು ಅವನಲ್ಲಿ ಆಶ್ರಯ ಪಡೆಯುತ್ತಾನೆ ಅನ್ನೋ ಭಾವ ಈ ಭಕ್ತಿಯದು. ಅದು ಸಂತೋಷವಾಗಲಿ, ದುಃಖವಾಗಲಿ, ಭಕ್ತನು ಅದನ್ನು ದೇವರ ಉಡುಗೊರೆಯಾಗಿ ನೋಡುತ್ತಾನೆ. ಅವನು ತನ್ನನ್ನು ದೇವರ ಸಾಧನವಾಗಿ ನೋಡುತ್ತಾನೆ. ಇದುವೇ ಆತ್ಮ ನಿವೇದನೆಯಾಗಿದೆ ಅಂತ ಹೇಳ್ತಾ ಇಂದಿನ ಸಂಚಿಕೆಗೆ ಪೂರ್ಣವಿರಾಮವನ್ನಿಡ್ತಾ ಇದೀನಿ.

Feb 12, 202409:19
S1 EP 125 ಸಕ್ಸೆಸ್‌ಗೆ ಸೂತ್ರಗಳು ಸಾವಿರ. ಸಾವಿರದಲ್ಲಿ ಇನ್ನೊಂದಿಷ್ಟನ್ನ ನಾವು ಈ ಸೀಸನ್‌ನಲ್ಲಿ ಕೇಳೋಣ

S1 EP 125 ಸಕ್ಸೆಸ್‌ಗೆ ಸೂತ್ರಗಳು ಸಾವಿರ. ಸಾವಿರದಲ್ಲಿ ಇನ್ನೊಂದಿಷ್ಟನ್ನ ನಾವು ಈ ಸೀಸನ್‌ನಲ್ಲಿ ಕೇಳೋಣ

Success ಅನ್ನೋದು ಒಬ್ಬೊಬ್ಬರಿಗೆ ಒಂದೊಂದು ರೀತಿ. ನಮ್ಮ ಸಮಾಜದಲ್ಲಿ ಸೋತು ಗೆದ್ದವರು ಒಂದು ಕಡೆಯಾದರೆ, ಗೆದ್ದು ಸೋತವರ ಪಂಗಡ ಇನ್ನೊಂದು ಕಡೆ. ಎರಡು ಪಂಗಡದವರ ಕಥೆಯೂ ನಮಗೆ ಸ್ಪೂರ್ತಿದಾಯಕವೇ… ಸೋತು ಗೆದ್ದರೆ ಅದಕ್ಕೊಂದು ಬೆಲೆ ಅನ್ನೋದು ನಮ್ಗೆಲ್ಲರಿಗೂ ಗೊತ್ತಿರೋ ಸಂಗತಿ. ಅದೆಷ್ಟೋ famous ವ್ಯಕ್ತಿಗಳು ಸೋತು ಗೆದ್ದಿದ್ದಾರೆ, ಉದಾಹರಣೆಯಾಗಿ ಹೇಳ್ಬೇಕು ಅಂದ್ರೆ ಅಮಿತಾಬ್‌ ಬಚ್ಚನ್‌, ಎಷ್ಟೋ ರಿಜೆಕ್ಷನ್‌ಗಳ ನಂತರ ಅವರು ಇಷ್ಟು ಫೇಮಸ್‌ ಆಗೋದಕ್ಕೆ ಸಾಧ್ಯ ಆಯಿತು. ಕೇಳಿ..

Feb 05, 202408:01
S1 EP 114 ಹಿಂದೂ ಮಹಾಗ್ರಂಥಗಳು.

S1 EP 114 ಹಿಂದೂ ಮಹಾಗ್ರಂಥಗಳು.

ಹಿಂದೂ ಮಹಾಗ್ರಂಥಗಳಾದ ರಾಮಾಯಣ ಮತ್ತು ಮಹಾಭಾರತ ಜೀವನಾದರ್ಶಗಳು ಮಾರ್ಗದರ್ಶನವನ್ನ ನೀಡುತ್ತವೆ ಅನ್ನೋದನ್ನ ನಾವು ನಂಬಿಕೊಂಡು ಬಂದಿದ್ದೇವೆ. ಇವುಗಳು ಸಂಸ್ಕೃತದ ಮಹಾಕಾವ್ಯಗಳೂ ಹೌದು. ಇವುಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿದುಕೊಳ್ಳುವ ಸಂಚಿಕೆ ಇದು.

Jan 01, 202410:25
S1 EP100 ವೇದ ಅಂದ್ರೆ ಏನು ?

S1 EP100 ವೇದ ಅಂದ್ರೆ ಏನು ?

ಹಿಂದೂ ಧರ್ಮದ ಇತಿಹಾಸವು ಹಲವು ವರ್ಷಗಳಷ್ಟು ಹಳೆಯದಾಗಿದೆ ಮತ್ತು ಅದರ ಅತ್ಯಂತ ಸರಿಯಾದ ಮತ್ತು ನಿಖರವಾದ ಪುರಾವೆಗಳು ನಮ್ಮ ವೇದ ಹಾಗೆನೇ ಪುರಾಣಗಳಲ್ಲಿ ಮಾತ್ರ ಕಾಣಸಿಗುತ್ತವೆ. ಆದ್ದರಿಂದ ವೇದ ಅಂದ್ರೇನು ಅನ್ನೋದಕ್ಕೆ ಉತ್ತರವನ್ನು ಹುಡುಕ್ತಾ ಹೋಗೋಣ… ಕೇಳಿ ..

Dec 11, 202309:43
S1 EP 124 ಹಲವು ದೇಶಗಳಲ್ಲಿ ತಮ್ಮದೇ ಛಾಪು ಮೂಡಿಸಿದ ಸಮೀರ್ ಅರೋರ

S1 EP 124 ಹಲವು ದೇಶಗಳಲ್ಲಿ ತಮ್ಮದೇ ಛಾಪು ಮೂಡಿಸಿದ ಸಮೀರ್ ಅರೋರ

ಭಾರತದಲ್ಲಿ ಇಂಜಿನಿಯರಿಂಗ್ ಮಾಡಿದ ಆರೋರಾ ಲಂಡನ್ ನಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮುಗಿಸಿ ಆ... ಕಂಪೆನಿ ಯಿಂದ ತಮ್ಮ ವೃತ್ತಿ ಜೀವನವನ್ನು ಆರಂಭಿಸ್ತಾರೆ ಅಷ್ಟೇ ಅಲ್ಲದೆ ಅಲ್ಲಿ ಹೊಸ ಟೆಕ್ನಾಲಜಿಯನ್ನು ಕಂಡುಹಿಡಿಯುತ್ತಾರೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಆವಿಷ್ಕಾರಗಳನ್ನು ಮಾಡ್ತಾ ಅರೋರಾ ಬೇರೆ ಬೇರೆ ಪ್ರತಿಷ್ಠಿತ ಕಂಪೆನಿಗಳಲ್ಲಿ ಸಿ.ಈ.ಓ ಆಗಿ ಹಲವು ದೇಶಗಳಲ್ಲಿ ತಮ್ಮದೇ ಛಾಪು ಮೂಡಿಸಿದ....

Dec 03, 202306:31
S1 EP 99 ಸಂಖ್ಯೆ ಗಳಿಗೂ ಭಾರತೀಯ ಪರಂಪರೆಗೂ ಇರುವ ಸಂಬಂಧ

S1 EP 99 ಸಂಖ್ಯೆ ಗಳಿಗೂ ಭಾರತೀಯ ಪರಂಪರೆಗೂ ಇರುವ ಸಂಬಂಧ

ಹಿಂದೂ ಧರ್ಮಗ್ರಂಥಗಳು ಹಾಗೂ ಪುರಾಣಗಳ ಪ್ರಕಾರ ಜಗತ್ತು ನಾಲ್ಕು ಮುಖ್ಯ ಯುಗಗಳಿಂದ ಕೂಡಿದೆ. ಅವುಗಳು ಯಾವುವು ಅವುಗಳ ಪ್ರಾಮುಖ್ಯತೆ ಏನು ಎಂಬ ಸುಂದರ ವಿಚಾರ ಕೇಳಿ

Nov 06, 202309:43
S1 EP123 ಭಾರತದ ಮಿತ್ತಲ್ ವಿಶ್ವದ ಅತೀ ಶ್ರೀಮಂತ ಉದ್ಯಮಿಯಾದ ಕಥೆ

S1 EP123 ಭಾರತದ ಮಿತ್ತಲ್ ವಿಶ್ವದ ಅತೀ ಶ್ರೀಮಂತ ಉದ್ಯಮಿಯಾದ ಕಥೆ

ಸಣ್ಣ ಉದ್ಯಮವಾಗಿ ಆರಂಭಿಸಿದ ಕಂಪೆನಿಯೊಂದು ವಿಶ್ವದ ಪ್ರಮುಖ ಕಂಪೆನಿಗಳಲ್ಲೊಂದಾಗುವಂತೆ ಮಾಡಿದ ಮಿತ್ತಲ್ ವಿಶ್ವದ ಅತಿ ಶ್ರೀಮಂತ ವ್ಯಕ್ತಿಗಳಲ್ಲೊಬ್ಬರು. ಭಾರತ ಮತ್ತು ಬ್ರಿಟನ್ನಿನ ಪ್ರಖ್ಯಾತ ಉದ್ಯಮಿಯಾಗಿರುವ ಲಕ್ಷ್ಮೀನಾರಾಯಣ ಮಿತ್ತಲ್ ಅವರ ಕಥೆ ಕೇಳಿ

Oct 29, 202306:41
S1 EP 98 ಸಂಖ್ಯೆಗಳಿಗೂ ನಮ್ಮ ಜೀವನಕ್ಕೂ ಇರುವ ಅವಿನಾಭಾವ ಸಂಬಂಧವೇನು ?

S1 EP 98 ಸಂಖ್ಯೆಗಳಿಗೂ ನಮ್ಮ ಜೀವನಕ್ಕೂ ಇರುವ ಅವಿನಾಭಾವ ಸಂಬಂಧವೇನು ?

ಸಂಖ್ಯೆಗಳಿಗೂ ನಮ್ಮ ಜೀವನಕ್ಕೂ ಇರುವ ಅವಿನಾಭಾವ ಸಂಬಂಧದ ಸುಂದರ ಅವಲೋಕನವಿದು. ನಮ್ಮ ಜೀವನದ ಆಚಾರ ವಿಚಾರ, ಸಂಪ್ರದಾದ, ಸಂಸ್ಕೃತಿಯಲ್ಲಿ ಸಂಖ್ಯೆಗಳು ಯಾವರೀತಿಯ ಪಾತ್ರವನ್ನು ವಹಿಸುತ್ತದೆ ಎಂಬ ಸುಂದರ ವಿಚಾರ ಕೇಳಿ

Oct 09, 202307:41
S1 EP 122 ಅಭಿಜಿತ್ ಬ್ಯಾನರ್ಜಿ

S1 EP 122 ಅಭಿಜಿತ್ ಬ್ಯಾನರ್ಜಿ

ಕಷ್ಟ, ಪರಿಶ್ರಮ, ಸಾಧಿಸಲೇ ಬೇಕೆಂಬ ಛಲವಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ನೊಬೆಲ್ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ ಯವರೇ ಸಾಕ್ಷಿ. ಕೋಲ್ಕತಾ ಮೂಲದ ಅಭಿಜಿತ್ ಅವರ ಯಶೋಗಾಥೆ ಕೇಳಿ...


Oct 08, 202306:46
S1 EP 97 ಉಪನಿಷತ್ತುಗಳು

S1 EP 97 ಉಪನಿಷತ್ತುಗಳು

ವೇದಗಳು, ಪುರಾಣಗಳು ಮತ್ತು ಉಪನಿಷತ್ತುಗಳು ನಮ್ಮ ಆಧ್ಯಾತ್ಮಿಕ ಜೀವನ ಮತ್ತು ಸಾಧನೆಗೆ ಸಹಕಾರಿಯಾಗಿವೆ ಅನ್ನೋದನ್ನ ನಾವು ಸಹಸ್ರಾರು ವರ್ಷಗಳಿಂದ ನಂಬಿಕೊಂಡು ಬಂದಿದ್ದೇವೆ. ಉಪನಿಷತ್ತುಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ, ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಯ ಒಳನೋಟವನ್ನು ಪಡೆಯುವುದು ನಿಜ್ವಾಗ್ಲು ಕಷ್ಟ.

ಉಪನಿಷತ್ತುಗಳು ಮುಖ್ಯವಾಗಿ ವೇದಗಳ ಜ್ಞಾನ ಕಾಂಡ ಅಥವಾ ಜ್ಞಾನದ ಭಾಗವನ್ನು ಪ್ರತಿನಿಧಿಸುತ್ತವೆ. ಉಪನಿಷತ್ತುಗಳು, ಶ್ರುತಿಯಲ್ಲಿ ಸೇರಿವೆ. ಪ್ರಸ್ತುತ, ಅತ್ಯಂತ ಜನಪ್ರಿಯ ಮತ್ತು ವ್ಯಾಪಕವಾಗಿ ಓದುವ ವೈದಿಕ ಪಠ್ಯಗಳಾಗಿವೆ.

ಉಪನಿಷತ್ತುಗಳ ಕಾಲದಲ್ಲಿ ಸಮಾಜ ಸಾಕಷ್ಟು ಮುಂದುವರ್ದಿತ್ತು. ಆದ್ರೆ ಈಗ

Oct 02, 202309:41
S1 EP 121 : ಮನಸ್ಸಿದ್ದರೆ ಏನನ್ನಾದರೂ ಸಾಧಿಸಬಹುದು

S1 EP 121 : ಮನಸ್ಸಿದ್ದರೆ ಏನನ್ನಾದರೂ ಸಾಧಿಸಬಹುದು

ಭಾರತದ ಸಣ್ಣ ಪಟ್ಟಣದ ಹುಡುಗ ಜಗತ್ತಿನ ತಂತ್ರಜ್ಞಾನ ಕ್ಷೇತ್ರದ ಉತ್ತುಂಗಕ್ಕೇರುವ ಸ್ಪೂರ್ತಿದಾಯಕ ಕಥೆ ಇದು. ಆ ಹುಡುಗನ ಕುರಿತಾದ ಕುತೂಹಲಕಾರಿ ಸ್ಟೋರಿ ಕೇಳಿ

Oct 01, 202307:54
S1 EP 93 : ದೇಹದಲ್ಲಿರುವ ಏಳು ಚಕ್ರಗಳ ಮಹತ್ವ

S1 EP 93 : ದೇಹದಲ್ಲಿರುವ ಏಳು ಚಕ್ರಗಳ ಮಹತ್ವ

ನಮ್ಮ ದೇಹದಲ್ಲಿರೋ ಏಳು ಚಕ್ರಗಳ ಬಗ್ಗೆ ಕೇಳಿದ ನಾವು ಅದರ ಮಹತ್ವದ ಬಗ್ಗೆ ಯಾವತ್ತೂ ತಿಳಿದುಕೊಂಡಿರೋ ಸಾಧ್ಯತೆ ಇರಲ್ಲ ಆ ವಿಚಾರವನ್ನ ಈವತ್ತು ತಿಳ್ಕೊಳ್ಳೋಣ ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ

Sep 24, 202310:12
S1 EP 92 : ಭಾರತ ಸಂಖ್ಯಾ ಲೋಕ

S1 EP 92 : ಭಾರತ ಸಂಖ್ಯಾ ಲೋಕ

ಸಂಖ್ಯೆಗಳಿಗೂ ಜೀವನಶೈಲಿಗೂ ಇರುವ ಅವಿನಾಭಾವ ಸಂಬಂಧಗಳನ್ನ ಅವಲೋಕಿಸುತ್ತಾ ಸಾಗೋಣ.. ಒಂದು ನವ ರಾತ್ರಿಯ ಮಾತಾದರೆ ದಶಕಂಠನೂ ನಮ್ಮ ಸಂಸ್ಕೃತಿಯ ಭಾಗವೇ.. ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ

Sep 24, 202308:34
S1 EP 118 ಯಶಸ್ವಿ ಮಹಿಳೆಯ ಯಶೋಗಾಥೆ

S1 EP 118 ಯಶಸ್ವಿ ಮಹಿಳೆಯ ಯಶೋಗಾಥೆ

ಮಹಿಳೆಗೆ ಸರಿಯಾದ ಶಿಕ್ಷಣ, ಮಾರ್ಗದರ್ಶನ, ಪ್ರೋತ್ಸಾಹ ನೀಡಿದರೆ ಪುರುಷರನ್ನು ಹಿಂದಿಕ್ಕಿ ಸಾಧನೆಯ ಶಿಖರವೇರಬಲ್ಲಳು ಎಂಬುದಕ್ಕೆ ಸಾಕ್ಷಿಯಾದ ಪದ್ಮಶ್ರೀ ವಾರಿಯರ್ ಅವರ ಕಥೆ ಕೇಳಿ ಬಡಕ್ಕಿಲ.......

Sep 24, 202305:31
S1 EP 117 :ಸುಂದರ್ ಪಿಚೈ ಅವರ ಸ್ಪೋರ್ತಿದಾಯಕ ಕಥೆ

S1 EP 117 :ಸುಂದರ್ ಪಿಚೈ ಅವರ ಸ್ಪೋರ್ತಿದಾಯಕ ಕಥೆ

ಒಂದು ಉತ್ತಮ ಆಲೋಚನೆಗೆ ಒಬ್ಬ ಮನುಷ್ಯನನ್ನು ಹಾಗೆ ಸಮಾಜವನ್ನು ಬದಲಾಯಿಸುವ ಶಕ್ತಿ ಇರುತ್ತದೆ ಎನ್ನುವುದಕ್ಕೆಉತ್ತಮ ನಿದರ್ಶನವಾಗಿರುವ ಸುಂದರ್ ಪಿಚೈ ಅವರ ಸ್ಪೋರ್ತಿದಾಯಕ ಕಥೆ ಕೇಳಿ ಬಡೆಕ್ಕಿಲ ಪ್ರದೀಪ್ ಅವರ ಧ್ವನಿಯಲ್ಲಿ.

Sep 24, 202306:33
S1 EP 116 ಯಾರು ಈ ಥಾಮಸ್ ಕುರಿಯನ್

S1 EP 116 ಯಾರು ಈ ಥಾಮಸ್ ಕುರಿಯನ್

IIT ತೊರೆದ ವಿಶ್ವದ ಅತೀ ದೊಡ್ಡ ಸಂಸ್ಥೆಗಳಲ್ಲಿ ಒಂದಾದ ಗೂಗಲ್ ಕ್ಲೌಡ್ಸ್ ನ ಚಿಂತಾ ಜನಕ ಸ್ಥಿತಿಯ ಕಾಲದಲ್ಲಿ ತಮ್ಮ ಸ್ಮಾರ್ಟ್ನೆಸ್ ನಿಂದ ಹೊರಗೆ ತರ್ತಾರೆ ಕೇಳಿ ..

Sep 24, 202306:47
S1EP 115 ಸತ್ಯ ನಾಡೆಲ್ಲ ಯಶೋಗಾಥೆ

S1EP 115 ಸತ್ಯ ನಾಡೆಲ್ಲ ಯಶೋಗಾಥೆ

ಒಬ್ಬ ಇಂಜಿನಿಯರ್ ಆಗಿ ಶುರು ಮಾಡಿ ವಿಶ್ವದ ಅತೀ ದೊಡ್ಡ ಕಂಪನಿಗಳಲ್ಲಿ ಒಂದಾದ ಕಂಪನಿಯ CEO ಆದ ಮಹಾನ್ ವ್ಯಕ್ತಿಯ ಜರ್ನಿ ಸುಧೀರ್ಘ ಹಾಗು ಅರ್ಥಪೂರ್ಣ ಆದ್ರೆ ಒಂದು ವಿಶೇಷ ಅಂದ್ರೆ ಇವರು ಭಾರತ ಸಂಜಾತರು.

Sep 24, 202307:02
S1 EP114 ಯಾರು ಈ ಇಂದ್ರ ನೂಯಿ ? | Who is this Indra Nooyi?

S1 EP114 ಯಾರು ಈ ಇಂದ್ರ ನೂಯಿ ? | Who is this Indra Nooyi?

ವಿಶ್ವ ಭೂಪಟದಲ್ಲಿ ತಮ್ಮದೇ ಆದ ಒಂದು ಸ್ಥಾನ ಗಳಿಸಿದ ಒಂದಷ್ಟು ಮಂದಿಯ ಪರಿಚಯ ನಿಮಗಾಗಿ ಮಾಡಲಿದ್ದೀವಿ.. ಇದು ಭಾರತ ಸಂಜಾತರು. ಮಹಿಳಾ ಸಬಲೀಕರಣ ಅನ್ನೋದು ಪ್ರಪಂಚಾದ್ಯಂತ ದಿನಾ ಚರ್ಚೆಯಾಗೋ ವಿಷಯ, ತಮ್ಮ ಎಲ್ಲಾ ಸಾಮಾಜಿಕ ಕಟ್ಟುಪಾಡುಗಳನ್ನ ಬದಿಗೊತ್ತಿ.. ಭಾರತೀಯ ಮಹಿಳೆಯರು ದೇಶ ವಿದೇಶದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಹೆಸರು ಮಾಡಿದ್ದಾರೆ.

Sep 24, 202308:05
S1 EP 120 ಅವಕಾಶಗಳನ್ನು ಸೃಷ್ಟಿಸಿಕೊಳ್ಳುವುದು ಹೇಗೆ ?

S1 EP 120 ಅವಕಾಶಗಳನ್ನು ಸೃಷ್ಟಿಸಿಕೊಳ್ಳುವುದು ಹೇಗೆ ?

ಅವಕಾಶಗಳಿಲ್ಲ ಎಂದು ದೂರುವವರ ನಡುವೆ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವವರು ಕೆಲವರು. ಅಂಥವರಲ್ಲಿ ಒಬ್ಬರು ನಮ್ಮ ಇಂದಿನ ಸಂಚಿಕೆಯ ಸಾಧಕರು. ಹಾಗಾದ್ರೆ ಯಾರವರು ಏನಿವರ ಕಥೆ ಎಂಬುವುದನ್ನು ಕೇಳಿ

Sep 24, 202307:11
S1 EP 96 12 ಆದಿತ್ಯರು ಯಾರು ?

S1 EP 96 12 ಆದಿತ್ಯರು ಯಾರು ?

ವೇದೋಪನಿಷತ್‌ಗಳಲ್ಲಿ ಉಲ್ಲೇಖವಾದ 12 ಆದಿತ್ಯರ ಬಗ್ಗೆ ಕೇಳಿರುವುದು ತುಂಬಾ ವಿರಳ. 12 ಆದಿತ್ಯರು ಯಾರು? ಅವರ ವಿಶೇಷತೆಗಳೇನು? ಅನ್ನೋದನ್ನ ತಿಳಿದುಕೊಳ್ಳುವ ಕುತೂಹಲಕರ ಸಂಚಿಕೆ ಇದು.

ಅನಾದಿ ಕಾಲದಿಂದ ವೇದಗಳು, ಪುರಾಣಗಳು, ನಮ್ಮ ಜೀವನದ ಬಹು ಮುಖ್ಯವಾದ ಅಂಗವಾಗಿ, ನಮ್ಮನ್ನು ಮುನ್ನಡೆಸುತ್ತಾ ಬಂದಿವೆ. ಸಾವಿರಾರು ಕೋಟ್ಯಾಂತರ ದೇವರನ್ನು ಪೂಜಿಸುತ್ತಾ ಆರಾಧಿಸುತ್ತ ಬಂದ ನಾವೆಲ್ಲಾ ನವಗ್ರಹ ದೇವತೆಗಳ ಬಗ್ಗೆ ಕೇಳಿರ್ತೆವೆ. ಸೂರ್ಯನಿಂದಲೇ ನಮ್ಮೆಲ್ಲರ ದಿನ ಶುರು ಆಗೋದು ಅಲ್ವಾ. ಹಾಗೆ ನವಗ್ರಹಗಳಲ್ಲೂ ಕೂಡ ಉನ್ನತ ಸ್ಥಾನದಲ್ಲಿರುವವನೂ ಕೂಡ ಸೂರ್ಯನೇ. ಕೇಳಿ ...

Sep 18, 202307:55
S1 EP 119 ಪರಿಶ್ರಮದ ಫಲ ಯಾವತ್ತೂ ಸಿಹಿಯಾಗಿರುತ್ತದೆ

S1 EP 119 ಪರಿಶ್ರಮದ ಫಲ ಯಾವತ್ತೂ ಸಿಹಿಯಾಗಿರುತ್ತದೆ

ಆಡೋಬ್ ಸಂಸ್ಥೆಯ ಸಿ ಈ ಓ ಆಗಿ , ತಮ್ಮ ಚಿಕ್ಕ ಹೆಜ್ಜೆಯಿಂದ ಇತಿಹಾಸವನ್ನೇ ಸೃಷ್ಟಿಸಬಹುದು ಎಂಬುದನ್ನು ತೋರಿಸಿ ಕೊಟ್ಟ ಹೈದ್ರಾಬಾದ್ ಮೂಲದ ಶಂತನು ನಾರಾಯಣ್ ಅವರ ಸಾಧನೆಯ ಕಥೆ ಕೇಳಿ

Sep 17, 202306:57
S1 EP 94 ಅಷ್ಟ ಸಿದ್ದಿಗಳು

S1 EP 94 ಅಷ್ಟ ಸಿದ್ದಿಗಳು

ಹನುಮಾನ್‌ ಚಾಲೀಸಾದಲ್ಲಿ ಹೇಳಲಾಗೋ ಅಷ್ಟಸಿದ್ಧಿಗಳ ಬಗ್ಗೆ ನೀವು ಯಾವತ್ತಾದ್ರೂ ಕೇಳಿದ್ದೀರಾ? ಈ ಎಲ್ಲಾ ಸಿದ್ಧಿಗಳು ಹನುಮಂತನಲ್ಲಿ ಇತ್ತು ಅನ್ನೋದು ರಾಮಾಯಣದಲ್ಲಿ ಉಲ್ಲೇಖವಾಗಿದೆ. ಹಾಗಾದ್ರೆ ಈ ಅಷ್ಟಸಿದ್ಧಿಗಳು ಯಾವುದು? ಅನ್ನೋದನ್ನ ತಿಳಿದುಕೊಳ್ಳೋ ಸಂಚಿಕೆ ಇದು.

Sep 11, 202308:25
S1 EP 91 ಲಕ್ಷ್ಮಿ ಮನೆಗೆ ಬರುವ ಸಮಯದಲ್ಲಿ ನಾವು ಏನೇನು ಮಾಡ್ಬಾರ್ದು ? | What and all we shouldn’t do in the evening

S1 EP 91 ಲಕ್ಷ್ಮಿ ಮನೆಗೆ ಬರುವ ಸಮಯದಲ್ಲಿ ನಾವು ಏನೇನು ಮಾಡ್ಬಾರ್ದು ? | What and all we shouldn’t do in the evening

ಸೂರ್ಯಾಸ್ತದ ನಂತರ ಇದನ್ನ ಮಾಡ್ಬೇಡ ಅದನ್ನ ಮಾಡ್ಬೇಡ ಅಂತ ನಮ್ಮ ಹಿರಿಯರು ಹೇಳಿರೋದನ್ನ ಕೇಳಿದ್ದೇವೆ, ಸಾಮಾನ್ಯವಾಗಿ ನಾವು ಅದನ್ನ ಮೂಢನಂಬಿಕೆ ಅಂತ ನಿರ್ಲಕ್ಷಿಸುತ್ತೀವಿ, ಆದ್ರೆ ಆ ವಿಷಯದ ಹಿಂದೆ ಏನೋ ಆಳವಾದ ಅರ್ಥ ಇರ್ಬಹುದು, ಏನೋ ಒಂದು ವಿಜ್ಞಾನ ಇರ್ಬೋದು ಅಂತ ತಿಳ್ಕೊಳ್ಳೋಕೆ ಹೋದಾಗ ಎಲ್ಲಾನು ಗೊತ್ತಾಗುತ್ತೆ.. ಕೇಳಿ..

Aug 07, 202307:42
S1 EP113 ಸಣ್ಣ ಊರಿನ ಕಲೆಯನ್ನ ದೇಶವಿದೇಶಗಳಲ್ಲಿ ಪರಿಚಯಿಸಿದ ಬೀದರ್ ನ ಶಾಹ್ ರಶೀದ್ ಅಹ್ಮದ್ ಖಾದ್ರಿ

S1 EP113 ಸಣ್ಣ ಊರಿನ ಕಲೆಯನ್ನ ದೇಶವಿದೇಶಗಳಲ್ಲಿ ಪರಿಚಯಿಸಿದ ಬೀದರ್ ನ ಶಾಹ್ ರಶೀದ್ ಅಹ್ಮದ್ ಖಾದ್ರಿ

ಕಲೆಯನ್ನೇ ಉಸಿರಾಗಿಸಿ ತಮ್ಮ ಜೀವನವನ್ನ ಕಲೆಗಾಗಿ ಮುಡಿಪಾಗಿಟ್ಟ ಹಲವರನ್ನ ನಾವು ಕಾಣಬಹುದು ಒಂದು ಜಿಲ್ಲೆಗೆ ಸೀಮಿತವಾಗಿದ್ದ ಒಂದು ಕಲೆಯನ್ನ ದೇಶ ವಿದೇಶಗಳಲ್ಲಿ ಪರಿಚಯಿಸಿದ ಕಲಾ ಸಾಧಕನ ಪರಿಚಯ ಇಂದಿನ ಸಂಚಿಕೆಯಲ್ಲಿ..ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ .

Aug 06, 202306:34
S1 EP90 ಸಾವಿನ ಮನೆಗೆ ಹೋಗಿ ಬಂಡ ನಂತರ ಸ್ನಾನ ಮಾಡೀನೇ ಮನೆಯೊಳಗೇ ಬರ್ಬೇಕು ಯಾಕೆ ?

S1 EP90 ಸಾವಿನ ಮನೆಗೆ ಹೋಗಿ ಬಂಡ ನಂತರ ಸ್ನಾನ ಮಾಡೀನೇ ಮನೆಯೊಳಗೇ ಬರ್ಬೇಕು ಯಾಕೆ ?

ಸಾವಿನ ಮನೆಗೆ ಹೋದ ನಂತ್ರ ಸ್ನಾನ ಮಾಡಿ ಮನೆಯೊಳಗೆ ಬರ್ಬೇಕು, ಈ ಮಾತನ್ನ ನೀವು ಕೇಳೇ ಇರ್ತೀರ! ಆದ್ರೆ ಕಾರಣ ಏನು ? ಇವತ್ತಿನ ಸಂಚಿಕೆ ಕೇಳಿ ತಿಳ್ಕೊಳ್ಳಿ..

Jul 31, 202307:37
S1 EP 112 ಜವಾಬ್ದಾರಿಗಳು ಸಾಧನೆಗೆ ಹೇಗೆ ಅಡಿಪಾಯವಾಗುತ್ತದೆ ?

S1 EP 112 ಜವಾಬ್ದಾರಿಗಳು ಸಾಧನೆಗೆ ಹೇಗೆ ಅಡಿಪಾಯವಾಗುತ್ತದೆ ?

ಸಾಧನೆ ಮಾಡಬೇಕು ಅಂದ್ರೆ ಕಷ್ಟಪಟ್ಟು ಬೆಳೆದು ಬಂದಿರಬೇಕು ಎಂದೇನೂ ಇಲ್ಲ. ಬೆಳ್ಳಿ ತಟ್ಟೆಯಲ್ಲಿ ತಿಂದು ಬಂದರೂ ಕೂಡಾ ಈಗಾಗಲೇ ಬೆಳೆದ ಸಂಸ್ಥೆಯನ್ನ ಮತ್ತಷ್ಟು ಬೆಳೆಸಿದ ಸಾಧಕರ ಕಥೆ ಇದು. ಯಾರವರು ? ಏನಿವರ ಕಥೆ ಎಂಬುದನ್ನು ಕೇಳಿ

Jul 30, 202307:29
S1 EP 89: ತೀರ್ಥ ಸ್ಥಳಗಳಲ್ಲಿ ನೀರಿಗೆ ನಾಣ್ಯಗಳನ್ನು ಯಾಕಾಗಿ ಹಾಕುತ್ತಾರೆ ?

S1 EP 89: ತೀರ್ಥ ಸ್ಥಳಗಳಲ್ಲಿ ನೀರಿಗೆ ನಾಣ್ಯಗಳನ್ನು ಯಾಕಾಗಿ ಹಾಕುತ್ತಾರೆ ?


ದೇವಾಲಯಗಳಲ್ಲಿ, ತೀರ್ಥ ಸ್ಥಳಗಳಲ್ಲಿ ಭಕ್ತರು ನೀರಿಗೆ ನಾಣ್ಯಗಳನ್ನು ಹಾಕುತ್ತಾರೆ. ಆದರೆ ಬಹಳಷ್ಟು ಜನರಿಗೆ ಯಾಕಾಗಿ ಹೀಗೆ ಮಾಡಲಾಗುತ್ತದೆ ಎಂಬುದರ ಬಗ್ಗೆ ತಿಳುವಳಿಕೆ ಇಲ್ಲ. ಹಿಂದೂ ಧರ್ಮದ ಅತ್ಯಂತ ಪ್ರಾಚೀನ ಸಂಪ್ರದಾಯಗಳಲ್ಲಿ ಇದೂ ಕೂಡಾ ಒಂದು . ಹಾಗಾದ್ರೆ ಈ ಆಚರಣೆಯ ಹಿಂದಿನ ಸುಂದರ ವಿಷಯವನ್ನು ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ

Jul 24, 202308:11
S1 EP 111 ಓ ಆರ್ ಎಸ್ ಕಂಡುಹಿಡಿದ ಸಾಧಕರ ಕಥೆ

S1 EP 111 ಓ ಆರ್ ಎಸ್ ಕಂಡುಹಿಡಿದ ಸಾಧಕರ ಕಥೆ

ಬಾಂಗ್ಲಾ ವಿಮೋಚನೆಯ ಸಂದರ್ಭದಲ್ಲಿ ಸಾವಿರಾರು ಜನರ ಜೀವ ಉಳಿಸಿದ ಹಾಗೂ ಇಂದಿಗೂ ಕೂಡ ಅದೆಷ್ಟೋ ಅಮೂಲ್ಯ ಜೀವವನ್ನು ಉಳಿಸುತ್ತಿರುವ ಓ ಆರ್ ಎಸ್ ಅನ್ನು ಸಂಶೋಧಿಸಿದ ವೈದ್ಯರ ಸಾಧನೆಯ ಕಥೆಯನ್ನ ನಾವಿಂದು ಕೇಳೋಣ ಬನ್ನಿ.

Jul 23, 202308:16
S1 EP 88 ಒಡೆದ ಕನ್ನಡಿಯಲ್ಲಿ ಮುಖ ಯಾಕೆ ನೋಡ್ಬಾರ್ದು ?

S1 EP 88 ಒಡೆದ ಕನ್ನಡಿಯಲ್ಲಿ ಮುಖ ಯಾಕೆ ನೋಡ್ಬಾರ್ದು ?

ನಂಬಿಕೆಗಳ ಹಿಂದಿನ ವೈಜಾನಿಕ ತಾತ್ಪರ್ಯ ತಿಳಿಯದೆ ಮೂಢ ನಂಬಿಕೆ ಎಂಬ ಪಟ್ಟಕೊಟ್ಟಿದೇವೆ.. ಇನ್ನೊಂದು ನಂಬಿಕೆಯ ಬಗ್ಗೆ ಅದರ ಹಿಂದಿನ ಸತ್ಯದಬಗ್ಗೆ ತಿಳಿಯೋಣ .. ಕನ್ನಡಿ ಒಡೆದು ಹೋಗ್ಬಾರ್ದು ಒಡೆದ ಕನ್ನಡಿಯಲ್ಲಿ ಮುಖ ನೋಡ್ಬಾರ್ದು ಅನ್ನೋದು ಯಾಕೆ ? ಕಥೆ ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ

Jul 17, 202310:24
S1 EP 110 ಹೆಜ್ಜೆಯ ಗೆಜ್ಜೆಯಿಂದಲೇ ಪದ್ಮಶ್ರೀ ಪಡೆದವರ ಸ್ಪೂರ್ತಿದಾಯಕ ಕಥೆ

S1 EP 110 ಹೆಜ್ಜೆಯ ಗೆಜ್ಜೆಯಿಂದಲೇ ಪದ್ಮಶ್ರೀ ಪಡೆದವರ ಸ್ಪೂರ್ತಿದಾಯಕ ಕಥೆ

ಹೆಜ್ಜೆಯ ಗೆಜ್ಜೆಯ ಸದ್ದಿ ನಿಂದಲೇ 2023ರ ಪದ್ಮಶ್ರೀ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡ ನಮ್ಮ ಕರ್ನಾಟಕದವರೇ ಆದ ಅದ್ಭುತ ಸಾಧಕಿಯ ಕಥೆ ಇದು. ಹಾಗಾದ್ರೆ ಯಾರಿವರು ಇವರ ಸಾಧನೆಯ ಹಾದಿ ಅದೆಂತದು ಎಂಬ ಸುಂದರ ಸ್ಟೋರಿಯನ್ನ ಕೇಳಿ...

Jul 16, 202308:29
S1 EP 87 ಕೆಟ್ಟ ದ್ರಿಷ್ಟಿಯಿಂದ ತಪ್ಪಿಸಿಕೊಳ್ಳಲು ಕಟ್ಟಿಕೊಳ್ಳುವ ಕಪ್ಪುದಾರದ ಉಪಯೋಗವೇನು ?

S1 EP 87 ಕೆಟ್ಟ ದ್ರಿಷ್ಟಿಯಿಂದ ತಪ್ಪಿಸಿಕೊಳ್ಳಲು ಕಟ್ಟಿಕೊಳ್ಳುವ ಕಪ್ಪುದಾರದ ಉಪಯೋಗವೇನು ?

ತಪ್ಪು ದಾರೀಲಿ ಹೋಗ್ತಿವೋ ಇಲ್ವೋ.. ಕಪ್ಪು ದಾರ ಇದ್ರೆ ಕೆಟ್ಟ ದೃಷ್ಟಿಗಳು ದೂರ ಆಗುತ್ತೆ ಅನ್ನೋದು ನಮ್ಮ ದೇಶದಲ್ಲಿ ಮೊದಲಿನಿಂದಲೂ ಬಂದ ನಂಬಿಕೆ. ನಮ್ಮ ದೇಶ ವಿಭಿನ್ನ ಸಂಸ್ಕೃತಿಯ ತಾಣ ಇಲ್ಲಿ ಗಲ್ಲಿಗೊಂದು ನಂಬಿಕೆಗಳು ಆಚರಣೆಗಳು.. ಎಲ್ಲಾ ಧರ್ಮೀಯರು ಕಣ್ಣು ಬೀಳ್ಬಾರ್ದು ಅಂತ ಒಂದೊಂದು ನಂಬಿಕೆ ಇಟ್ಟುಕೊಂಡಿದ್ದಾರೆ ಆದ್ರೆ ಎಲ್ಲರೂ ಕಪ್ಪು ದಾರ.. ಕೆಟ್ಟ ದ್ರಿಷ್ಟಿಯಿಂದ ತಪ್ಪಿಸಿಕೊಳ್ಳಲು ಧರಿಸುತ್ತಾರೆ.. ಕೇಳಿ ..

Jul 10, 202308:15
S1 EP 109 ಪರಂಪರಾಗತ ಕಲೆ ಉಳಿಸಿ ಮುಖವಾಡದಿಂದ ಮೋಡಿ ಮಾಡುವ ಹೇಮಚಂದ್ರ ಗೋಸ್ವಾಮಿ

S1 EP 109 ಪರಂಪರಾಗತ ಕಲೆ ಉಳಿಸಿ ಮುಖವಾಡದಿಂದ ಮೋಡಿ ಮಾಡುವ ಹೇಮಚಂದ್ರ ಗೋಸ್ವಾಮಿ

ಪರಂಪರಾಗತ ಕಲೆಗಳನ್ನ ಉಳಿಸಿ ಬೆಳೆಸಿದರೆ ಸಾಧನೆಗೆ ಅದುವೇ ದಾರಿ ಆಗುತ್ತೆ ಅನ್ನೋದಕ್ಕೆ ಇವತ್ತಿನ ಸಾಧಕರೇ ಸಾಕ್ಷಿ , ನಶಿಸಿ ಹೋಗುತ್ತಿರುವ ಸಾಂಪ್ರದಾಯಿಕ ಕಲೆಯನ್ನ ಉಳಿಸಿ ಬೆಳೆಸುತ್ತಿರುವ ಮಹಾನ್ ಸಾಧಕನ ಬಗ್ಗೆ ಕೇಳಿ..

Jul 09, 202307:60
S1 EP 86 ನಾವು ಯಾಕೆ ಉತ್ತರ ದಿಕ್ಕಿಗೆ ಮಲಗಬಾರದು?

S1 EP 86 ನಾವು ಯಾಕೆ ಉತ್ತರ ದಿಕ್ಕಿಗೆ ಮಲಗಬಾರದು?

ನಾವು ಹೋಗೋ ದಿಕ್ಕು ಎಷ್ಟು ಮುಖ್ಯಾನೋ ನಾವು ಮಲಗೋ ದಿಕ್ಕು ಅಷ್ಟೇ ಮುಖ್ಯ, ಅದರ ಬಗ್ಗೆ ನಾವು ಹೆಚ್ಚಾಗಿ ಯೋಚನೆ ಮಾಡೋದಿಕ್ಕೆ ಹೋಗುವುದಿಲ್ಲ, ಯೋಚಿಸಿ ಯಾವರೀತಿ ನಿದ್ದೆ ಮಾಡ್ಬೋದು? ತಿಳ್ಕೊಳ್ಳೋಣ ಇವತ್ತಿನ ಸಂಚಿಕೆಯಲ್ಲಿ..

Jul 03, 202307:53
S1 EP 108 ಅಧ್ಯಾತ್ಮದಲ್ಲಿ ಸಾಧನೆಗೈದ ತ್ರಿದಂಡಿ ಚಿನ್ನಶ್ರೀಮನ್ನಾರಾಯಣ ರಾಮಾನುಜ ಸ್ವಾಮೀಜಿ

S1 EP 108 ಅಧ್ಯಾತ್ಮದಲ್ಲಿ ಸಾಧನೆಗೈದ ತ್ರಿದಂಡಿ ಚಿನ್ನಶ್ರೀಮನ್ನಾರಾಯಣ ರಾಮಾನುಜ ಸ್ವಾಮೀಜಿ

ಇಂದಿನ ಸಾಧಕರು ಆದ್ಯಾತ್ಮಿಕತೆಯಲ್ಲಿ ಸಾಧನೆ ಮಾಡಿದವರು , ವೇದ ವಿದ್ವಾಂಸರು, ಆದ್ಯಾತ್ಮ ಗುರುಗಳು, ಮತ್ತು ತತ್ವ ಜ್ಞಾನಿಪಿ..ಪದ್ಮಭೂಷಣ ಪ್ರಶಸ್ತಿ ವಿಜೇತ ಗುರುಗಳ ಬಗ್ಗೆ ತಿಳಿಯಿರಿ..

Jul 02, 202307:27
S1 EP 85 ಉಪವಾಸದ ಪ್ರಾಮುಖ್ಯತೆ | Importance of fasting

S1 EP 85 ಉಪವಾಸದ ಪ್ರಾಮುಖ್ಯತೆ | Importance of fasting

ಹಿರಿಯರು ದೇವರಹೆಸರಲ್ಲಿ ಉಪವಾಸಮಾಡಬೇಕು ಅನ್ನೋ ಕಟ್ಟುಪಾಡು ತಂದಿದ್ದಾರೆ ಸಹಜ ಆದರೆ ಅದರಿಂದಾಗುವ ಲಾಭಗಳಬಗ್ಗೆ ಒಮ್ಮೆ ತಿಳಿಯಿರಿ ..

Jun 26, 202310:11
S1 EP 107 ಶೀಲಕಲೆಯ ಉಳಿವಿಗೆ ತನ್ನ ಜೀವನ ಮುಡಿಪಿಟ್ಟ ಎಸ್ ಸುಬ್ಬರಾಮನ್

S1 EP 107 ಶೀಲಕಲೆಯ ಉಳಿವಿಗೆ ತನ್ನ ಜೀವನ ಮುಡಿಪಿಟ್ಟ ಎಸ್ ಸುಬ್ಬರಾಮನ್

ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದ ಸಂಸ್ಕೃತಿ ಪರಂಪರೆ ದೇಶವಿದೇಶಗಳಲ್ಲಿ ತಮ್ಮ ಛಾಪನ್ನ ಮೂಡಿಸುತ್ತ್ದಿದೆ , ಇದನ್ನ ನಾವು ಭಾರತೀಯರು ಹೆಮ್ಮೆಯಿಂದ ಖುಷಿ ಪಡಬೇಕು,ಇದರಲ್ಲಿ ಶಿಲ್ಪಕಲೆ ಸಾವಿರಾರು ವರ್ಷಗಳ ಇತಿಹಾಸವನ್ನ ಹೊಂದಿದೆ ಇದನ್ನು ಉಳಿಸಿ ಸಂರಕ್ಷಿಸೋದು ಕಷ್ಟ ಸಾಧ್ಯ .. ಆದರೆ ..

Jun 25, 202309:50
S1 EP 84 ತುಳಸಿ ಎಲೆಯನ್ನ ಏಕೆ ತಿನ್ಬಾರ್ದು ? | Why eat Tulsi leaves?

S1 EP 84 ತುಳಸಿ ಎಲೆಯನ್ನ ಏಕೆ ತಿನ್ಬಾರ್ದು ? | Why eat Tulsi leaves?

ನಮ್ಮೆಲ್ಲರ ಮನೆಗಳಲ್ಲಿ ತುಳಸಿ ಗಿಡವಂತೂ ಇದ್ದೇ ಇದೆ, ಇದ್ಕಕೆ ನಾವು ತುಂಬಾ ಪ್ರಾಮುಖ್ಯತೆ ಕೊಡ್ತೀವಿ, ಬೆಳಗ್ಗೆ ತುಳಸಿ ಗಿಡಕ್ಕೆ ನೀರು ಹಾಕಿ, ಸಂಜೆ ತುಳಸಿ ಗಿಡಕ್ಕೆ ದೀಪ ಇಡ್ತೀವಿ ಹೀಗೆ ಮಾಡಿದರೆ ನಮ್ಮ ಮನೆಯಲ್ಲಿ ಲಕ್ಷ್ಮಿ ನೆಲೆಸ್ತಾಳೆ ಅನ್ನೋದು ನಂಬಿಕೆ ಆದ್ರೆ ಹಲವರು ತುಳಸಿ ಎಳೆಯನ್ನ ತಿನ್ಬಾರ್ದು ಅಂತಾರೆ ಯಾಕೆ ? ಕೇಳಿ.

Jun 19, 202308:52
S1EP 106 ಒಂದೂವರೆ ಎಕರೆಯಲ್ಲಿ 3000 ಔಷದ ಗಿಡ ನೆಟ್ಟ ಪದ್ಮ ಸಾಧಕ

S1EP 106 ಒಂದೂವರೆ ಎಕರೆಯಲ್ಲಿ 3000 ಔಷದ ಗಿಡ ನೆಟ್ಟ ಪದ್ಮ ಸಾಧಕ

ಕಲಹಂಡಿಯ ನಾಂದೋಲ್ ಹಳ್ಳಿಯಲ್ಲಿ ವಾಸ ಮಾಡ್ತಿರೋ ಇವತ್ತಿನ ಪದ್ಮ ಸಾಧಕನ ಮನೆ ಸುತ್ತಲೆಲ್ಲಾ ಹಸಿರು ಎದ್ದು ಕಾಣುತ್ತೆ, ಇವರ ಹತ್ರ ಇರುವ ಜಾಗ ಒಂದೂವರೆ ಎಕರೆ ಆದರೆ ಇವರು ಬೆಳೆಸಿರುವ ಮೆಡಿಸನಲ್ ಗಿಡಗಳು 3000ಕ್ಕೊ ಹೆಚ್ಚು .

Jun 18, 202307:41
S1 EP 83 ಶ್ರೇಷ್ಠವಾದ ಅಶ್ವತ್ಥ ಮರದ ಬಳಿಗೆ ರಾತ್ರಿ ಯಾಕೆ ಹೋಗ್ಬಾರ್ದು ?

S1 EP 83 ಶ್ರೇಷ್ಠವಾದ ಅಶ್ವತ್ಥ ಮರದ ಬಳಿಗೆ ರಾತ್ರಿ ಯಾಕೆ ಹೋಗ್ಬಾರ್ದು ?

ಅಶ್ವತ್ಹ್ಹಸರ್ವ ವೃಕ್ಷಾಣಾಮ್ ಅಂದರೆ ಸರ್ವ ವೃಕ್ಷಗಳಲ್ಲಿ ಶ್ರೇಷ್ಠ ಅಶ್ವತ್ಥ ಮರ ಅದೇ ಶ್ರೇಷ್ಠ ವೃಕ್ಷದ ಹತ್ತಿರ ರಾತ್ರಿ ಹೋಗ್ಬಾರ್ದ ? ಇದರ ಹಿಂದಿನ ವೈಜ್ಞಾನಿಕ ಕಾರಣವೇನು ? ಕಥೆ ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ

Jun 12, 202309:35
S1 EP 105 ಬಾಲಕಿಯರ ಆರೋಗ್ಯಕ್ಕೋಸ್ಕರ ಕೋಟ್ಯಂತರ ಆದಾಯ ತ್ಯಜಿಸಿದ ಸಾಧಕ

S1 EP 105 ಬಾಲಕಿಯರ ಆರೋಗ್ಯಕ್ಕೋಸ್ಕರ ಕೋಟ್ಯಂತರ ಆದಾಯ ತ್ಯಜಿಸಿದ ಸಾಧಕ

ಆರು ವರ್ಷದ ಬಾಲಕಿ ಋತುಮತಿ ಆಗ್ತಾಳೆ ಅನ್ನೋ ಭಯಾನಕ ಸಂಗತಿ ಕೇಳಿದ ಇವರು ತಮ್ಮ ಕೋಟಿಗಟ್ಟಲೆ ಆದಾಯ ಬಿಟ್ಟು ಅಮೆರಿಕದಿಂದ ಭಾರತಕ್ಕೆ ಮರಳಿ ಸಿರಿಧಾನ್ಯಗಳ ಕೃಷಿ ಮಾಡಿ ಸಾಧನೆಯ ಪದ್ಮವಾಗಿದ್ದಾರೆ ಯಾರಿವರು ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ

Jun 11, 202309:08
S1 EP 82 ಅದೃಷ್ಟಕ್ಕಾಗಿ ಮೊಸರು ತಿನ್ಬೇಕೆ ? | Eat Yogurt for Luck?

S1 EP 82 ಅದೃಷ್ಟಕ್ಕಾಗಿ ಮೊಸರು ತಿನ್ಬೇಕೆ ? | Eat Yogurt for Luck?

ಯಾವುದೇ ಶುಭಕಾರ್ಯಕ್ಕಾಗಿ ಮನೆಯಿಂದ ಹೊರಗೆ ಹೋಗೋವಾಗ ಮೊಸರು ಸಕ್ಕರೆ ತಿನ್ಬೇಕು ಅದು ಒಳ್ಳೇದು ಅಂತ ವಯಸ್ಸಾದವರು ಹೇಳ್ತಾರೆ , ಇದು ತುಂಬಾ ವರ್ಷಗಳಿಂದ ನಡೆದುಕೊಂಡು ಬಂದ ನಂಬಿಕೆ ! ಇದರ ಹಿಂದಿನ scientific meaning ಏನು ?

Jun 05, 202309:43
S1 EP 104 45ಕ್ಕೊ ಹೆಚ್ಚು ಸ್ಥಳೀಯ ಬತ್ತದ ತಳಿಗಳನ್ನ ಉಳಿಸಿ ಬೆಳೆಸುತ್ತಿರುವ ರೈತ ನೆಲ್ಲಚ್ಚನ್ ರಾಮನ್ | Farmer Nellachchan Raman is saving and cultivating more than 45 local varieties of rice

S1 EP 104 45ಕ್ಕೊ ಹೆಚ್ಚು ಸ್ಥಳೀಯ ಬತ್ತದ ತಳಿಗಳನ್ನ ಉಳಿಸಿ ಬೆಳೆಸುತ್ತಿರುವ ರೈತ ನೆಲ್ಲಚ್ಚನ್ ರಾಮನ್ | Farmer Nellachchan Raman is saving and cultivating more than 45 local varieties of rice

ಭೂಮಿಯಮೇಲಿನ ಅರ್ಧದಷ್ಟು ಜನ ಅಕ್ಕಿಯನ್ನೇ ತಮ್ಮ ಆಹಾರವನ್ನಾಗಿಸಿದ್ದಾರೆ ಇದು ನಮಗೆಲ್ಲರಿಗೂ ತಿಳಿದಿರುವ ವಿಚಾರ, ಆದರೆ ಇನ್ನೊಂದು ಶಾಕಿಂಗ್ ಸಂಗತಿ ಎಂದರೆ.. ಬತ್ತದ ತಳಿಗಳು ಭಾರತದಲ್ಲಿ ಅತೀ ವೇಗವಾಗಿ ಕ್ಷೀಣಿಸುತ್ತಿವೆ ಭಾರತ ಒಂದು ಲಕ್ಷ ಸ್ಥಳೀಯ ಬತ್ತದ ತಳಿಗಳನ್ನ ಹೊಂದಿದ್ದ ದೇಶ ಆದ್ರೆ ಈಗ ..

Jun 04, 202308:41
S1EP 81 ಸಂಜೆ ಹೊತ್ತಲ್ಲಿ ಯಾಕೆ ಉಗುರು ತೆಗಿಬಾರ್ದು ?

S1EP 81 ಸಂಜೆ ಹೊತ್ತಲ್ಲಿ ಯಾಕೆ ಉಗುರು ತೆಗಿಬಾರ್ದು ?

ಮನೆಯಲ್ಲಿ ಹಿರಿಯರು ಕೆಲವೊಂದು ನಮ್ಮ ನಿತ್ಯದ ಕಾರ್ಯಗಳನ್ನ ಇಂತಹ ಟೈಮೆಲ್ಲಿ ಮಾಡ್ಬಾರ್ದು ಅಂತ ಕಟ್ಟುಪಾಡು ಮಾಡ್ತಾರೆ.. ಇಂದಿನ ಆಧುನಿಕ ಯುಗದಲ್ಲಿ ಇದನ್ನೆಲ್ಲಾ ನಂಬಿದೋರು ಯಾರು ಇಲ್ಲದೆ ಇದ್ರೂ ಕೆಲವೊಂದು ಆಚಾರಗಳನ್ನ ಪಾಲಿಸೋದರ ಹಿಂದೆ ವೈಜ್ಞಾನಿಕ ಕಾರಣಗಳಿರ್ತಾವೆ.. ನಾವು ರಾತ್ರಿ ಉಗುರು ಕತ್ತರಿಸೋಕೆ ಹೋದಾಗ ಅಮ್ಮನೋ ಅಥವಾ ಅಜ್ಜಿನೋ ಗ್ಯಾರೆಂಟೀ ಕ್ಲಾಸ್ ತೆಗೊಂಡಿರ್ತಾರೆ ಸೂರ್ಯಾಸ್ತದ ಉಗುರು ತೆಗಿಬಾರ್ದು ಅನ್ನೋದು ಸಾಮಾನ್ಯ ! ಆದ್ರೆ ಯಾಕೆ ? ಕೇಳಿ..

May 29, 202309:07
S1 EP 103 ಅದೆಷ್ಟೋ ಅನಾಥರಿಗೆ ತಾಯಿಯಾಗಿ ಬದುಕನ್ನ ಕಟ್ಟಿಕೊಟ್ಟವರ ಕತೆ

S1 EP 103 ಅದೆಷ್ಟೋ ಅನಾಥರಿಗೆ ತಾಯಿಯಾಗಿ ಬದುಕನ್ನ ಕಟ್ಟಿಕೊಟ್ಟವರ ಕತೆ

ಸಮಾಜದಿಂದ ಬೆಳೆಯುವ ನಾವು ಸಮಾಜದಿಂದಾನೆ ಉನ್ನತಮಟ್ಟಕ್ಕೆ ಏರಿದಾಗ.. ಮತ್ತೆ ಸಮಾಜದ ಋಣ ತೀರಿಸಬೇಕಾಗುತ್ತೆ .. ಈ ಮಹತ್ತರ ಕಾರ್ಯವನ್ನ ಮಾಡಿದವ್ರು ನಮ್ಮ ಸಮಾಜದಲ್ಲಿ ಅನೇಕರಿರಬಹುದು ಆದರೆ ಆದನ್ನೇ ನಿಸ್ವಾರ್ಥವಾಗಿ ಮಾಡೋರು ಬೆರಳೆಣಿಕೆಯಷ್ಟು ಜನ ಮಾತ್ರ.

May 28, 202308:24
S1 EP 80 ವಾಹನಗಳಲ್ಲಿ ನಿಂಬೆ ಮೆಣಸು ಕಟ್ಟೋದ್ಯಾಕೆ ?

S1 EP 80 ವಾಹನಗಳಲ್ಲಿ ನಿಂಬೆ ಮೆಣಸು ಕಟ್ಟೋದ್ಯಾಕೆ ?

ನಾವು ಸಾಮನ್ಯವಾಗಿ ವಾಹನದಲ್ಲಿ ಒಂದು ನಿಂಬೆ ಹಾಗು ಮೂರ್ನಾಲ್ಕು ಮೆಣಸಿನಕಾಯಿ ಕಟ್ಟಿರುವುದನ್ನ ನೋಡಿರ್ತೀವಿ ಅದನ್ನ ಯಾಕೆ ಬಳಸ್ತಾರೆ ಅದರ ಹಿಂದಿನ ಸೀಕ್ರೆಟ್ ಏನು ಗೊತ್ತಾ? ಈ ಆಚರಣೆ ನಂಬಿಕೆಗಳ ಹಿಂದೆ ಇರುವ ವೈಜ್ಞಾನಿಕ ಕಾರಣವೇನು ? ಕೇಳಿ..

May 22, 202310:18